ಉದಯರಶ್ಮಿ ದಿನಪತ್ರಿಕೆ
ಚಡಚಣ: ಜ.18 ರಿಂದ ಪ್ರಾರಂಭವಾಗಲಿರುವ ಪಟ್ಟಣದ ಶ್ರೀ ಸಂಗಮೇಶ್ವರ ಜಾನುವಾರು ಜಾತ್ರೆಯಲ್ಲಿ ಜಾನುವಾರು ಮಾರಾಟಗಾರ ಹಾಗೂ ಖರೀದಿಗಾರ ರೈತರಿಗೆ ಪ್ರತಿ ವಹಿವಾಟಿಗೆ ಕೇವಲ ರೂ.5 ಘೋಷಣೆ ಮಾಡುವಂತೆ ಆಗ್ರಹಿಸಿ ರೈತರು ಚಡಚಣ ಎಪಿಎಂಸಿ ಉಪ ಮಾರುಕಟ್ಟೆ ಕಾರ್ಯದರ್ಶೀ ಅವರಿಗೆ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ವತಿಯಿಂದ ತಾಲೂಕಾಧ್ಯಕ್ಷ ವಸಂತ ಭೈರಾಮಡಿ ಮನವಿ ಸಲ್ಲಿಸಿದರು.
ಮನವಿಯನ್ನು ಕಾರ್ಯದರ್ಶಿ ಐ.ಎಸ್. ಔರಾದಕರ ಪರವಾಗಿ ಚಡಚಣ ಉಪ ಸಮೀತಿಯ ಕಾರ್ಯದರ್ಶಿ ಶ್ರೀಶೈಲ ಪಟ್ಟಣಶೆಟ್ಟಿ ಅವರು ಸ್ವಿಕರಿಸಿ ಮುಂದಿನ ಕ್ರಮಕ್ಕಾಗಿ ಇಂಡಿ ಎಪಿಎಮ್‌ಸಿ ಅಧಿಕಾರಿಗೆ ಖಳಿಸಿಕೊಡುವದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ತಾಲೂಕಾಧ್ಯಕ್ಷ ವಸಂತ ಭೈರಾಮಡಿ, ಜ.18 ರಿಂದ ಪ್ರಾರಂವಾಗಲಿರುವ ಪಟ್ಟಣದ ಶ್ರೀ ಸಂಗಮೇಶ್ವರ ಜಾನುವಾರು ಜಾತ್ರೆಗೆ ಆಗಮಿಸುವ ರೈತರಿಂದ ಜಾತ್ರಾ ಸಮೀತಿಯವರು ಖರೀದಿದಾರ ರೈತರಿಂದ ಎಪಿಎಮ್‌ಸಿ ಕಾನೂನು ಮೀರಿ ರೂ 100, ಮಾರಾಟಗಾರರಿಗೆ + ರೂ.100 ವಸೂಲಿ ಮಾಡುತ್ತಿದ್ದಾರೆ. ಈ ಹಣ ರೈತರಿಗೆ ಹೊರೆಯಾಗುತ್ತದೆ. ರೈತರು ಈ ವರ್ಷ ಹಸಿ ಬರಗಾಲದಿಂದ ತತ್ತರಿಸಿದ್ದು ಮತ್ತು ತಾವು ಜಾತ್ರೆನಡೆಸಲು ಯಾವುದೇ ಟೆಂಡರ್ ಇಲ್ಲದೆ ಅವೈಜ್ಞಾನಿಕವಾಗಿ ಶ್ರೀ ಸಂಗಮೇಶ್ವರ ದೇವರ ಜಾತ್ರಾ ಕಮೀಟಿಯವರಿಗೆ ಕೊಟ್ಟಿದ್ದು ಇರುತ್ತದೆ ಅದಲ್ಲದೆ ಈ ವರ್ಷ ಜಾತ್ರೆ ನಡೆಸಲು ಅದರ ಮೂಲಭೂತ ಸೌಕರ್ಯಕ್ಕಾಗಿ (ರೈತರಿಗೆ ಹಾಗೂ ಜಾನುವಾರಗಳಿಗೆ ಕುಡಿಯುವ ನೀರು, ಬೇಳಕಿನ ವ್ಯವಸ್ಥೆ ಸೇರಿದಂತೆ ಇನ್ನಿತರ ವ್ಯವಸ್ಥೆ ಮಾಡಲು) ಎಪಿಎಮ್‌ಸಿ ವತಿಯಿಂದ ರೂ 5.00 ಲಕ್ಷ ಅನುದಾನ ನೀಡಿದ್ದಿರಿ ಆದುದರಿಂದ ಎಪಿಎಂಸಿ ನಿಯಮಾನುಸಾರ ಪ್ರತಿ ವಹಿವಾಟುದಾರರಿಗೆ ಕೇವಲ 5 ರೂ ಪಡೆಯಬೇಕು ಎಂದು ಆಗ್ರಹಿಸಿದರು.
ಒಂದು ವೇಳೆ ಒಬ್ಬರ ಮೇಲೆ ಒಬ್ಬರು ಹಾಕುತ್ತ ಕಾಲಹರಣ ಮಾಡದೆ ರೈತರಿಂದ 5 ರೂಪಾಯಿಗಿಂತ ಹೆಚ್ಚಿಗೆ ಹಣ ಪಡೆದರೆ ಇದರಲ್ಲಿ ತಾವೂಕೂಡಾ ಅಪರಾಧಿಗಳಾಗುತ್ತಿರಿ ತಮ್ಮ ಮೇಲೆ ಕೂಡಾ ನಮ್ಮ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ವತಿಯಿಂದ ಕಾನೂನು ಕ್ರಮ ಕೈಗೊಳ್ಳುತ್ತೆವೆ ಮತ್ತು ತಾವು ರೈತರಿಗೆ ಹೆಚ್ಚಿನ ಹಣ ಪಾವತಿ ಮಾಡುವವರೆಗೂ ಬಿಡುವದಿಲ್ಲ ಭೃಹತ್ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಉಪಾಧ್ಯಕ್ಷ ಗೇನಪ್ಪ ಬಿರಾದಾರ, ಶಿವಾನಂದ ಬಿರಾದಾರ, ಅನೀಲ ಡೋಣಿ, ಉಜ್ವಲ ಡೊಳ್ಳಿ, ಚಂದ್ರಕಾಂತ ಡೊಳ್ಳಿ, ಬಸವರಾಜ ಹಿರೇಮಠ, ಸದಾನಂದ, ಶಾಮಣ್ಣ ಭೈರಾಮಡಿ, ಮುತ್ತಣ್ಣ ಬಿರಾದಾರ, ಸಂಗಮೇಶ ಡೊಳ್ಳಿ, ರವಿ ಸೊಡ್ಡಿ ಇತರರು ಇದ್ದರು.
“ಪ್ರತಿ ಜಾನುವಾರ ಜಾತ್ರೆಯಲ್ಲಿ ಎಪಿಎಂಸಿ ನಿಯಮಾನುಸಾರ ಪ್ರತಿ ಜಾನುವಾರ ವಹಿವಾಟಿಗೆ 5 ರೂ. ತೆಗೆದುಕೊಳ್ಳುವ ನಿಯಮವಿದೆ. ಪಟ್ಟಣದಲ್ಲಿ ಎಪಿಎಂಸಿ ವತಿಯಿಂದ ಜಾತ್ರೆ ನಡೆಸಲು ಸ್ಥಳಾವಕಾಶ ಇಲ್ಲದ ಕಾರಣ ಪಟ್ಟಣದ ಶ್ರೀ ಸಂಗಮೇಶ್ವರ ಸಂಸ್ಥೆಗೆ ಜಾತ್ರೆ ನಡೆಸಲು ಅನುಮತಿಸಿದೆ. ಕಡ್ಡಾಯವಾಗಿ ಪ್ರತಿ ಜಾನುವಾರು ವಹಿವಾಟಿಗೆ ರೂ 5 ಪಡೆಯುವಂತೆ ಶ್ರೀ ಸಂಗಮೇಶ್ವರ ಸಂಸ್ಥೆಯ ಜಾತ್ರಾ ಕಮೀಟಿ ಅಧ್ಯಕ್ಷ ಗಂಗಾಧರ ಪಾವಲೆ ಅವರಿಗೆ ತಿಳಿಸಲಾಗಿದೆ. ಒಂದು ವೇಳೆ ನಿಯಮಬಾಹೀರವಾಗಿ ಹಣ ತೆಗೆದುಕೊಂಡಲ್ಲಿ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಾಗುವದು. ರೈತರಿಗೆ ಯಾವುದೆ ಅನ್ಯಾಯ ಆಗಲಿಕ್ಕೆ ಬಿಡುವುದಿಲ್ಲ. ಮತ್ತು ಈ ವರ್ಷ ಜಾತ್ರೆ ಸುರುಳಿತವಾಗಿ ನಡೆಸಲು ರೂ 5ಲಕ್ಷ ಅನುದಾನ ಶ್ರೀ ಸಂಗಮೇಶ್ವರ ಸಂಸ್ಥೆಯ ಜಾತ್ರಾ ಕಮೀಟಿ ಅವರಿಗೆ ನೀಡಲಾಗಿದೆ. ಜಾತ್ರೆ ಮುಗಿದ ನಂತರ ಲೆಕ್ಕಪತ್ರ ಹಾಗೂ ಅದಕ್ಕೆ ಸಂಬಂಧಿಸಿದ ಕಡತಗಳು ನಮ್ಮ ಕೃಷಿ ಸಮಿತಿಗೆ ತಂದು ಒಪ್ಪಿಸುವಂತೆ ಸೂಚಿಸಲಾಗಿದೆ.”
– ಐ.ಎಸ್. ಔರಾದಕರ
ಎಪಿಎಂಸಿ ಕಾರ್ಯದರ್ಶಿ
ಇಂಡಿ/ಚಡಚಣ

