ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಇಂದಿನ ವಿದ್ಯಾರ್ಥಿಗಳು ಪರಿಶ್ರಮ, ಶಿಸ್ತು, ಸಮಯ ಪಾಲನೆ ಹಾಗೂ ನಿರಂತರ ಜ್ಞಾನರ್ಜನೆಯೊಂದಿಗೆ ಮೌಲ್ಯಯುತ ಬದುಕಿಗೆ ಮೊದಲ ಆದ್ಯತೆ ನೀಡಿ ಸದೃಢ ಸಮಾಜ ನಿರ್ಮಾಣ ಮಾಡಲು ಮುಂದಾಗಬೇಕು ಎಂದು ಹಿರೇರೂಗಿ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಹಾಗೂ ಸಾಹಿತಿ ಸಂತೋಷ ಎಸ್.ಬಂಡೆ ಹೇಳಿದರು.
ಪಟ್ಟಣದ ಶ್ರೀ ಪದ್ಮರಾಜ ಮಹಿಳಾ ಪದವಿ ಪೂರ್ವ ಕಾಲೇಜಿನ ಸಭಾಭವನದಲ್ಲಿ ಶ್ರೀ ಪದ್ಮರಾಜ ಮಹಿಳಾ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಉಪನ್ಯಾಸಕರು ಸೇವಾ ಮನೋಭಾವನೆಯಿಂದ ಕರ್ತವ್ಯವನ್ನು ನಿರ್ವಹಿಸಿ ತಮ್ಮ ವಿದ್ಯೆಯನ್ನು ಧಾರೆ ಎರೆಯುವವರಾಗಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಪಾವನ ಸಾನಿಧ್ಯ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಸಮ್ಮುಖ ವಹಿಸಿದ ಶ್ರೀ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ಆಶೀರ್ವಚನ ನೀಡಿದರು.
ಪ್ರಾಚಾರ್ಯ ವ್ಹಿ.ಡಿ ಪಾಟೀಲ ಅಧ್ಯಕ್ಷೀಯ ಮಾತುಗಳನ್ನಾಡಿದರು.
ಇದೇ ಸಂದರ್ಭದಲ್ಲಿ ಸಿಂದಗಿ ಆರ್.ಡಿ. ಪಾಟೀಲ ಕಾಲೇಜಿನ ದೈಹಿಕ ಉಪನ್ಯಾಸಕ ಗವಿಸಿದ್ದಪ್ಪ ಆನೆಗುಂದಿ, ರಾಷ್ಟ್ರಮಟ್ಟದ ವ್ಹಾಲಿಬಾಲ್ ಕ್ರೀಡಾಪಟು ರಜಿಯಾ ಬೇಗಂ ಮ್ಯಾಗೇರಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಾಧ್ಯಕ್ಷ ವರ್ಷಾ ಪಾಟೀಲ, ಪ್ರಧಾನ ಕಾರ್ಯದರ್ಶಿ ವೈಷ್ಣವಿ ಹಿರೇಕುರುಬರ, ಸಂಸ್ಥೆಯ ನಿರ್ದೇಶಕ ಅಶೋಕ ಬೂದಿಹಾಳ ವೇದಿಕೆಯ ಮೇಲಿದ್ದರು.
ವಿದ್ಯಾರ್ಥಿಗಳಾದ ಭಾಗ್ಯಶ್ರೀ ಅಳ್ಳಗಿ ಮತ್ತು ಲಕ್ಷ್ಮೀಬಾಯಿ ಪೂಜಾರಿ ನಿರೂಪಿಸಿದರು. ಉಪನ್ಯಾಸಕರಾದ ಜಿ.ಎಸ್ ಕುಲಕರ್ಣಿ ಸ್ವಾಗತಿಸಿದರು. ಕುಮಾರಿ ನಜ್ಮಾ ನದಾಫ ಹಾಗೂ ಸಂಗಡಿಗರು ಪ್ರಾರ್ಥಿಸಿದರು, ಕುಮಾರಿ ವೈಷ್ಣವಿ ಹಿರೇಕುರುಬರ ವಂದಿಸಿದರು.
ಇದೇ ಸಂದರ್ಭದಲ್ಲಿ ಎಂ.ಎಸ್.ಹೈಯಾಳಕರ್, ಎಸ್.ಎಂ.ಪೂಜಾರಿ, ವ್ಹಿ.ವಿ.ಜಿರ್ಲಿ, ಬಿ.ಎಮ್. ಗೋಡಕಿಂಡಿಮಠ, ಸಿಬ್ಬಂದಿಗಳಾದ ಜಿ.ಎ.ನಂದಿಮಠ, ಹೇಮಾ ಹಿರೇಮಠ, ಯು.ಸಿ.ಪೂಜೇರಿ, ಎಂ.ಪಿ. ಸಾಗರ. ಎಸ್.ಎಸ್.ಸಜ್ಜನ, ಎ.ಎ.ಕೋಕಣಿ, ಎಸ್.ಜಿ.ಮಾರ್ಸನಳ್ಳಿ, ಆರ್.ಎ.ಹಾಲಕೇರಿ, ಸುರೇಖಾ ಸಿಂಗಾಡಿ, ಲಕ್ಷ ಮಾರ್ಸನಳ್ಳಿ, ಹೇಮಾ ಕಾಸರ, ಬಸವರಾಜ ಸಿನ್ನೂರ, ಲಕ್ಷಿö್ಮ ಭಜಂತ್ರಿ ಸೇರಿದಂತೆ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿನಿಯರು ಇದ್ದರು.

