ಉದಯರಶ್ಮಿ ದಿನಪತ್ರಿಕೆ
ಚಿಮ್ಮಡ: ಗ್ರಾಮದಲ್ಲಿ ಐವತ್ತಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ತೊರೆದು ತೇರದಾಳ ಶಾಸಕ ಸಿದ್ದು ಸವದಿಯವರ ನೇತ್ರತ್ವದಲ್ಲಿ ಸೋಮವಾರ ರಾತ್ರಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಇಲ್ಲಿನ ಎಂ.ಎಂ. ಹಟ್ಟಿಯವರ ಮನೆಯ ಆವರಣದಲ್ಲಿ ನಡೆದ ಸೇರ್ಪಡೆ ಕಾರ್ಯಕ್ರಮದಲ್ಲಿ ಪ್ರಮುಖರು ಗ್ರಾ.ಪಂ. ಮಾಜಿ ಸದಸ್ಯರಾದ ಮಲ್ಲಪ್ಪ ಮುಂದಿನಮನಿ, ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಪಿರಸಾಬ ನದಾಫ, ರಮೇಶ ಶಿರೋಳ, ಶೌಕತ್ ಮಿರ್ಜಿ, ಪ್ರಭಾಕರ ಚಲವಾದಿಯವರ ಮುಂದಾಳತ್ವದಲ್ಲಿ ಸುಮಾರು ಐವತ್ತಕ್ಕೂ ಹೆಚ್ಚು ಜನ ಕಾಂಗ್ರೆಸ್ ಕಾರ್ಯಕರ್ತರು ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾದರು.
ಶಾಸಕ ಸಿದ್ದು ಸವದಿ ಎಲ್ಲರನ್ನು ಶಾಲುಹೊದಿಸಿ ಪಕ್ಷದ ಬಾವುಟ ನೀಡಿ ಬರಮಾಡಿಕೊಂಡರು.
ಗ್ರಾ.ಪಂ. ಮಾಜಿ ಅಧ್ಯಕ್ಷ ಶಂಕರ ಬಟಕುರ್ಕಿ, ಗುರಲಿಂಗಪ್ಪ ಪೂಜಾರಿ, ಬೀರಪ್ಪ ಹಳೇಮನಿ, ನಿಂಗಣ್ಣ ಪೂಜಾರಿ, ಪರಪ್ಪ ನೇಸೂರ, ಬಸವರಾಜ ಕುಂಚನೂರ, ಪ್ರಭು ಮೂಧೋಳ, ಪ್ರಕಾಶ ಪಾಟೀಲ, ಚನ್ನಪ್ಪ ತೇಲಿ, ಮಹಾಂತೇಶ ಜಾಲಿಕಟ್ಟಿ, ಅವ್ವನಪ್ಪ ಮುಗಳಖೋಡ ಸೇರಿದಂತೆ ಹಲವಾರು ಜನ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

