” ಆಲಮೇಲ ಪಟ್ಟಣ ಪಂಚಾಯಿತಿ ಸ್ವಚ್ಚತಾ ಜಾಗೃತಿ ಕಾರ್ಯಕ್ರಮ”
ಉದಯರಶ್ಮಿ ದಿನಪತ್ರಿಕೆ
ಆಲಮೇಲ: ಪರಿಸರ ಮತ್ತು ಆರೋಗ್ಯ ಸರಿಯಾಗಿರಬೇಕು ಎಂದರೆ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಪ.ಪಂ ಸಿ.ಓ ಸುರೇಶ ನಾಯಕ ಹೇಳಿದರು.
ಮಂಗಳವಾರ ಪಟ್ಟಣ ಪಂಚಾಯತ ಹಮ್ಮಿಕೊಂಡ ಸ್ವಚ್ಚತಾ ಕಾರ್ಯಕ್ರಮದ ಜಾಗೃತಿ ಜಾಥಾ ಆಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಪ್ರತಿಯೊಬ್ಬರು ತಮ್ಮ ಆರೋಗ್ಯ ದೃಷ್ಟಿಯಿಂದ ಆದರು ತಮ್ಮ ಮನೆಯ ಸೂತ್ತಮೂತ್ತಲು ಸ್ವಚ್ಚತೆ ಕಾಪಾಡಿಕೊಳ್ಳಬೆಡಕು ತಮ್ಮಿಂದ ಇನ್ನೊಬ್ಬರಿಗೆ ಪ್ರೇರಣೆ ಆಗುವಂತೆ ಸ್ವಚ್ಚತೆ ಕಾಪಾಡಿಕೊಂಡು ಇನ್ನೊಬ್ಬರಿಗೂ ಸಲಹೆ ನೀಡಿ. ಎಲ್ಲರು ಸ್ವಯಂಪ್ರೇರಿತವಾಗಿ ಮೊದಲು ನಮ್ಮ ಮನೆಯಿಂದ ಸ್ವಚ್ಚತೆ ಮಾಡುವದನ್ನು ಆರಂಬಿಸಿ ನಂತರ ಅಕ್ಕ ಪಕ್ಕ, ವಾರ್ಡ್ ನಗರ ಪಟ್ಟಣ ಹಿಗೆ ಎಲ್ಲೆಡೆ ಸ್ವಚ್ಚತೆ ಬಗ್ಗೆ ಎಲ್ಲರಲ್ಲಿಯೂ ಜಾಗೃತಿಯಾಗಬೇಕು ಎಂದು ಹೇಳಿದರು. ಕಿರಿಯ ಆರೋಗ್ಯ ನೀರಿಕ್ಷಕಿ ತೇಜಸ್ವಿನಿ ಮಗಿ, ಕಂದಾಯ ನಿರಿಕ್ಷಕ ಎಂ.ಎ.ಗುಣರೆ, ಪ್ರದೀಪ ದಳವೆ, ಸಚಿನ ಮೋರಟಗಿ, ಪ.ಪಂ. ಸದಸ್ಯ ಭಾಗ್ಯವಂತ ಆಲಮೇಲ್ಕರ, ಬೀಮು ಬೊಮ್ಮನಹಳ್ಳಿ, ಶಶಿ ಗಣಿಯಾರ ಹಾಗೂ ಸಿಬ್ಬಂದಿ, ಶಾಲಾ ಮಕ್ಕಳು, ಪೌರಕಾರ್ಮಿಕರು ಇದ್ದರು.

