ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ನಿರಾಣಿ ಸಮೂಹ ಸಂಸ್ಥೆಯ ಸಹಕಾರಿ ಸಂಘದ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಮಾಜಿ ಶಾಸಕ ಸೋಮನಗೌಡ ಪಾಟೀಲ (ಸಾಸನೂರ) ಹೇಳಿದರು.
ಪಟ್ಟಣದಲ್ಲಿ ಭಾನುವಾರ ವಿಶಾಲ ಎಂಆರ್‌ಎನ್ ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿಯಮಿತ ಜಮಖಂಡಿ ಇದರ ೧೦ನೇ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು, ಲಾಕರ್ ಉದ್ಘಾಟಿಸಿ ಮಾತನಾಡಿದರು.
ನಿರಾಣಿ ಒಡೆತನದ ಸಕ್ಕರೆ ಕಾರ್ಖಾನೆಗಳು ಅತಿ ಹೆಚ್ಚು ಸಕ್ಕರೆ ಉತ್ಪಾದಿಸಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಾ ಬಂದಿವೆ ಎಂದರು.
ಶಾಸಕ ರಾಜುಗೌಡ ಪಾಟೀಲ(ಕುದರಿ ಸಾಲವಾಡಗಿ) ಶಾಖೆ ಉದ್ಘಾಟಿಸಿ ಮಾತನಾಡಿ, ಪಟ್ಟಣದ ಜನತೆ ಆರ್ಥಿಕವಾಗಿ ಸಬಲರಾಗಿರುವುದರಿಂದ ಈ ಸೌಹಾರ್ದ ಸಂಘ ಅತ್ಯುತ್ತಮ ಶಾಖೆಯಾಗಿ ಹೊರಹೊಮ್ಮಲಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಪ್ರಾಸ್ತಾವಿಕವಾಗಿ ಮಾತನಾಡಿ, ಸೌಹಾರ್ದ ಸಂಘ ನೊಂದಣಿಯಾಗಿ ೫ ವರ್ಷಗಳಾಗಿದ್ದು, ಒಟ್ಟು ೬೩೦೦ ಸದಸ್ಯರನ್ನು ಹೊಂದಿದೆ. ಜೊತೆಗೆ ೨೪೦ ಕೋಟಿಗೂ ಹೆಚ್ಚು ಠೇವಣಿಯನ್ನು ಹೊಂದಿದೆ. ಸದಸ್ಯರಿಗೆ ಕೋರ ಬ್ಯಾಂಕಿಂಗ್, ಎಸ್‌ಎಂಎಸ್ ಸೌಲಭ್ಯದೊಂದಿಗೆ ಆರ್‌ಟಿಜಿಎಸ್ ಹಾಗೂ ನೆಪ್ಟ್ ಸೌಲಭ್ಯ ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ೨೫ ಶಾಖೆಗಳು, ೫೦೦ ಕೋಟಿ ಠೇವಣಿ ಸಂಗ್ರಹಿಸುವ ಗುರಿ ಹೊಂದಲಾಗಿದೆ ಎಂದರು.
ಸ್ಥಳೀಯ ಜಡಿಮಠದ ಜಡಿಸಿದ್ಧೇಶ್ವರಶ್ರೀ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರಮೇಶ ಮಸಬಿನಾಳ, ಉದ್ಯಮಿ ಕಾಶೀನಾಥ ಸಾಲಕ್ಕಿ, ಸಿದ್ದು ಬುಳ್ಳಾ, ಬಸವರಾಜ ದೇವಣಗಾಂವ, ಸಿ.ಕೆ.ಕುದರಿ, ಭೀಮನಗೌಡ ಸಿದರಡ್ಡಿ, ಬಾಪುಗೌಡ ಪಾಟೀಲ, ಅಪ್ಪುಗೌಡ ಪಾಟೀಲ, ಕಾಶೀನಾಥ ತಳಕೇರಿ, ದಿನೇಶ ಪಾಟೀಲ, ನಿಂಗನಗೌಡ ಬಿರಾದಾರ, ಗಂಗಾಧರ ಬಬಲೇಶ್ವರ, ಮಂಜುನಾಥ ಕೋಕಟನೂರ, ಪ್ರಕಾಶ ಮಲ್ಲಾರಿ ಇದ್ದರು.

