ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಬೆಂಗಳೂರಿನ ಸೂರ್ಯ ಫೌಂಡೇಶನ್-ಸ್ಪಾರ್ಕ್ ಅಕಾಡೆಮಿ(ಆರ್) ನೀಡುವ ಪ್ರತಿಷ್ಠಿತ “ಶಿಕ್ಷಣ ಚೈತನ್ಯ – 2025–26” ಪ್ರಶಸ್ತಿಗೆ ತಾಲೂಕಿನ ಗುಬ್ಬೇವಾಡ ಗ್ರಾಮದ ಆಕ್ಸಫರ್ಡ್ ಇಂಟರ್ನ್ಯಾಷನಲ್ ಸ್ಕೂಲ್ ಆಯ್ಕೆಯಾಗಿದೆ.
ಈ ವಿಶಿಷ್ಟ ಗೌರವವು ಸಂಸ್ಥೆಯ ಅಧ್ಯಕ್ಷ ಬಾಪೂಗೌಡ ರ ದೂರದೃಷ್ಟಿಯ ನಾಯಕತ್ವ, ಅಚಲ ಸಮರ್ಪಣೆ ಮತ್ತು ಸಂಸ್ಥೆಯು ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ನಿರಂತರ ಬದ್ಧತೆಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಸ್ಪಾರ್ಕ್ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಸೋಮೇಶ ನವೋದಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭವು 25/01/2026 ರಂದು ಬೆಂಗಳೂರಿನಲ್ಲಿ ನಡೆಯಲಿದೆ.

