Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಮಕ್ಕಳ ಬದುಕಿನಲ್ಲಿ ಪಾಲಕರ ಆಕರ್ಷಣೆ

ಮಹಿಳೆಯರಿಂದ ನಂಜಿಕೆ ತಿನಿಸು ತಯಾರಿಕೆ ಈಗ ಬಲು ಜೋರು

ಜಾನುವಾರುಗಳ ಉಚಿತ ತಪಾಸಣೆ ಹಾಗೂ ಚಿಕಿತ್ಸೆ ಶಿಬಿರ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ನೆಮ್ಮದಿ ಜೀವನಕ್ಕೆ ಸೈ ಎನಿಸಿಕೊಂಡ ಗ್ರಾಮೀಣ ಮಹಿಳೆ ಸಾವಿತ್ರಿ
ವಿಶೇಷ ಲೇಖನ

ನೆಮ್ಮದಿ ಜೀವನಕ್ಕೆ ಸೈ ಎನಿಸಿಕೊಂಡ ಗ್ರಾಮೀಣ ಮಹಿಳೆ ಸಾವಿತ್ರಿ

By Updated:No Comments4 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಎಲ್ಪಿಜಿ ಗ್ಯಾಸ್ ಗೆ ಬೈ, ಪರಿಸರ ಸ್ನೇಹಿ ಬಯೋಗ್ಯಾಸ್ ಗೆ ಸೈ | ಗ್ಯಾಸ್ ಟ್ರಬಲ್ಲೂ ಇಲ್ಲ, ಅಡುಗೆ ಸಮಸ್ಯೆಯೂ ಇಲ್ಲ

ಲೇಖನ- ಮಿಥುನ ಬನಸೋಡೆಪ್ರ-ಶಿಕ್ಷಣಾರ್ಥಿವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆವಿಜಯಪುರ

ಉದಯರಶ್ಮಿ ದಿನಪತ್ರಿಕೆ

ವಿಜಯಪುರ: ದುಬಾರಿ ದುನಿಯಾ ಗಗನಕ್ಕೇರಿದ ಅಗತ್ಯ ದಿನಬಳಕೆಯ ವಸ್ತುಗಳು ಸಿಲಿಂಡರ್ ಬೆಲೆ ದಿನದಿಂದ ದಿನಕ್ಕೆ ಏರಿಕೆ. ಇಂತಹ ಸಂದರ್ಭದಲ್ಲಿ ಕುಟುಂಬ ನಿರ್ವಹಣೆ ತುಂಬಾ ಸವಾಲಿನ ಕೆಲಸವಾಗಿದೆ. ಆದರೆ ಇದಕ್ಕೆ ಪರ್ಯಾಯವಾಗಿ ಮಹಿಳಾ ರೈತರೊಬ್ಬರು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ “ಪರಿಸರ ಸ್ನೇಹಿ ಬಯೋಗ್ಯಾಸ್” ನಿರ್ಮಾಣ ಮಾಡಿಕೊಂಡು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.


ಜಿಲ್ಲೆಯ ಬಬಲೇಶ್ವರ ತಾಲೂಕಿನ ಹಲಗಣಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಶೇಗುಣಿಸಿ ಗ್ರಾಮದ ಸಾವಿತ್ರಿ ಹಣಮಂತ ಚನಾಳ ಎಂಬುವರೇ ಈ ಸಾಧನೆ ಮಾಡಿದವರು.
ಮೂಲತ: ಕೃಷಿ ಕುಟುಂಬ. ಕೃಷಿಯಲ್ಲಿ ಸಾಕಷ್ಟು ಒಲವು ಮತ್ತು ಅಭಿರುಚಿ ಹೊಂದಿದ ಇವರು, ಸರ್ಕಾರದ ಯೋಜನೆಯಡಿ ಬಯೋಗ್ಯಾಸ್ ನಿರ್ಮಾಣ ಮಾಡಿಕೊಂಡಿದ್ದಾರೆ.
ಈ ಮೊದಲು ನೆರೆ ಜಿಲ್ಲೆಯ ಸಂಬಂಧಿಕರ ತೋಟದಲ್ಲಿರುವ ಬಯೋಗ್ಯಾಸ್ ಸ್ಥಾವರ ಅನಕೂಲತೆಯ ಬಗ್ಗೆ ಪ್ರೇರಣೆಗೊಂಡು ಗ್ರಾಮ ಪಂಚಾಯತಿ ಸಹಕಾರದಿಂದ ಕಾಮಗಾರಿ ಕೈಗೊಳ್ಳಲು ಮುಂದಾಗಿದ್ದರು. ಇದೀಗ ಎಲ್ಪಿಜಿ ಗ್ಯಾಸ್ ಕೊರತೆ ಎದುರಾಗಿರುವ ಈ ಸಂದರ್ಭದಲ್ಲಿ, ಅವರ ಮನೆಗೆ ಇಂಧನದ ಯಾವುದೇ ತೊಂದರೆ ಕಾಣಿಸದಿರುವುದು ಗಮನಾರ್ಹವಾಗಿದೆ. ಯಾವುದೇ ಅಡುಗೆ ಸಮಸ್ಯೆ ಇಲ್ಲದೆ ನಿರಾಳ ಜೀವನ ನಡೆಸುತ್ತಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಅಡುಗೆಗಾಗಿ ಎಲ್ಪಿಜಿ ಗ್ಯಾಸ್ ಮೇಲಿನ ಅವಲಂಬನೆ ಹೆಚ್ಚುತ್ತಿರುವ ಸಂದರ್ಭದಲ್ಲಿ, ಗ್ಯಾಸ್ ಸರಬರಾಜಿನಲ್ಲಿ ಉಂಟಾದ ವ್ಯತ್ಯಯದಿಂದಾಗಿ ಹಲವಾರು ಕುಟುಂಬಗಳಿಗೆ ಸಮಸ್ಯೆಯ ಮಡುವಿನಲ್ಲಿ ಸಿಲುಕಿವೆ. ಆದರೆ, ಬಯೋ ಗ್ಯಾಸ್ ಘಟಕವನ್ನು ಬಳಸುತ್ತಿರುವ ಈ ಮಹಿಳೆಗೆ ಇಂತಹ ಸಮಸ್ಯೆಗಳ ಬಾಧೆಯಿಲ್ಲ. ಮನೆಯಲ್ಲೇ ಲಭ್ಯವಿರುವ ಜಾನುವಾರುಗಳ ತ್ಯಾಜ್ಯವನ್ನು ಬಳಸಿ, ನಿರಂತರವಾಗಿ ಗ್ಯಾಸ್ ಉತ್ಪಾದನೆ ಮಾಡಿಕೊಂಡು, ದೈನಂದಿನ ಅಡುಗೆ ಕಾರ್ಯಗಳನ್ನು ಸರಾಗವಾಗಿ ನಿರ್ವಹಿಸುತ್ತಿದ್ದಾರೆ.
ಗ್ರಾಮ ಪಂಚಾಯತಿ ವತಿಯಿಂದ ೨೦೨೩-೨೪ ನೇ ಸಾಲಿನಲ್ಲಿ ಬಯೋಗ್ಯಾಸ್ ನಿರ್ಮಾಣ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಕಟ್ಟಡದ ವಿನ್ಯಾಸದಿಂದ ಘಟಕವನ್ನು ಉತ್ತಮವಾದ ಸುದೀರ್ಘ ಕಾಲ ಬಾಳಿಕೆ ಬರುವಂತ ಜೈವಿಕ ಅನಿಲ ಸ್ಥಾವರ ನಿರ್ಮಾಣ ಮಾಡಿಕೊಂಡಿರುವುದು ವಿಶೇಷ. ಮಿಶ್ರಣ ಟ್ಯಾಂಕ್, ಒಳಹರಿವು, ಚೇಂಬರ್ ಡೈಜೆಸ್ಟರ್ ಮತ್ತು ಹೊರಹರಿವು ಎಂಬ ವಿಶಿಷ್ಟ ರೀತಿಯಲ್ಲಿ ಇಟ್ಟಿಗೆ ಮತ್ತು ಸಿಮೆಂಟ್ ನಿಂದ ವಿಭಾಗಗಳನ್ನಾಗಿ ಮಾಡಿ ಬಯೋಗ್ಯಾಸ್ ಘಟಕ ಸ್ಥಾಪಿಸಿದ್ದಾರೆ. ಶೇ.೬೦ ರಷ್ಟು ಫಲಾನುಭವಿ ವಂತಿಕೆಯಾದರೆ, ಸರ್ಕಾರದ ಯೋಜನೆಯಡಿ ೧೮,೯೬೦ ಗಳ ಕೂಲಿ ಮೊತ್ತದಲ್ಲಿ ೬೦ ಮಾನವ ದಿನಗಳ ಸೃಜನೆ ಮಾಡಿ ಫಲಾನುಭವಿಯ ಘಟಕ ನಿರ್ಮಾಣ ಮಾಡಲು ಸಹಾಯಧನದ ನೆರವು ದೊರೆತಿದ್ದೆ ತಡ. ಬಯೋಗ್ಯಾಸ್ ನಲ್ಲಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.
ಕಾಮಗಾರಿಯ ಪೂರ್ವ ಹಂತ: ಬಯೋ ಗ್ಯಾಸ್ ಘಟಕ ಸ್ಥಾಪನೆಗೂ ಮುನ್ನ, ಫಲಾನುಭವಿಯ ಕುಟುಂಬ ಸಂಪೂರ್ಣವಾಗಿ ಉರುವಲು ಕಟ್ಟಿಗೆಯ ಮೇಲೆಯೇ ಅವಲಂಬಿತವಾಗಿತ್ತು. ಕಟ್ಟಿಗೆ ತರಲು ಊರ ಹೊರಗೆ ಗುಡ್ಡಗಾಡು ಪ್ರದೇಶಕ್ಕೆ ದೂರ ಹೋಗಬೇಕಿತ್ತು, ಕಟ್ಟಿಗೆಯಿಂದ ಬರುವ ಹೊಗೆಯಿಂದ ಅಡುಗೆ ಮಾಡಲು ತೊಂದರೆಯಾಗುತ್ತಿತ್ತು. ಕಣ್ಣುಗಳೆಲ್ಲ ಒದ್ದೆಯಾಗಿ ಉಸಿರಾಡಲೂ ಸಮಸ್ಯೆಯಾಗುತ್ತಿತ್ತು. ಇದರಿಂದ ಅನಾರೋಗ್ಯ ಉಂಟಾಗುತ್ತಿತ್ತು. ಕಟ್ಟಿಗೆ ತರಲು ಊರ ಹೊರಗೆ ಬಯಲು ಪ್ರದೇಶಗಳಿಗೆ ಹೋಗಿ ತೆಲೆಯ ಮೇಲೆ ಹೊತ್ತುಕೊಂಡು ತುಂಬಾ ತೊಂದರೆ ಪಡುತ್ತಿದ್ದೆವು, ಕಟ್ಟಿಗೆಯಿಂದ ಬರುವ ಹೊಗೆಯಿಂದ ಅಡುಗೆ ಮಾಡಲು ತೊಂದರೆಯಾಗುತ್ತಿತ್ತು. ಕಣ್ಣುಗಳೆಲ್ಲ ಒದ್ದೆಯಾಗಿ ಉಸಿರಾಡಲೂ ಸಹ ಸಮಸ್ಯೆ. ಇದರಿಂದ ಅನಾರೋಗ್ಯ ಉಂಟಾಗುತ್ತಿತ್ತು. ಜತೆಗೆ ಸಮಯ ವ್ಯರ್ಥವಾಗುತ್ತಿತ್ತು. ಜೊತೆಗೆ, ಹಸು ಮೇವು ಹಾಗೂ ಇತರೆ ಜೈವಿಕ ತ್ಯಾಜ್ಯ ಸರಿಯಾಗಿ ಉಪಯೋಗವಾಗದೆ ಪರಿಸರ ಮಾಲಿನ್ಯ ಉಂಟಾಗುತ್ತಿತ್ತು.
ಮನೆಯಲ್ಲಿ ಸುಮಾರು ೬ ರಿಂದ ೭ ಜನರು ವಾಸವಿದ್ದು, ಅಡುಗೆಗೆ ಗ್ಯಾಸ್ ಹೆಚ್ಚಾಗಿ ಬಳಕೆಯಾಗುವುದು ಮತ್ತು ಬಲು ದುಬಾರಿಯಾದುದರಿಂದ ಒಂದು ವೇಳೆ ಗ್ಯಾಸ್ ಬಳಸುತ್ತಿದ್ದರೂ ಪ್ರತಿ ತಿಂಗಳು ೧೦೦೦ ರೂ. ಗಳ ಹಣ ಹೊಂದಾಣಿಕೆ ಮಾಡುವುದು ಅನಿವಾರ್ಯವಾಗಿತ್ತು. ಜೊತೆಗೆ ಸಮಯವೂ ಸಹ ವ್ಯರ್ಥವಾಗುತ್ತಿತ್ತು.
ಗೃಹಪಯೋಗಿ ಅಡುಗೆ ಅನಿಲ ಉತ್ಪಾದನೆ
ದನದ ಶೆಡ್ ನಲ್ಲಿರುವ ಹಸು, ಎಮ್ಮೆ ಮತ್ತು ಕರುಗಳು ಸೇರಿದಂತೆ ೧೦ ಜಾನುವಾರುಗಳಿವೆ. ಸಾಕಷ್ಟು ಸೆಗಣಿ ಲಭ್ಯವಿದ್ದು, ದಿನಾಲು ೩ ರಿಂದ ೪ ಬುಟ್ಟಿ ಸೆಗಣಿಯನ್ನು ಪ್ರತಿದಿನ ಬಯೋಗ್ಯಾಸ್ ಘಟಕಕ್ಕೆ ಬಳಕೆ ಮಾಡುತ್ತಿದ್ದು, ಘಟಕದಿಂದ ಕೊಳವೆ ಮೂಲಕ ಸಾಗಿಸಿ, ಮನೆಗೆ ಅಗತ್ಯವಿರುವ ಅನಿಲವನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದು ಹೊಗೆ ರಹಿತವಾಗಿದ್ದು, ಸರಾಸರಿ ೬ ರಿಂದ ೮ ಜನರಿಗೆ ಆಗುವಷ್ಟು ಆಹಾರ ತಯಾರಿಸಬಹುದು. ಈ ಘಟಕದಿಂದ ಬರುವ ದ್ರವರೂಪದ ತ್ಯಾಜ್ಯವನ್ನು ಜಮೀನಿನಲ್ಲಿ ಬೆಳೆದ ಕಬ್ಬು ಮತ್ತು ಇತರೆ ಕೃಷಿ ಚಟುವಟಿಕೆಗಳಿಗೆ ಉಪಯೋಗಿಸಿಕೊಳ್ಳುತ್ತಿದ್ದಾರೆ. ಇದರಿಂದ ಪರಿಸರ ರಕ್ಷಣೆ ಜೊತೆಗೆ ಹೆಚ್ಚಿನ ಇಳುವರಿಯು ಪಡೆಯುತ್ತಿದ್ದಾರೆ.
ಕಾಮಗಾರಿ ನಂತರದ ಸ್ಥಿತಿಗತಿ
ಜೈವಿಕ ಅನಿಲ ಸ್ಥಾವರ ಪರಿಸರವನ್ನು ಕಲುಷಿತಗೊಳಿಸುವುದಿಲ್ಲ. ಹೀಗಾಗಿ ಇದು ಪರಿಸರ ಸ್ನೇಹಿಯಾಗಿದೆ. ನರೇಗಾ ಯೋಜನೆಯಡಿ ಬಯೋ ಗ್ಯಾಸ್ ಘಟಕ ಸ್ಥಾಪನೆಯಾದ ನಂತರ, ಮನೆಯಲ್ಲೇ ಲಭ್ಯವಾಗುವ ಜಾನುವಾರುಗಳ ತ್ಯಾಜ್ಯದಿಂದ ನಿರಂತರವಾಗಿ ಗ್ಯಾಸ್ ಉತ್ಪಾದನೆ ಸಾಧ್ಯವಾಗಿದೆ. ಇದರಿಂದ ಅಡುಗೆ ಕೆಲಸ ಸುಲಭವಾಗಿ, ಸಮಯಕ್ಕೆ ಸರಿಯಾಗಿ ನಡೆಯುತ್ತಿದೆ. ಈಗಿನ ಪ್ರಸ್ತುತ ದಿನಗಳಲ್ಲಿ ಎಲ್ಪಿಜಿ ಕೊರತೆ ಇದ್ದರೂ ಯಾವುದೇ ಚಿಂತೆ ಇಲ್ಲದೆ ಅಡುಗೆ ಕಾರ್ಯ ನಿರ್ವಹಿಸಲಾಗುತ್ತಿದೆ. ಕುಟುಂಬದ ಖರ್ಚು ಕೂಡ ಗಣನೀಯವಾಗಿ ಕಡಿಮೆಯಾಗಿದೆ. ಫಲಾನುಭವಿ ಕುಟುಂಬದ ವಾರ್ಷಿಕ ಉಳಿತಾಯ ಸರಾಸರಿ ೧೨,೦೦೦ ರೂ. ಉಳಿತಾಯವಾಗಿದೆ. ಅಂದರೆ ಇಲ್ಲಿಯವರೆಗೂ ಸುಮಾರು ೩೬೦೦೦ ರೂ. ಗಳ ಉಳಿತಾಯವಾಗಿದೆ. ಉರುವಲು ಕಟ್ಟಿಗೆ ಚಿಂತೆಯಿಂದ ಮುಕ್ತಿ ಸಿಕ್ಕಿದೆ. ಇದು ವಾಯುಮಾಲಿನ್ಯವನ್ನು ತಡೆಯುವುದಲ್ಲದೇ ಉತ್ತಮ ನೈರ್ಮಲ್ಯ ಜೊತೆಗೆ ಅನೇಕ ಸಾಂಕ್ರಾಮಿಕ ರೋಗಗಳನ್ನೂ ಸಹ ತಡೆಗಟ್ಟಲು ಸಹಕಾರಿಯಾಗಿದೆ. ಜೊತೆಗೆ ಉತ್ತಮ ಸಾವಯುವ ಗೊಬ್ಬರ ಲಭ್ಯವಾಗುತ್ತಿದ್ದು, ಫಲಾನುಭವಿಯು ತಮ್ಮ ಜಮೀನಿನಲ್ಲಿ ಬೆಳೆಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ.
ವೈಜ್ಞಾನಿಕ ಬದಲಾವಣೆಯ ಹೆಜ್ಜೆಗಳು
ಜೈವಿಕ ತ್ಯಾಜ್ಯದ ಅನೈರೋಬಿಕ್ ವಿಲೇವಾರಿ (ಂಟಿಚಿeಡಿobiಛಿ ಜigesಣioಟಿ) ಮೂಲಕ ಸ್ವಚ್ಛ ಇಂಧನ ಉತ್ಪಾದನೆ.
ಮೀಥೇನ್ ಅನಿಲ (ಒeಣhಚಿಟಿe gಚಿs) ಉತ್ಪತ್ತಿಯಿಂದ ಪರಿಸರ ಸ್ನೇಹಿ ಅಡುಗೆ ವ್ಯವಸ್ಥೆ.
ಹೊಗೆ ರಹಿತ ಅಡುಗೆ (Smoಞeಟess ಛಿooಞiಟಿg) ಮೂಲಕ ಆರೋಗ್ಯದ ಸುಧಾರಣೆಯಾಗಿದೆ.
ಘಟಕದಿಂದ ಹೊರಬರುವ ಅವಶೇಷವನ್ನು ಉತ್ತಮ ಸಾವಯವ ಗೊಬ್ಬರವಾಗಿ ಬಳಕೆ, ಇದರಿಂದ ಮಣ್ಣಿನ ಫಲವತ್ತತೆ ಹೆಚ್ಚಳವಾಗಿದೆ. ಪರಿಸರ ಮಾಲಿನ್ಯ ಕಡಿಮೆಯಾಗಿದ್ದು, ನೈರ್ಮಲ್ಯೀಕರಣ ಉಂಟಾಗಿದೆ.
ಸರ್ಕಾರದ ಯೋಜನೆಯು ಗ್ರಾಮೀಣ ಮಹಿಳೆಯರ ಜೀವನದಲ್ಲಿ ಹೇಗೆ ಶಾಶ್ವತ ಬದಲಾವಣೆ ತರುತ್ತದೆ ಎಂಬುದಕ್ಕೆ ಈ ಮಹಿಳೆಯ ಯಶೋಗಾಥೆ ಸಾಕ್ಷಿಯಾಗಿದೆ.
ಬಯೋ ಗ್ಯಾಸ್ ಅನುಷ್ಠಾನವು ಇಂಧನ ಭದ್ರತೆ, ಆರೋಗ್ಯ ರಕ್ಷಣೆ ಹಾಗೂ ಪರಿಸರ ಸಂರಕ್ಷಣೆಗೆ ಒಟ್ಟಾಗಿ ಸಹಕಾರ ನೀಡುತ್ತಿರುವುದು ಗಮನಾರ್ಹವಾಗಿದೆ. ಈ ಮಾದರಿಯನ್ನು ಇತರ ಗ್ರಾಮಗಳಲ್ಲಿಯೂ ಅನುಸರಿಸುವುದು ಅಗತ್ಯವಾಗಿದೆ. ಈ ಕಾಮಗಾರಿಯು ಪರಿಸರ ಸ್ನೇಹಿ ಹಾಗೂ ಖರ್ಚು ಕಡಿಮೆ ಮಾಡುವ ಒಂದು ಪರಿಣಾಮಕಾರಿ ಪರ್ಯಾಯವಾಗಿದೆ. ಇದರಿಂದ ಇಂಧನ ವೆಚ್ಚ ಕಡಿಮೆಯಾಗುವುದರ ಜೊತೆಗೆ, ಅಡುಗೆಗಾಗಿ ಬೇಕಾದ ಸಮಯವೂ ಉಳಿಯುತ್ತದೆ. ಅಲ್ಲದೆ, ಘಟಕದಿಂದ ಉತ್ಪತ್ತಿಯಾಗುವ ಮಿಶ್ರಣವನ್ನು ಸಸ್ಯೋತ್ಪಾದನೆಗೆ ಸಾವಯವ ಗೊಬ್ಬರವಾಗಿ ಬಳಸಲಾಗುತ್ತಿದೆ.
ಒಟ್ಟಾರೆಯಾಗಿ, ಮನರೇಗಾ ಫಲಾನುಭವಿ ಸವಿತಾ ಹನಮಂತ ಚನಾಳರವರು ಜೈವಿಕ ಅನಿಲ ಸ್ಥಾವರದಿಂದ ಉತ್ತಮ ಪರಿಸರ ಸ್ನೇಹಿ ವಾತಾವಾರಣ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಯಶಸ್ಸು ಕಂಡಿದ್ದಾರೆ.
ಎಲ್ಪಿಜಿ ಗ್ಯಾಸ್ ಕೊರತೆಯಂತಹ ಸಂಕಷ್ಟದ ಸಂದರ್ಭದಲ್ಲೂ, ಬಯೋ ಗ್ಯಾಸ್ ಅನುಷ್ಠಾನಗೊಂಡಿರುವ ಕುಟುಂಬಗಳು ಯಾವುದೇ ಆತಂಕವಿಲ್ಲದೆ ತಮ್ಮ ದೈನಂದಿನ ಚಟುವಟಿಕೆಗಳನ್ನು ಮುಂದುವರಿಸುತ್ತಿರುವುದು ಇತರರಿಗೆ ಮಾದರಿಯಾಗಿದೆ.

ಫಲಾನುಭವಿಯ ಅನಿಸಿಕೆ
“ನರೇಗಾ ಯೋಜನೆಯಡಿ ನಮ್ಮ ಗ್ರಾಮ ಪಂಚಾಯಿತಿಯಿಂದ ನನಗೆ ಬಯೋ ಗ್ಯಾಸ್ ಘಟಕ ದೊರೆತಿದ್ದು ತುಂಬಾ ಉಪಯುಕ್ತವಾಗಿದೆ. ಮೊದಲು ನಾವು ಉರುವಲು ಕಟ್ಟಿಗೆಯನ್ನು ಬಳಸಿ ಅಡುಗೆ ಮಾಡುತ್ತಿದ್ದೆವು. ಕಟ್ಟಿಗೆ ತರಲು ಊರ ಹೊರಗೆ ದೂರ ಹೋಗಬೇಕಿತ್ತು, ತುಂಬಾ ತೊಂದರೆ ಪಡುತ್ತಿದ್ದೆವು, ಕಟ್ಟಿಗೆಯಿಂದ ಬರುವ ಹೊಗೆಯಿಂದ ಅಡುಗೆ ಮಾಡಲು ತೊಂದರೆಯಾಗುತ್ತಿತ್ತು. ಕಣ್ಣುಗಳೆಲ್ಲ ಒದ್ದೆಯಾಗಿ ಉಸಿರಾಡಲೂ ಸಮಸ್ಯೆಯಾಗುತ್ತಿತ್ತು. ಇದರಿಂದ ಅನಾರೋಗ್ಯ ಉಂಟಾಗುತ್ತಿತ್ತು. ಆದರೆ ಈಗ ಬಯೋ ಗ್ಯಾಸ್ ಇರುವುದರಿಂದ ಯಾವುದೇ ಚಿಂತೆ ಇಲ್ಲ. ನಮ್ಮ ಮನೆಯಲ್ಲೇ ಲಭ್ಯವಾಗುವ ಹಸುಮೇವು ಮತ್ತು ಜೈವಿಕ ತ್ಯಾಜ್ಯದಿಂದಲೇ ಗ್ಯಾಸ್ ತಯಾರಾಗುತ್ತಿರುವುದರಿಂದ ಅಡುಗೆ ಕೆಲಸ ಸುಲಭವಾಗಿದೆ. ಖರ್ಚು ಕೂಡ ಬಹಳಷ್ಟು ಕಡಿಮೆಯಾಗಿದೆ. ಸುಮಾರು ೪೦,೦೦೦ ರೂ. ಗಳಷ್ಟು ಉಳಿತಾಯವಾಗಿದೆ. ಇನ್ನೂ ವಿಶೇಷವಾಗಿ, ಪ್ರಸ್ತುತ ಈಗ ಎಲ್ಪಿಜಿ ಕೊರತೆ ಇದ್ದರೂ ನಮ್ಮ ಮನೆಗೆ ಯಾವುದೇ ಸಮಸ್ಯೆ ಆಗಿಲ್ಲ. ಈ ಯೋಜನೆಯಿಂದ ನಾವು ಸ್ವಾವಲಂಬಿಗಳಾಗಿರುವ ಸಂತಸ ಕಂಡಿದ್ದೇವೆ. ಒಲೆಯ ಮೇಲೆ ಯಾವುದೇ ತೊಂದರೆ ಇಲ್ಲದೇ ನಾನಾ ರೀತಿಯ ಅಡುಗೆ ಮಾಡಿ ಸಂತಸದಿಂದ ಊಟ ಮಾಡುತ್ತೇವೆ. ಗ್ಯಾಸ್ ಖಾಲಿ ಆಗ್ಯೇದ ಎಂಬ ಚಿಂತೆನೇ ಇಲ್ಲ, ಅತ್ಯಂತ ಸಂತಸದಿಂದ ಮತ್ತು ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದೇವೆ. ಗ್ರಾಮದಲ್ಲಿನ ಇತರ ಮಹಿಳೆಯರೂ ಈ ಯೋಜನೆಯನ್ನು ಬಳಸಿಕೊಳ್ಳಬೇಕು ಎಂದು ಆಶಿಸುತ್ತೇನೆ.”

– ಶ್ರೀಮತಿ ಸವಿತಾ ಚನಾಳ
ಫಲಾನುಭವಿ
ಶೇಗುಣಿಸಿ ಗ್ರಾಮ, ಬಬಲೇಶ್ವರ ತಾಲೂಕು.

BIJAPUR NEWS bjp congress patil public public news udaya rashmi Udayarashmi today newspaper
Share. Facebook Twitter Pinterest Email Telegram WhatsApp
  • Website

Related Posts

ಮಕ್ಕಳ ಬದುಕಿನಲ್ಲಿ ಪಾಲಕರ ಆಕರ್ಷಣೆ

ಮಹಿಳೆಯರಿಂದ ನಂಜಿಕೆ ತಿನಿಸು ತಯಾರಿಕೆ ಈಗ ಬಲು ಜೋರು

ಜಾನುವಾರುಗಳ ಉಚಿತ ತಪಾಸಣೆ ಹಾಗೂ ಚಿಕಿತ್ಸೆ ಶಿಬಿರ

ದುಡಿದು ತಿನ್ನದವರು ಗಂಡಸರಲ್ಲ :ದಿಂಗಾಲೇಶ್ವರ ಶ್ರೀ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಮಕ್ಕಳ ಬದುಕಿನಲ್ಲಿ ಪಾಲಕರ ಆಕರ್ಷಣೆ
    In ವಿಶೇಷ ಲೇಖನ
  • ಮಹಿಳೆಯರಿಂದ ನಂಜಿಕೆ ತಿನಿಸು ತಯಾರಿಕೆ ಈಗ ಬಲು ಜೋರು
    In (ರಾಜ್ಯ ) ಜಿಲ್ಲೆ
  • ಜಾನುವಾರುಗಳ ಉಚಿತ ತಪಾಸಣೆ ಹಾಗೂ ಚಿಕಿತ್ಸೆ ಶಿಬಿರ
    In (ರಾಜ್ಯ ) ಜಿಲ್ಲೆ
  • ದುಡಿದು ತಿನ್ನದವರು ಗಂಡಸರಲ್ಲ :ದಿಂಗಾಲೇಶ್ವರ ಶ್ರೀ
    In (ರಾಜ್ಯ ) ಜಿಲ್ಲೆ
  • ಅಂತರಂಗದ ಅರಿವು ಜಾಗೃತಗೊಳಿಸುವ ಪ್ರಕ್ರಿಯೆ ಲಿಂಗದೀಕ್ಷೆ
    In (ರಾಜ್ಯ ) ಜಿಲ್ಲೆ
  • ಡಾ.ಅಂಬೇಡ್ಕರ್ ಜಯಂತಿಯಲ್ಲಿ ಅಧಿಕಾರಿಗಳು ಕಡ್ಡಾಯವಾಗಿ ಪಾಲ್ಗೊಳ್ಳಿ
    In (ರಾಜ್ಯ ) ಜಿಲ್ಲೆ
  • ದೇವರಹಿಪ್ಪರಗಿ ಮಡಿವಾಳ ಮಾಚಿದೇವರ ರಥೋತ್ಸವ ಸಂಪನ್ನ
    In (ರಾಜ್ಯ ) ಜಿಲ್ಲೆ
  • ಅಲ್ಪ ಸಂಖ್ಯಾತರ ಆಯೋಗದ ಅಧ್ಯಕ್ಷರ ಜಿಲ್ಲಾ ಪ್ರವಾಸ
    In (ರಾಜ್ಯ ) ಜಿಲ್ಲೆ
  • ಮಾ.೩೦ರಂದು ಭಗವಾನ್ ಶ್ರೀ ಮಹಾವೀರ ಜಯಂತಿ
    In (ರಾಜ್ಯ ) ಜಿಲ್ಲೆ
  • ಎಇಇ ಮೇಲೆ ಶಿಸ್ತುಕ್ರಮಕ್ಕೆ ದಲಿತ ಸ್ವರಾಜ್ಯ ಸೇನೆ ಆಗ್ರಹಿಸಿ ಮನವಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.