ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಮನೆಯ ಕೀಲಿ ಮುರಿದು ೨೫೮ ಗ್ರಾಂ ಚಿನ್ನ, ೧೫ ಸಾವಿರ ನಗದು ಕಳ್ಳತನ ಮಾಡಿದ ಘಟನೆ
ಆಲಮಟ್ಟಿ ರೇಲ್ವೆ ಸ್ಟೇಷನ್ ಹತ್ತಿರದ ಮನೆಯಲ್ಲಿ ಭಾನುವಾರ ಜರುಗಿದೆ.
ಆಲಮಟ್ಟಿ ಆರ್.ಎಸ್ ನಿವಾಸಿ ಶರಣಪ್ಪ ಕೊಲ್ಹಾರ ಕಳ್ಳತನವಾದ ಮನೆ.
ಭಾನುವಾರ ಕಳ್ಳತನವಾದ ಶರಣಪ್ಪ ಅವರ ಪತ್ನಿ, ಖಾಸಗಿ ಶಾಲಾ ಶಿಕ್ಷಕಿ ಗುರುಬಾಯಿ ಬಾದಾಮಿ ಬನಶಂಕರಿ ಜಾತ್ರೆಗೆ ತೆರಳಿದ್ದಾರೆ. ಶರಣಪ್ಪ ಸ್ವಂತ ಗ್ರಾಮ ಹಿರೇಗುಳಬಾಳಕ್ಕೆ ತೆರಳಿದ್ದಾರೆ.
ಮಧ್ಯಾಹ್ನ ೩ ಕ್ಕೆ ಪತ್ನಿ ಗುರುಬಾಯಿ ಬಾದಾಮಿ ಜಾತ್ರೆಯಿಂದ ಆಲಮಟ್ಟಿಗೆ ವಾಪಸ್ಸಾದಾಗ ಮನೆಯ ಬೀಗ, ಕೀಲಿಕೊಂಡಿ ಮುರಿದದ್ದು ಕಂಡಿದೆ. ಮನೆಯೊಳಗಿನ ಸೂಟಕೇಸ್ ನಲ್ಲಿದ್ದ ೨,೫೮,೦೦೦ ರೂ ಮೌಲ್ಯದ ೨೫೮ ಗ್ರಾಂ ಚಿನ್ನ ಹಾಗೂ ೧೫,೦೦೦ ರೂ ನಗದು ಕಳ್ಳತನವಾಗಿದ್ದು ಗೊತ್ತಾಗಿದೆ.
ಈ ಕುರಿತು ಗುರುಬಾಯಿ ಕೊಲಾರ ಆಲಮಟ್ಟಿ ಪೊಲೀಸ್ ಠಾಣೆಯಲ್ಲಿ ಸೋಮವಾರ ದೂರು ದಾಖಲಿಸಿದ್ದಾರೆ.
ಘಟನಾ ಸ್ಥಳಕ್ಕೆ ಬೆರಳಚ್ಚು ತಜ್ಞರು, ಶ್ವಾನ ದಳದ ತಂಡ ಭೇಟಿ ನೀಡಿತ್ತು.
ಎರಡು ತಂಡ ರಚನೆ;
ಘಟನೆಯನ್ನು ಪತ್ತೆ ಹಚ್ಚಲು ಎರಡು ತಂಡವನ್ನು ರಚಿಸಲಾಗಿದೆ ಎಂದು ಭಾನುವಾರ ರಾತ್ರಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ ಡಿವೈಎಸ್ ಪಿ ಬಲ್ಲಪ್ಪ ನಂದಗಾವಿ ತಿಳಿಸಿದರು.
ಶೀಘ್ರವೇ ಕಳ್ಳರನ್ನು ಬಂಧಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಪ್ರತಿ ಮನೆಯವರು, ತಮ್ಮ ತಮ್ಮ ಮನೆಯ ಹೊರಬಾಜು ಸಿಸಿ ಕ್ಯಾಮೆರಾ ಅಳವಡಿಸಿಕೊಳ್ಳುವಂತೆ ಸೂಚಿಸಿದರು.
ಸಿಪಿಐ ಶರಣಗೌಡ ಗೌಡರ ಇದ್ದರು.
