ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸರ್ಕಾರದ ದಿನಾಂಕ:೦೭.೦೧.೨೦೨೬ರ ಪತ್ರದಲ್ಲಿನ ನಿರ್ದೇಶನ ಹಾಗೂ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, ೧೯೯೩ ರ ೪ನೇ ಪ್ರಕರಣದ ೨ನೇ ಉಪ ಪ್ರಕರಣದಂತೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ,ವಿಜಯಪುರ ತಾಲ್ಲೂಕಿನ ಐನಾಪೂರ ಗ್ರಾಮ ಪಂಚಾಯತಿ ವ್ಯಾಪ್ತಿಗೆಐನಾಪೂರ ಹಾಗೂ ಬುರಣಾಪೂರ ಗ್ರಾಮಗಳನ್ನು ಮತ್ತು ಜುಮನಾಳ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಜುಮನಾಳ ಹಾಗೂ ಖತಿಜಾಪೂರ ಗ್ರಾಮಗಳನ್ನು ಒಳಪಡಿಸಿ, ಗ್ರಾಮ ಪಂಚಾಯತಿಗಳನ್ನು ಪುನರ್‌ರಚಿಸಿ, ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಡಾ.ಆನಂದ್. ಕೆ ಅವರು ಕರಡು ಅಧಿಸೂಚನೆ ಹೊರಡಿಸಿದ್ದಾರೆ.
ಈ ಕರಡು ಅಧಿಸೂಚನೆಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ, ದಿನಾಂಕ:೧೭-೦೧-೨೦೨೬ ರಿಂದ ೨೩-೦೧-೨೦೨೬ರ ಒಳಗಾಗಿ ಅಂತಹ ಆಕ್ಷೇಪಣೆಗಳನ್ನು ಲಿಖಿತವಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
