ಬಿ.ಎಲ್.ಡಿ.ಇ ಸಂಸ್ಥೆಯ ಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಹಳೆಯ ವಿದ್ಯಾರ್ಥಿ ಸಮಾವೇಶ ಕಾರ್ಯಕ್ರಮ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಮ್ಮ ಮಹಾವಿದ್ಯಾಲಯಕ್ಕೆ ಹಳೆ ವಿದ್ಯಾರ್ಥಿಗಳ ಕೊಡುಗೆ ಅಪಾರವಾದ್ದು, ಅದರಂತೆ ನಮಗೆ ನಿಮ್ಮ ಮುಕ್ತವಾದ ಪ್ರತಿಕ್ರಿಯೆ ನಮಗೆ ಮಹತ್ವದ್ದು ಎಂದು ಪ್ರಾಚಾರ್ಯೆ ಡಾ.ಆರ್.ಎಂ ಮಿರ್ಧೆ ಹೇಳಿದರು
ನಗರದ ಬಿ ಎಲ್ ಡಿ ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆ ಸಿ ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ, ಹಳೆಯ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ಮಾರ್ಚ-೧೭ ರಂದು ಹಳೆಯ ವಿದ್ಯಾರ್ಥಿ ಸಮಾವೇಶ ಕಾರ್ಯಕ್ರಮ ಆಯೋಜಿಸಲಾಯಿತು.
ಈ ವೇಳೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ನಮ್ಮ ಮಹಾವಿದ್ಯಾಲಯಕ್ಕೆ ಹಳೆ ವಿದ್ಯಾರ್ಥಿಗಳ ಕೊಡುಗೆ ಅಪಾರವಾದ್ದು ಅದರಂತೆ ನಿಮ್ಮ ಪ್ರತಿಕ್ರಿಯೆ ನಮಗೆ ಮಹತ್ವದ್ದು, ನಮ್ಮ ಮಹಾವಿದ್ಯಾಲಯದದಿಂದ ಹಲವಾರು ವಿದ್ಯಾರ್ಥಿಗಳು ಉನ್ನತ ಹುದ್ದೆಗೆ ತಲುಪಿದ್ದಾರೆ. ನಿಮಗೆ ನೀಡಿರುವ ಶಿಕ್ಷಣ ನಿಮ್ಮ ವೃತ್ತಿ ಜೀವನಕ್ಕೆ ನಾಂದಿಯಾದ ಕಾಲೇಜಿನ ಬಗ್ಗೆ ನಿಮ್ಮ ಅನುಭವಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಇದೊಂದು ಸುವರ್ಣ ಅವಕಾಶ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಮಹಾವಿದ್ಯಾಲಯದ ಸರ್ವತೋಮುಖ ಬೆಳವಣಿಗೆಗೆ ಕಾರಣಿಕರ್ತರಾದ ಹಳೆಯ ವಿದ್ಯಾರ್ಥಿಗಳ ಸಂಘವು ಶ್ರಮಿಸಿತ್ತಿದ್ದು, ಆ ನಿಟ್ಟಿನಲ್ಲಿ ನಮ್ಮ ಮಹಾವಿದ್ಯಾಲಯದ ಬೆಳವಣಿಗೆಗೆ ಸಹಾಯ ಸಹಕಾರ ಅಗತ್ಯ, ಅಲ್ಲದೆ ಕಾಲೇಜಿನೊಂದಿಗೆ ಮುಕ್ತವಾದ ಸಂಪರ್ಕ ಅವಕಾಶವಿದೆ ಎಂದರು.
ನಮ್ಮ ಮಹಾವಿದ್ಯಾಲಯದಲ್ಲಿ ಹಳೆಯ ವಿದ್ಯಾರ್ಥಿಗಳಿಂದ ಕೊಡುಗೆಯಿಂದ ಹಲವಾರು ಅಭಿವೃದ್ದಿ ಕಾರ್ಯಗಳಾಗಿದೆ ಎಂದು ಸ್ಮರಿಸಿದರು.
ಈ ವೇಳೆಯಲ್ಲಿ ಹಳೆಯ ವಿದ್ಯಾರ್ಥಿ ಸಂಘದ ಕೋಶಾಧಿಕಾರಿ ಪ್ರೊ.ಆರ್.ಹೆಚ್.ಬಿದರಿ ಮಾತನಾಡಿ ಹಳೆಯ ವಿದ್ಯಾರ್ಥಿಗಳ ಸಂಘದ ಖಜಾಂಚಿಯಾಗಿ ತಮ್ಮ ಅನುಭವ್ಳನ್ನು ಬಿಚ್ಚಿಟ್ಟರು.ಸತತ ೧೫ ವರ್ಷಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು,ವಿಚಾರ ಸಂಕಿರಣಗಳನ್ನು ಆಯೋಜಿಸಲಾಗಿದೆ. ಹಳೆಯ ಕ್ಯಾಂಪಸ್‌ನಲ್ಲಿ ನಾವು ಹಲವಾರು ಮೂಲಸೌಕರ್ಯಗಳನ್ನು ರಚಿಸಿದ್ದೇವೆ ಎಂದರು. ಅದರಂತೆ ಹೊಸ ಕ್ಯಾಂಪಸ್ ನಲ್ಲಿಯೂ ಅಭಿವೃದ್ದಿ ಕಾರ್ಯ ಮಾಡಲಾಗಿದೆ.ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ದಿಗೆ ಹಳೆಯ ವಿದ್ಯಾರ್ಥಿ ಬದ್ದವಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಳೆಯ ವಿದ್ಯಾರ್ಥಿಗಳು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.
ಈ ವೇಳೆಯಲ್ಲಿ ಜೀ ಕನ್ನಡ ಸರಿಗಮಪ ಸೀಸನ್ -೨೦ ಖ್ಯಾತಿಯ ಕುಮಾರಿ.ಸಾಕ್ಷಿ ಹಿರೇಮಠ ಮತ್ತು ಟಾಪ್ ಫೈವ್ ಸ್ಟಾರ್ ಹೋಟೆಲ್ ಗಾಯಕ ಕು.ಝಾಕೀರ್ ಹುಸೇನ್ ಅವರಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಯಿತು.
ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಉಪ ಪ್ರಾಚಾರ್ಯ ಡಾ.ಅನಿಲ್ ಭೀ.ನಾಯಕ, ಐಕ್ಯೂಎಸಿ ಸಂಯೋಜಕರು ಡಾ.ಪಿ.ಎಸ್.ಪಾಟೀಲ, ಡಾ.ಪ್ರದೀಪ್ ಚವಾಣ್, ನಿವೃತ್ತ ಪ್ರಾಚಾರ್ಯ ಡಾ.ಯು.ಎಸ್.ಪೂಜೇರಿ, ಡಾ.ಎಸ್.ಟಿ.ಮೇರವಾಡೆ, ಪ್ರೊ.ಜಿ.ಆರ್.ಅಂಬಲಿ, ಪ್ರೊ.ಬಿ.ಎಸ್.ಬಗಲಿ, ನ್ಯಾಕ್ ಸಂಯೋಜಕ ಡಾ.ಮಹೇಶ ಕುಮಾರ ಕೆ, ಮಹಾವಿದ್ಯಾಯದ ಇನ್ನಿತರ ಬೋಧಕ, ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಡಾ.ಧಾನೇಶ್ವರಿ.ಮೂಲಿಮನಿ, ಪ್ರೊ.ಸೌಮ್ಯ.ಸಜ್ಜನ್ ಕಾರ್ಯಕ್ರಮ ನಿರ್ವಹಿಸಿದರು.

