Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಮಹಿಳಾ ಸಂಪಾದಕತ್ವದ ದಿನಪತ್ರಿಕೆಗಳಿಗೆ ಜಾಹೀರಾತಿಗೆ ಮನವಿ

ಶ್ರೀ ಯಲಗೂರೇಶನ ಅದ್ದೂರಿ ಕಾರ್ತಿಕೋತ್ಸವ ಫೆ.7 ರಿಂದ ಪ್ರಾರಂಭ.

ಕಾಲುವೆಯಲ್ಲಿ ಬಿದ್ದು ವ್ಯಕ್ತಿ ಸಾವು

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಮನೆಯೇ ಮೊದಲ ಪಾಠಶಾಲೆ..
ವಿಶೇಷ ಲೇಖನ

ಮನೆಯೇ ಮೊದಲ ಪಾಠಶಾಲೆ..

By Updated:No Comments3 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಭಾವರಶ್ಮಿ

ಲೇಖನ
– ಮಲಪ್ಪ. ಸಿ. ಖೊದ್ನಾಪೂರ (ತಿಕೋಟಾ)
ವಿಜಯಪುರ ಜಿಲ್ಲೆ

ಉದಯರಶ್ಮಿ ದಿನಪತ್ರಿಕೆ

ಶಿಕ್ಷಣತಜ್ಞ ಮಿಚ್ ಅಲಬೊಮ್ ಅವರು “ಃehiಟಿಜ ಚಿಟಟ ಥಿouಡಿ sಣoಡಿies is ಚಿಟತಿಚಿಥಿs ಥಿouಡಿ moಣheಡಿ’s sಣoಡಿಥಿ, beಛಿಚಿuse heಡಿs is ತಿheಡಿe ಥಿouಡಿs begiಟಿs” ಎಂದು ಹೇಳಿದ್ದಾರೆ. ಮನೆಯೇ ಮೊದಲ ಪಾಠಶಾಲೆ. ಜನನಿಯೇ ಮೊದಲ ಗುರು ಎಂಬುದು ಜಗತ್ತಿನ ಅತಿ ದೊಡ್ಡ ಸತ್ಯ. ಬಾಲ್ಯದಲ್ಲಿ ಮಗು ಸಂಸ್ಕಾರ, ಸಂಸ್ಕೃತಿ, ನೈತಿಕತೆ ಮತ್ತು ಬದುಕಿನ ಪಾಠಗಳನ್ನು ತಾಯಿಯಿಂದ ಮನೆಯಲ್ಲಿ ಕಲಿಯುತ್ತದೆ. ತಾಯಿಯ ಪ್ರೀತಿ ಮತ್ತು ಮಾರ್ಗದರ್ಶನ ಆ ಮಗುವಿನ ಮುಂದಿನ ಜೀವನಕ್ಕೆ ಅಡಿಪಾಯ. ಅದಕ್ಕಂತಲೇ ಹಿರಿಯರು “ಪುಸ್ತಕದ ಪಾಠ ಶಾಲೆಗೆ, ಬದುಕಿನ ಪಾಠ ಮನೆಗೆ” ಎಂದು ಹೇಳಿರುವುದು ಖಂಡಿತ ನಿಜ. ಮಗುವಿನ ಸರ್ವಾಂಗೀಣ ಬೆಳವಣಿಗೆಯಲ್ಲಿ ತಾಯಿ ಮತ್ತು ಮನೆಯ ಪಾತ್ರವನ್ನು ಎತ್ತಿ ತೋರಿಸುತ್ತದೆ. ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಕೇವಲ ಜ್ಞಾನ ಸಂಪಾದನೆ, ಗರಿಷ್ಠ ಅಂಕದೊಂದಿಗೆ ಪದವಿ ಮತ್ತು ಜೀವನೋಪಾಯಕ್ಕೊಂದು ಉದ್ಯೋಗಕ್ಕಾಗಿ ಶಿಕ್ಷಣ ಎಂಬಂತಾಗಿದೆ. ವಿದ್ಯಾರ್ಥಿಯ ಸರ್ವಾಂಗೀಣ ವಿಕಾಸ ಕೇವಲ ಪಠ್ಯ ವಿಷಯ ಜ್ಞಾನದಿಂದ ಮಾತ್ರ ಆಗಲಾರದು.
ಮಕ್ಕಳ ಜೀವನ ಅಂದರೆ ಶಾಲೆ, ಟ್ಯೂಷನ್, ಹೋಂ ವರ್ಕ, ಪರೀಕ್ಷೆ, ಅಂಕ ಗಳಿಕೆಗೆ ಮಾತ್ರ ಸೀಮೀತವಾಗಬಾರದು. ಮಕ್ಕಳಲ್ಲಿ ಜ್ಞಾನ ಮತ್ತು ಬೌದ್ಧಿಕ ಬೆಳವಣಿಗೆ ಜತೆಗೆ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಸಹಾಯಕವಾಗಬೇಕು. ಬದುಕುವ ಕಲೆ-ಕೌಶಲ್ಯಗಳನ್ನು ಒಡಮೂಡಿಸುವಂತಿರಬೇಕು. ಸ್ವಯಂ ಆಲೋಚನಾ ಶಕ್ತಿ ಮತ್ತು ಸಮಸ್ಯೆಗಳನ್ನು ಎದುರಿಸುವ ಆತ್ಮಸ್ಥೈರ್ಯವನ್ನು ಬೆಳೆಸುತ್ತಾ, ಉತ್ತಮ ನಾಗರೀಕರನ್ನಾಗಿ ರೂಪುಗೊಂಡು ಅವರು ರಾಷ್ಟçಕ್ಕೆ ಕೊಡುಗೆ ನೀಡುವಂತೆ ಪ್ರೇರೇಪಿಸುವುದೇ ಶಿಕ್ಷಣದ ನಿಜವಾಗಿ ಗುರಿಯಾಗಬೇಕು. ಆದರೆ ದುರಾದೃಷ್ಠವೆಂದರೆ ‘ಉದ್ಯೋಗಕ್ಕಾಗಿ ಶಿಕ್ಷಣ’ ಎನ್ನುವ ಇಂದಿನ ಶಿಕ್ಷಣ ವ್ಯವಸ್ಥೆಯಿಂದ ಇಂದಿನ ಮಕ್ಕಳಲ್ಲಿ ಜೀವನ ಮೌಲ್ಯ, ಮಾನವೀಯ ಸಂಬಂಧಗಳು, ನೈತಿಕ-ಮೌಲ್ವಿಕ ಮತ್ತು ಬದುಕುವ ಕಲೆ ಕ್ಷೀಣವಾಗುತ್ತಿರುವದು ವಿಷಾದನೀಯ ಸಂಗತಿ.
ಮೌಲ್ಯಗಳ ಪಾಠ ಮನೆಯಿಂದಲೇ ಆರಂಭವಾಗಬೇಕು


“ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು” ಎನ್ನುವಂತೆ, ಸಂಸ್ಕೃತಿ-ಸಂಸ್ಕಾರ, ನೈತಿಕತೆ, ಆಚಾರ-ವಿಚಾರ, ಜೀವನ ಮೌಲ್ಯಗಳ ಬಗ್ಗೆ ಕುಟುಂಬದಲ್ಲಿಯೇ ತಂದೆ-ತಾಯಿಯರು ಮಕ್ಕಳಿಗೆ ತಿಳಿಸಿಕೊಟ್ಟು ಆ ಮಕ್ಕಳು ಬದುಕಿನಲ್ಲಿ ಅಳವಡಿಸಿಕೊಳ್ಳುವಂತೆ ಪ್ರೇರೇಪಿಸಬೇಕಾಗಿರುವುದು ಇಂದಿನ ಅಗತ್ಯತೆಯಾಗಿದೆ. ಮಕ್ಕಳನ್ನು ಕೇವಲ ಪದವೀಧರ-ಶಿಕ್ಷಣವಂತರನ್ನಾಗಿ ತಯಾರಿಸದೇ ಮಕ್ಕಳಲ್ಲಿ ಜೀವನದ ಶಿಸ್ತುಬದ್ಧತೆ, ಮತ್ತು ಉತ್ತಮ ಮೌಲ್ಯಗಳನ್ನು ಬೆಳೆಸವಂತಾಗಬೇಕು. ಜೀವನದಲ್ಲಿ ನೈತಿಕ, ಮೌಲ್ವಿಕ, ತಾತ್ವಿಕ, ಸಂಸ್ಕೃತಿ-ಸಂಸ್ಕಾರಗಳನ್ನು ಬಿಂಬಿಸುವಂತಹ ಮತ್ತು ಮಕ್ಕಳ ಮನಸ್ಸಿನ ಮೇಲೆ ಪ್ರಭಾವ ಬೀರುವಂತಹ ಸಭ್ಯತೆ, ದಯೆ, ಅನುಕಂಪ, ಸಹಾನುಭೂತಿ, ಹಿರಿಯರಿಗೆ ಗೌರವ, ಪ್ರಾಮಾಣಿಕತೆ, ದೇಶಭಕ್ತಿ, ಸಾಮಾಜಿಕ ಬದ್ಧತೆ, ಕಷ್ಟದಲ್ಲಿರುವವರಿಗೆ ಸಹಾಯ, ತತ್ವನಿಷ್ಠೆ, ಆದರ್ಶ-ಮೌಲ್ಯಗಳ ಬಗ್ಗೆ ಸಾಧಕರ ಮತ್ತು ಮಹಾಪುರುಷರ ಯಶೋಗಾಥೆ ಮತ್ತು ಪ್ರೇರಣಾದಾಯಕ ಕಥೆಗಳ ಬಗ್ಗೆ ಅರಿವು ಮೂಡಿಸುವತ್ತ ಕಾರ್ಯಪ್ರವೃತ್ತರಾಗಬೇಕಾಗಿದೆ.


ವಿವೇಕಾನಂದರಿಗೆ ತಾಯಿಯೇ ಪ್ರೇರಣೆ
ಒಂದು ಸಲ ಸ್ವಾಮಿ ವಿವೇಕಾನಂದರ (ನರೇಂದ್ರ) ತಂದೆ ವಿಶ್ವನಾಥದತ್ತರು ಪ್ರಶ್ನೆ ಮಾಡುತ್ತಾರೆ, ನೀನು ಮುಂದೆ ಏನಾಗಬೇಕೆಂದು ಅಂದುಕೊಂಡಿದ್ದೀಯಾ ಎಂದು? ಆಗ ಸ್ವಾಮಿ ವಿವೇಕಾನಂದರು ನಾನು ಸಾಋಥಿ ಆಗುತ್ತೇನೆಂದು ಉತ್ತರ ಕೊಡುತ್ತಾರೆ. ಆಗ ತಂದೆ ಕೋಪಗೊಂಡು ಗದರಿಸುತ್ತಾರೆ. ಆದರೆ ತಾಯಿ ಭುವನೇಶ್ವರಿ ದೇವಿ ‘ಶ್ರೀಕೃಷ್ಣನು ಸಾರಥಿಯಾಗಿ ಅರ್ಜುನನ ತೃವನ್ನು ಕುರುಕ್ಷೇತ್ರದಲ್ಲಿ ನಡೆಸುವ ಚಿತ್ರವನ್ನು ತೋರಿಸುತ್ತಾರೆ. ಮುಂದೊಂದು ದಿನ ಇಡೀ ಜಗತ್ತೇ ಕೊಂಡಾಡುವ ಸ್ವಾಮಿ ವಿವೇಕಾನಂದ ಎಮದೇ ಪ್ರಸಿದ್ದರಾದ ವ್ಯಕ್ತಿಯು ಶಕ್ತಿಯಾಗಿ ಹೊರಹೊಮ್ಮಲು ತಾಯಿಯ ಪಾತ್ರ ಅಮೂಲ್ಯವಾದುದು.
ಕೊನೆಯ ನುಡಿ
ಆದ್ದರಿಂದ ನಮ್ಮ ಮಕ್ಕಳನ್ನು ಬಹಳ ಜವಾಬ್ದಾರಿಯಿಂದ ಬೆಳೆಸಬೇಕಾದ ಗುರುತರವಾದ ಜವಾಬ್ದಾರಿ ಹೆತ್ತವರ ಮೇಲಿದೆ. ಶಿಕ್ಷಣದ ಜೊತೆಗೆ ಅವರಲ್ಲಿ ಪ್ರಾಮಾಣಿಕತೆ, ಸತ್ಯಸಂಧತೆ, ಸಹನೆ, ವಿಧೇಯತೆ, ಸಮಸ್ಯೆ ಎದುರಿಸುವ ಆತ್ಮವಿಶ್ವಾಸ, ಜವಾಬ್ದಾರಿ ನಿರ್ವಹಣೆ, ಗೌರವ, ನಿಷ್ಠೆ, ಸಹಕಾರ, ಜೀವನ-ನೈತಿಕ ಮೌಲ್ಯಗಳ ಬಗ್ಗೆ ಅರಿವು ಮೂಡಿಸಿ ನಾಳಿನ ನಾಡಿನ ಸತ್ಪ್ರಜೆಗಳನ್ನಾಗಿ ರೂಪಿಸುವದರ ಮೂಲಕ ವ್ಯಕ್ತಿತ್ವ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರವೂ ಬಹಳ ಪ್ರಮುಖವಾಗಿದೆ. ಪೋಷಕರು ತಮ್ಮ ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ನೀಡುವ ಮೂಲಕ ಉಜ್ಚಲ ಭವಿಷ್ಯವನ್ನು ರೂಪಿಸುವಂತಾಗಬೇಕು. ‘ದೇವರಿಗೆ ಎಲ್ಲ ಸಂದರ್ಭಗಳಲ್ಲಿ ಎಲ್ಲಾ ಕಡೆಗಳಲ್ಲಿ ಇರಲು ಸಾಧ್ಯವಿಲ್ಲ ಅಂತಾನೇ ದೇವರು ತಾಯಿಯನ್ನು ಸೃಷ್ಟಿಸಿದ್ದಾನೆ. ಆ ನೈಜ ದೇವರ ಇನ್ನೊಂದು ಹೆಸರೇ ತಾಯಿ ಎಂದು ಹೇಳಬಹುದು. ಮನೆಯಲ್ಲಿ ದೈನಂದಿನವಾಗಿ ತಂದೆ-ತಾಯಿ, ಹಿರಿಯರು ಮತ್ತು ಶಾಲೆಯಲ್ಲಿ ಶಿಕ್ಷಕರು ಮೊದಲು ಸ್ವತಃ ತಾವು ಜೀವನ-ಮೌಲ್ಯಗಳನ್ನು ಅಳವಡಿಸಿಕೊಂಡು ಮಕ್ಕಳ ಪಾಲಿಗೆ ಮಾದರಿಯಾಗಬೇಕು. ಇಂದಿನ ಮಕ್ಕಳು ಹೇಳಿದ್ದನ್ನು ಕೇಳುವದಕ್ಕಿಂತ ಅನುಕರಣೆ ಮಾಡುವ ಸ್ವಭಾವ ಹೊಂದಿರುವುದರಿಂದ ಮೊದಲು ನಾವು ಬದಲಾದರೆ ಮಾತ್ರ ಮಕ್ಕಳಲ್ಲಿ ಸ್ಪಷ್ಟ ತಿಳುವಳಿಕೆ ಮೂಡಿ ಸಹಜವಾಗಿ ತಾವೂ ಸಹ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕೆಂಬ ಭಾವನೆ ಮೂಡುತ್ತದೆ ಎಂಬುದು ನನ್ನ ಅಂಬೋಣ.

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಮಹಿಳಾ ಸಂಪಾದಕತ್ವದ ದಿನಪತ್ರಿಕೆಗಳಿಗೆ ಜಾಹೀರಾತಿಗೆ ಮನವಿ

ಶ್ರೀ ಯಲಗೂರೇಶನ ಅದ್ದೂರಿ ಕಾರ್ತಿಕೋತ್ಸವ ಫೆ.7 ರಿಂದ ಪ್ರಾರಂಭ.

ಕಾಲುವೆಯಲ್ಲಿ ಬಿದ್ದು ವ್ಯಕ್ತಿ ಸಾವು

ಗಬಸಾವಳಗಿಯಲ್ಲಿ ವಿಶ್ವ ಕ್ಯಾನ್ಸರ್ ದಿನ ಆಚರಣೆ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಮಹಿಳಾ ಸಂಪಾದಕತ್ವದ ದಿನಪತ್ರಿಕೆಗಳಿಗೆ ಜಾಹೀರಾತಿಗೆ ಮನವಿ
    In (ರಾಜ್ಯ ) ಜಿಲ್ಲೆ
  • ಶ್ರೀ ಯಲಗೂರೇಶನ ಅದ್ದೂರಿ ಕಾರ್ತಿಕೋತ್ಸವ ಫೆ.7 ರಿಂದ ಪ್ರಾರಂಭ.
    In (ರಾಜ್ಯ ) ಜಿಲ್ಲೆ
  • ಕಾಲುವೆಯಲ್ಲಿ ಬಿದ್ದು ವ್ಯಕ್ತಿ ಸಾವು
    In (ರಾಜ್ಯ ) ಜಿಲ್ಲೆ
  • ಗಬಸಾವಳಗಿಯಲ್ಲಿ ವಿಶ್ವ ಕ್ಯಾನ್ಸರ್ ದಿನ ಆಚರಣೆ
    In (ರಾಜ್ಯ ) ಜಿಲ್ಲೆ
  • ಕೃತಿ ಬಿಡುಗಡೆ ಸಮಾರಂಭನಾಟಕ ಕಲೆಯಲ್ಲಿ ಪಳಗಿದ ಹುನ್ನೂರು
    In (ರಾಜ್ಯ ) ಜಿಲ್ಲೆ
  • ಸದಾ ಜನಹಿತ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಜನನಾಯಕರ ಆದ್ಯ ಕರ್ತವ್ಯವಾಗಿದೆ: ಶಾಸಕಿ ಜೊಲ್ಲೆ.
    In (ರಾಜ್ಯ ) ಜಿಲ್ಲೆ
  • ಹೆಚ್ ಡಿ ಕೋಟೆಯಲ್ಲಿ ಸಿಬಿಎಸ್ಇ ಶಾಲೆ, ಬಿ.ಇಡಿ ಕಾಲೇಜು ಆರಂಭ
    In (ರಾಜ್ಯ ) ಜಿಲ್ಲೆ
  • ಶ್ರೀ ದತ್ತ ಇಂಡಿಯನ್ ಶುಗರ್ಸ್ ಕಾರ್ಖಾನೆ ಬೈಲರ್‌ಗೆ ಆಕಸ್ಮಿಕ ಬೆಂಕಿ :ಅಪಾರ ಪ್ರಮಾಣದ ಹಾನಿ
    In (ರಾಜ್ಯ ) ಜಿಲ್ಲೆ
  • ವಿವೇಕಾನಂದ ವೃತ್ತದಲ್ಲಿ ವಿದ್ಯುತ್‌ ದೀಪಗಳಿಗೆ ಸಾರಂಗಮಠದ ಉತ್ತರಾಧಿಕಾರಿ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ಚಾಲನೆ
    In (ರಾಜ್ಯ ) ಜಿಲ್ಲೆ
  • ಪಿಕೆಪಿಎಸ್ ನೂತನ ಸದಸ್ಯರಿಗೆ ಸನ್ಮಾನ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.