ಉದಯರಶ್ಮಿ ದಿನಪತ್ರಿಕೆ
ಆಲಮೇಲ: ತಾಲ್ಲೂಕು ಮಕ್ಕಳ ಸಾಹಿತ್ಯ ಸಂಗಮ ಹಾಗೂ ಮಕ್ಕಳ ಸಾಹಿತ್ಯ ಪರಿಷತ್ತು ವತಿಯಿಂದ ಶ್ರೀ ವಿಶ್ವೇಶ್ವರ ಬಾಲಭಾರತಿ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಆಲಮೇಲ ಶಾಲೆಯಲ್ಲಿ ಸಿಡಿಲು ಸಂತ ಸ್ವಾಮಿ ವಿವೇಕಾನಂದರ ಜಯಂತಿ ಹಾಗೂ ಯುವ ದಿನೋತ್ಸವವನ್ನು ಆಚರಿಸಲಾಯಿತು.
ಫೋಟೋ ಪೂಜೆಯನ್ನು ವಿದ್ಯಾರ್ಥಿನಿ ಸಾನ್ವಿ ಮಾದರ ಮಾಡಿದಳು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಕ್ಕಳ ಸಾಹಿತ್ಯ ಸಂಗಮದ ಅಧ್ಯಕ್ಷ ಲಕ್ಷ್ಮೀಪುತ್ರ ಕಿರನಳ್ಳಿ ಸ್ವಾಮಿ ವಿವೇಕಾನಂದರ ಚಿಂತನೆಗಳು ಇಂದಿನ ಯುವಕರಿಗೆ ಸ್ಪೂರ್ತಿ, ನಿರಂತರ ಅಧ್ಯಯನ ಶೀಲರಾದ ಸ್ವಾಮಿ ವಿವೇಕಾನಂದರ ಜ್ಞಾನ ಸಂಪತ್ತು ಎಷ್ಟು ಇತ್ತಂದರೆ ಅವರ ಜ್ಞಾನಕ್ಕೂ ಹಾಗೂ ಇಡೀ ದೇಶದ ಮೇಧಾವಿಗಳಿಗೆ ಹೋಲಿಸಿದರೆ ಹೆಚ್ಚು ಇತ್ತು ಎಂದು ವಿದೇಶ ಪತ್ರಿಕೆಗಳು ಬರೆಯುತ್ತವೆ. ಅಂತಹ ಮಹಾನ ಚೇತನರ ಜಯಂತಿಯನ್ನು ಇಡೀ ದೇಶವೇ ರಾಷ್ಟ್ರೀಯ ಯುವ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ ಹಾಗಾಗಿ ವಿವೇಕಾನಂದರು ವಿಚಾರಗಳು ಕೇವಲ ಭಾರತಿಯರಿಗೆ ಸೀಮಿತವಾಗಿರದೆ ಇಡೀ ವಿಶ್ವಕ್ಕೆ ದಾರಿ ದೀಪವಾಗಿವೆ. ಸ್ವಾಮಿ ವಿವೇಕಾನಂದರ ಕುರಿತು ಭಾಷಣ ಮಾಡಿದ ವಿದ್ಯಾರ್ಥಿಗಳಿಗೆ ಸಂಗಮದ ವತಿಯಿಂದ ಬಹುಮಾನ ವಿತರಿಸಲಾಯಿತು.
ಚಂದ್ರಕಾಂತ ದೇವರಮನಿ, ಲಕ್ಷ್ಮೀಬಾಯಿ ಹಳೇಮನಿ , ಸುವರ್ಣ ಸಾರಂಗಮಠ, ಸೀತಾ ಆರೇಶಂಕರ,ಸರುಬಾಯಿ ಬಂಡಗರ, ವೀಣಾ ರಾಂಪೂರಮಠ, ಸುನೀತಾ ಗುಂಡದ,ರಕ್ಷಿತಾ ಹಡಪದ ಮುಂತಾದವರು ಇದ್ದರು

