Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ರಕ್ತದಾನ ಇನ್ನೊಂದು ಜೀವಿಯ ಬದುಕಿಗೆ ವರದಾನ

ಜೋಡಿ ಚುಕ್ಕಿಗಳಂತೆ ಜೋಡಿ ಹಕ್ಕಿಗಳಾಗುವಾ

ಉದಯರಶ್ಮಿ ಇಂದಿನ ದಿನಪತ್ರಿಕೆ ಜೂನ್ 13, 2026

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಏ.೧೯-೨೦ ರಂದು ಬಸವ ಜಯಂತಿ ಅರ್ಥಪೂರ್ಣ ಆಚರಣೆಗೆ ನಿರ್ಧಾರ
(ರಾಜ್ಯ ) ಜಿಲ್ಲೆ

ಏ.೧೯-೨೦ ರಂದು ಬಸವ ಜಯಂತಿ ಅರ್ಥಪೂರ್ಣ ಆಚರಣೆಗೆ ನಿರ್ಧಾರ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ವಿಜಯಪುರದಲ್ಲಿ ಬಸವ ಜಯಂತಿ ಉತ್ಸವ ಸಮಿತಿ ಪ್ರಮುಖರಿಂದ ಸುದ್ದಿಗೋಷ್ಟಿ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಇದೇ ೧೯ ರಿಂದ ಎರಡು ದಿನಗಳ ಕಾಲ ಜಿಲ್ಲಾಡಳಿತ ಹಾಗೂ ಬಸವ ಜಯಂತಿ ಉತ್ಸವ ಸಮಿತಿ ವತಿಯಿಂದ ಬಸವ ಜಯಂತಿ ಉತ್ಸವ-೨೦೨೬ ಅರ್ಥಪೂರ್ಣ ಆಚರಣೆಗೆ ನಿರ್ಧರಿಸಲಾಗಿದೆ ಎಂದು ಬಸವ ಜಯಂತಿ ಉತ್ಸವ ಸಮಿತಿ ಪ್ರಮುಖ ವಿ.ಸಿ. ನಾಗಠಾಣ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರಣೆ ನೀಡಿದ ಅವರು, ದಿ.೧೯ ರಂದು ಬೆಳಿಗ್ಗೆ ಮಕ್ಕಳಿಂದ ವಚನ ಕಂಠಪಾಠ, ಬಸವಾದಿ ಶರಣರ ಕುರಿತಾದ ಮಕ್ಕಳ ಕವನಗೋಷ್ಠಿ ನಡೆಯಲಿದೆ, ನಂತರ ಯುವ ಕವಿಗೋಷ್ಠಿ ನಡೆಯಲಿದೆ. ಮಧ್ಯಾಹ್ನ ಪ್ರಧಾನ ಕಾರ್ಯಕ್ರಮ ನಡೆಯಲಿದ್ದು, ಅದೇ ದಿನ ಸಂಜೆ ೬ ರಿಂದ ೯.೩೦ ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಭಗವಂತನ ಮರಣ ಎಂಬ ಸಾಮಾಜಿಕ ಸಂದೇಶವುಳ್ಳ ನಾಟಕ ಪ್ರದರ್ಶನ ನಡೆಯಲಿದೆ. ಚಿಕ್ಕಮಕ್ಕಳಾದಿಯಾಗಿ ಪ್ರತಿಯೊಬ್ಬರನ್ನು ಒಳಗೊಂಡು ಅದರಲ್ಲೂ ಮಕ್ಕಳಲ್ಲಿ ಬಾಲ್ಯದಲ್ಲಿಯೇ ಬಸವ ಪ್ರಜ್ಞೆ ಮೂಡಿಸುವುದಕ್ಕಾಗಿ ಹೆಚ್ಚಿನ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದರು.
ದಿ.೨೦ ರಂದು ಸಹ ವಿಭಿನ್ನ ಕಾರ್ಯಕ್ರಮಗಳು ಜರುಗಲಿವೆ, ಅಂದು ಬಸವನ ಬಾಗೇವಾಡಿಯಿಂದ ಮ್ಯಾರಾಥಾನ್ ಮೂಲಕ ಬಸವ ಜ್ಯೋತಿ ವಿಜಯಪುರ ತಲುಪಲಿದೆ. ನಂತರ ಕಾಯಕಯೋಗಿ ಗ್ರಾಮೀಣ ಶಿಕ್ಷಣ ಸಂಸ್ಥೆಯ ಮಕ್ಕಳಿಂದ ಯೋಗ ಹಾಗೂ ಮಲ್ಲಗಂಬ ಪ್ರದರ್ಶನ ನಡೆಯಲಿದ್ದು, ನಂತರ ಬಹುಭಾಷಾ ಕವಿಗೋಷ್ಠಿ ನಡೆಯಲಿದ್ದು, ದಕ್ಷಿಣ ಭಾರತದ ವಿವಿಧ ಕವಿಗಳು ಕವನ ವಾಚನ ಮಾಡಲಿದ್ದಾರೆ. ಅದೇ ದಿನ ೫೦೦ಕ್ಕೂ ಅಧಿಕ ಮಹಿಳೆಯರು ಮಧ್ಯಾಹ್ನ ೩ ಕ್ಕೆ ಪವಿತ್ರ ವಚನಗಳ ಕಟ್ಟುಗಳನ್ನು ತಲೆಯ ಮೇಲೆ ಹೊತ್ತು ಭಕ್ತಿಪೂರ್ಣ ಮೆರವಣಿಗೆಯಲ್ಲಿ ಸಾಗಲಿದ್ದಾರೆ. ಶ್ರೀ ಸಿದ್ದೇಶ್ವರ ದೇವಾಲಯದಿಂದ ಆರಂಭಗೊಳ್ಳುವ ಮೆರವಣಿಗೆ ವಿವಿಧ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ರಂಗಮಂದಿರಕ್ಕೆ ತಲುಪಲಿದೆ. ಅದೇ ದಿನ ಸಂಜೆ ಜಿಲ್ಲಾಡಳಿತ ಹಾಗೂ ಉತ್ಸವ ಸಮಿತಿ ಸಹಯೋಗದಲ್ಲಿ ಬಸವ ಜಯಂತಿ ಆಚರಣೆ ನಡೆಯಲಿದೆ, ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.
ಪ್ರಮುಖರಾದ ಸಂ.ಗು. ಸಜ್ಜನ, ಘನಶ್ಯಾಂ ತೋಸ್ನಿವಾಲ್, ಪ್ರಭುಗೌಡ ಪಾಟೀಲ, ಡಾ.ಜೆ.ಎಸ್. ಪಾಟೀಲ, ಬಸನಗೌಡ ಹರನಾಳ, ಎಸ್.ಎಚ್. ನಾಡಗೌಡ, ಡಾ.ರವಿಕುಮಾರ ಬಿರಾದಾರ, ಜಂಬುನಾಥ ಕಂಚ್ಯಾಣಿ, ವಿದ್ಯಾರಾಣಿ ತುಂಗಳ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಲಿಂಗಾಯತೇತರ ಸಾರಥ್ಯ

ಅಖಿಲ ಭಾರತ ಲಿಂಗಾಯತ ಮಹಾಸಭೆ ಬಸವ ಜಯಂತಿಯನ್ನು ಆಚರಣೆ ಮಾಡುತ್ತಾ ಬಂದಿದೆ, ಎಲ್ಲ ಸಮುದಾಯಗಳನ್ನು ಒಟ್ಟುಗೂಡಿಸಿ ಬಸವಾದಿ ಶರಣರ ಜಯಂತೋತ್ಸವ ನಡೆಯಬೇಕು, ಕೇವಲ ಮಹಾತ್ಮರನ್ನು ಆಯಾ ಸಮುದಾಯದವರಿಗೆ ಸೀಮಿತಗೊಳಿಸುವ ಕೆಲಸ ನಡೆಯುತ್ತಿರುವುದು ನೋವಿನ ಸಂಗತಿ, ಈ ಹಿನ್ನೆಲೆಯಲ್ಲಿ ಬಸವ ಜಯಂತಿ ಎಲ್ಲ ಸಮುದಾಯದವರ ಸಹಭಾಗಿತ್ವದಲ್ಲಿ ನಡೆಯಬೇಕು ಎನ್ನುವ ಕಾರಣಕ್ಕೆ ಖ್ಯಾತ ಉದ್ಯಮಿ ಘನಶ್ಯಾಮ ತೋಸ್ನಿವಾಲ್ ಅವರನ್ನು ಉತ್ಸವ ಸಮಿತಿಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಉತ್ಸವ ಸಮಿತಿ ಪ್ರಮುಖರು ವಿವರಿಸಿದರು.

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ರಕ್ತದಾನ ಇನ್ನೊಂದು ಜೀವಿಯ ಬದುಕಿಗೆ ವರದಾನ

ಜೋಡಿ ಚುಕ್ಕಿಗಳಂತೆ ಜೋಡಿ ಹಕ್ಕಿಗಳಾಗುವಾ

ಉದಯರಶ್ಮಿ ಇಂದಿನ ದಿನಪತ್ರಿಕೆ ಜೂನ್ 13, 2026

ಭಾವೈಕ್ಯತೆಯ ಸಂಗಮ ಹಜರತ ಹಾಜಿಮಸ್ತಾನ ಉರುಸ್

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ರಕ್ತದಾನ ಇನ್ನೊಂದು ಜೀವಿಯ ಬದುಕಿಗೆ ವರದಾನ
    In ವಿಶೇಷ ಲೇಖನ
  • ಜೋಡಿ ಚುಕ್ಕಿಗಳಂತೆ ಜೋಡಿ ಹಕ್ಕಿಗಳಾಗುವಾ
    In ವಿಶೇಷ ಲೇಖನ
  • ಉದಯರಶ್ಮಿ ಇಂದಿನ ದಿನಪತ್ರಿಕೆ ಜೂನ್ 13, 2026
    In ದಿನಪತ್ರಿಕೆ
  • ಭಾವೈಕ್ಯತೆಯ ಸಂಗಮ ಹಜರತ ಹಾಜಿಮಸ್ತಾನ ಉರುಸ್
    In ವಿಶೇಷ ಲೇಖನ
  • ಹಸಿವು ನೀಗಿಸುವ ಕಾರ್ಯಕ್ಕಿಂತ ಶ್ರೇಷ್ಠ ಸೇವೆ ಮತ್ತೊಂದಿಲ್ಲ :ಆಪ್ಟೆ
    In (ರಾಜ್ಯ ) ಜಿಲ್ಲೆ
  • ಬಡವರನ್ನು ನಿರಾಶ್ರಿತರನ್ನಾಗಿ ಮಾಡುವ ಹುನ್ನಾರ :ನ್ಯಾ.ಕಾಂಬಳೆ ಆಕ್ರೋಶ
    In (ರಾಜ್ಯ ) ಜಿಲ್ಲೆ
  • ನಮ್ಮ ಮಕ್ಕಳ ಆಹಾರ ಹೀಗಿರಲಿ
    In ವಿಶೇಷ ಲೇಖನ
  • ದೇಶದಲ್ಲಿ ರಾಮರಾಜ್ಯದ ಕನಸು ನನಸಾಗಬೇಕು
    In (ರಾಜ್ಯ ) ಜಿಲ್ಲೆ
  • ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನ ಅರ್ಥಪೂರ್ಣ ಆಚರಣೆ
    In (ರಾಜ್ಯ ) ಜಿಲ್ಲೆ
  • ಶಿಕ್ಷಣದಿಂದ ವಂಚಿತರಾಗುವ ಅವಕಾಶ ಕಳೆದುಕೊಳ್ಳದಿರಿ :ಉಟಗಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.