ಚಡಚಣದಲ್ಲಿ ಭಾರತೀಯ ಕಿಸಾನ್ ಸಂಘದ ವತಿಯಿಂದ ವಿವಿಧ ಬೇಡಿಕೆ ಆಗ್ರಹಿಸಿ ಚಡಚಣ ತಹಶೀಲದಾರರಿಗೆ ಮನವಿ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಪಟ್ಟಣದ ತಹಶೀಲದಾರ ಸಂಜಯ ಇಂಗಳೆ ಅವರಿಗೆ ರೈತರ ವಿವಿಧ ಬೇಡಿಕೆಗಳಾದ ನಿರಾವರಿ ಯೋಜನೆಗಳ ಕಾಮಗಾರಿಗಳನ್ನು ಶೀಘ್ರದಲ್ಲಿ ಪೂರ್ತಿಗೊಳಿಸುವಂತೆ ಹಾಗೂ ಕರ್ನಾಟಕ ಸರಕಾರದ ಗಮನಕ್ಕೆ ತರುವಂತೆ ಭಾರತೀಯ ಕಿಸಾನ್ ಸಂಘದ ಚಡಚಣ ತಾಲೂಕ ಅಧ್ಯಕ್ಷ ಶಾಂತುಗೌಡ ಬಿರಾದಾರ ಅವರು ಗುರುವಾರ ಮನವಿ ಸಲ್ಲಿಸಿದರು.
ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಫೇಸ್-2 ರಲ್ಲಿ ಬರುವ ಬಬಲೇಶ್ವರ ಮತ್ತು ನಾಗಠಾಣ ಮತಕ್ಷೇತ್ರದ ನೀರಾವರಿ ವಂಚಿತ ಎಲ್ಲ ಹಳ್ಳಿಗಳಿಗೆ ನೀರನ್ನು ಹರಿಸಲು ಶೀಘ್ರ ಕ್ರಮ ಕೈಗೊಳ್ಳಬೇಕು.ಆಲಮಟ್ಟಿ ಆಣೆಕಟ್ಟು 519.6 ಮೀ(1705 ಫೂಟ) ರಿಂದ 524.256 (1719 ಫೂಟ) ಮೀಟರ್‌ಗೆ ಎತ್ತರಿಸುವಂತೆ ಮತ್ತು ಡೋಣಿ ನದಿ ಹೂಳೆತ್ತಲು ಹಣ ಕಾಯ್ದಿರಿಸುವಂತೆ ಹೇಳಿದ ಅವರು ಜಿಗಜೇವಣಿ ಕೆರೆ ಸಂಪೂರ್ಣವಾಗಿ ಭರ್ತಿ ಆಗಿರುವುದರಿಂದ ಕಾಲುವೆಗಳು ಸಂಪೂರ್ಣವಾಗಿ ಹಾಳಾಗಿದ್ದು ಎರಡು ಕಾಲುವೆಗಳನ್ನು ದುರಸ್ತಿಗೊಳಿಸಿ ಮತ್ತು ಚಡಚಣ ಹಳ್ಳಕ್ಕೆ ನೀರು ಹರಿಸಲು ಕ್ರಮ ತೆಗೆದುಕೊಳ್ಳಬೇಕೆಂದು ಸರಕಾರಕ್ಕೆ ಆಗ್ರಹಿಸಿದ್ದಾರೆ.
ನಮ್ಮ ಬೇಡಿಕೆಗಳ ಸಂಬಂಧಿಸಿದಂತೆ ತಮ್ಮಲ್ಲಿ ಹಲವಾರು ಬಾರಿ ವಿನಂತಿ ಮಾಡಿದ್ದೆವು ಯಾವುದೇ ಪ್ರತಿಫಲ ತಮ್ಮಿಂದ ಮರಳಿ ಬಾರದೆ ಇರುವುದು ಈ ಭಾಗದ ರೈತರೆಲ್ಲರಿಗೂ ನಿರಾಸೆ ಉಂಟು ಮಾಡಿದೆ ಚುನಾವಣೆಗೂ ಪೂರ್ವದಲ್ಲಿ ತಾವುಗಳು ತಮ್ಮ ಘೋಷಣಾ ಪತ್ರದಲ್ಲಿ ಈ ಎಲ್ಲಾ ಸಮಸ್ಯೆಗಳು ಬಗೆಹರಿಸುವುದಾಗಿ ಘೋಷಿಸಿಕೊಂಡಿದ್ದೀರಿ ಅದರಂತೆ ಈವರೆಗೆ ಕೆಲಸಗಳಾಗಿಲ್ಲ. ರೈತರ ಬೇಡಿಕೆಗಳ ಬಗ್ಗೆ ಮತ್ತು ಕಾಮಗಾರಿಗಳಿಗೆ ತುರ್ತಾಗಿ ಹಣ ಒದಗಿಸಿ ಕಾಮಗಾರಿಗಳಿಗೆ ವೇಗ ನೀಡಬೇಕಾದ ದೊಡ್ಡ ಜವಾಬ್ದಾರಿ ತಮ್ಮಮೇಲಿದೆ. ತಪ್ಪಿದ್ದಲಿ ರೈತರೆಲ್ಲರೂ ಬೀದಿಗೆ ಇಳಿದು ದೊಡ್ಡ ಹೋರಾಟ ಮಾಡುವ ಅನಿವಾರ್ಯತೆ ಉಂಟಾಗುತ್ತದೆ ಅದಕ್ಕಾಗಿ ತಾವುಗಳು ನಮ್ಮ ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕಾಗಿ ಮತ್ತು ಶೀಘ್ರವೇ ಕಾಮಗಾರಿ ಪೂರ್ತಿಗೋಳಿಸುವಂತೆ ಭಾರತೀಯ ಕಿಸಾನ್ ಸಂಘದ ಚಡಚಣ ತಾಲೂಕ ಅಧ್ಯಕ್ಷ ಶಾಂತುಗೌಡ ಬಿರಾದಾರ ಅವರು ಸರಕಾರಕ್ಕೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಭಾ.ಕಿ.ಸಂಘದ ಪ್ರ.ಕಾರ್ಯದರ್ಶಿ ದಯಾನಂದ ಶಿಂದೆ ಅವರು ತಹಶಿಲ್ದಾರರಿಗೆ ಮನವಿಯನ್ನು ಮನವರಿಕೆ ಮಾಡಿ ಸರಕಾರಕ್ಕೆ ಕಳಿಸಿಕೊಡುವಂತೆ ಮನವಿ ಮಾಡಿದರು.ತಹಶಿಲ್ದಾರ ಸಂಜಯ ಇಂಗಳೆ ಅವರು ಮೇಲಾಧಿಕಾರಿಗಳ ಗಮನಕ್ಕೆ ತರುವದಾಗಿ ಹೇಳಿದರು.
ಈ ಸಂದರ್ಭದಲ್ಲಿ ಭಾ.ಕಿ.ಸಂಘದ ಚಂದು ನಿರಾಳೆ ಸೇರಿದಂತೆ ರೈತ ಮುಖಂಡರು ಹಾಗೂ ರೈತರು ಇದ್ದರು.

