ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಸ್ವರ್ಣಭೂಮಿ ಫೌಂಡೇಶನ್, ಕರ್ನಾಟಕ ಹಾಗೂ ರೋಟರಿ ಕ್ಲಬ್, ಕೋಲಾರ ಇವರ ಸಂಯುಕ್ತ ಆಶ್ರಯದಲ್ಲಿ ಮೈಸೂರಿನ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಕನ್ನಡ ಹಬ್ಬ-೨೦೨೬, ಪುಸ್ತಕ ಬಿಡುಗಡೆ, ಹಾಗೂ ವಿವಿಧ ಪಕ್ಷ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿಂದಗಿ ತಾಲೂಕಿನ ಬೋರಗಿ ಗ್ರಾಮದ ಹೆಡ್ ಕಾನ್ಸ್ಟೇಬಲ್ ಮೌಲಾಲಿ ಕೆ.ಆಲಗೂರ ಅವರಿಗೆ ಸಾಹಿತ್ಯ ಸೇವೆಯನ್ನು ಪರಿಗಣಿಸಿ, ಸ್ವರ್ಣಭೂಮಿ ಸ್ಟಾರ್ ಅಚೀವರ್ಸ್ ಅವಾರ್ಡ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸ್ವರ್ಣಭೂಮಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಬಿ.ಶಿವಕುಮಾರ್, ಸಾಹಿತಿಗಳಾದ ಡಾ.ಶರಣಪ್ಪ ಗಬ್ಬೂರ, ಡಾ.ಇಂಚರಾ ನಾರಾಯಣಸ್ವಾಮಿ, ಮೈಸೂರು ಕಸಾಪ ಜಿಲ್ಲಾ ಅಧ್ಯಕ್ಷ ಮಡ್ಡಿಕೇರಿ ಗೋಪಾಲ, ಆರಕ್ಷಕ ಅಂಬರೀಶ್ ನಾಗಾವಿ ಸೇರಿದಂತೆ ಇತರರು ಇದ್ದರು.

