Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಜೂನ್ 23, 2026

ಯೋಗಾಭ್ಯಾಸ ವ್ಯಕ್ತಿತ್ವ ವಿಕಾಸಕ್ಕೆ ಸಹಕಾರಿ :ರಾಮಕೃಷ್ಣ ಗುರೂಜಿ

ಸಾಮೂಹಿಕ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ತಳವಾರ ಬಂಧನ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»ವಿಶೇಷ ಲೇಖನ»ಜೀವನ ಪೂರ್ತಿ ಜೀವದ ಗೆಳೆಯ
ವಿಶೇಷ ಲೇಖನ

ಜೀವನ ಪೂರ್ತಿ ಜೀವದ ಗೆಳೆಯ

By No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಲೇಖನ
– ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨

ಉದಯರಶ್ಮಿ ದಿನಪತ್ರಿಕೆ

ಅದೆಷ್ಟೋ ದಿನಗಳಿಂದ ಹಗಲು ರಾತ್ರಿ ಪ್ರಯತ್ನಿಸಿದರೂ ನಿನ್ನನ್ನು ಮರೆಯಲಾಗುತ್ತಿಲ್ಲ. ನಿನ್ನ ನೆನಪುಗಳು ತಲೆಯಿಂದ ಆಚೀಚೆ ಕದಲದೇ ಕರಗದ ಗುಡ್ಡದಂತೆ ಕುಳಿತುಕೊಂಡು ಬಿಟ್ಟಿವೆ. ಅದ್ಯಾಕೋ ಮರೆಯಲಾಗುತ್ತಿಲ್ಲ. ಮರೆಯಬೇಕೆಂದಷ್ಟು ಹಟ ಹಿಡಿದರೂ ನಾ ಮುಂದು ತಾ ಮುಂದು ಎಂದು ಮನಃಪಟಲದ ಮೇಲೆ ನೆನಪಿಗೆ ಬಂದು ಕಾಡುತ್ತವೆ. ಹೀಗೇಕೆ? ಅಂತ ಹೃದಯ ನೂರಾರು ಬಾರಿ ಪ್ರಶ್ನಿಸಿದರೂ ಮನಸ್ಸು ತನ್ನ ಮತುಗಳನ್ನು ಹೇಳಲಾಗದೇ ತನ್ನ ನಾಲಿಗೆಗೆ ದೊಡ್ಡದೊಂದು ಬೀಗ ಹಾಕಿಕೊಂಡು ತನ್ನೊಳಗೆ ಮಾತುಗಳನ್ನು ಬಂಧಿಸಿಟ್ಟು ಮೌನದಲ್ಲೇ ಕ್ಷಣ ಕ್ಷಣವೂ ನನ್ನನ್ನು ಕೊಲ್ಲುತ್ತಿದೆ. ನಿನ್ನೊಂದಿಗೆ ಕಳೆದ ಒಲವಿನ ನೆನಪುಗಳನು ಬಿಟ್ಟು ಬಿಡದೇ ಮನದಾಗಸದಿಂದ ಮಳೆಯ ಹನಿಗಳಂತೆ ಸುರಿಯುತ್ತಿವೆ. ನೀ ದೂರವಿದ್ದರೂ ನಿನ್ನ ನೆನಪುಗಳು ಮಾತ್ರ ಹೃದಯಕ್ಕೆ ತೀರಾ ತೀರಾ ಹತ್ತಿರ ಬದುಕಿನ ಪಯಣದಲ್ಲಿ ಸಿಹಿ ಜೇನಿನಂಥ ನಿನ್ನ ಪ್ರೀತಿಯ ನೆನಪುಗಳು ನನ್ನವು.
ಬದುಕಲು ಅದೆಷ್ಟೊ ದಾರಿಗಳಿವೆ. ಪ್ರೀತಿಯಲ್ಲಿ ಕವಲು ದಾರಿಯಲ್ಲಿ ನಿಂತ ನನಗೆ ನನ್ನ ಕಂಗಳಿನ ತುಂಬ ನೀನೇ ಬಂದೇ ಬರುತ್ತಿಯಾ ಎಂಬ ನಂಬಿಕೆಯ ಕನಸು ಹೊತ್ತು ರಾತ್ರಿಯೆಲ್ಲ ಕಣ್ಣ ರೆಪ್ಪೆ ಮುಚ್ಚದೇ ಕಾಯುತ್ತಿದ್ದೇನೆ. ಆ ನಂಬಿಕೆಯಲ್ಲಿ ದಿನ ನಿತ್ಯದ ಬದುಕು ಸಾಗುತ್ತಲೇ ಇದೆ. ಅದೆಂತ ಅನಿವಾರ್ಯತೆ ನಿನ್ನನ್ನು ಕಾಡುತ್ತಿದೆಯೊ ಗೊತ್ತಿಲ್ಲ. ಸಹಿಸಲೇಬೇಕಾದ ಅನಿವಾರ್ಯತೆ ನನಗಿದೆ. ನಿನ್ನ ಅನಿವಾರ್ಯತೆಯನ್ನು ವಿರೋಧಿಸಲೂ ಆಗದೇ ಬಿಸಿ ತುಪ್ಪ ಬಾಯಲ್ಲಿ ಹಾಕಿಕೊಂಡ ಪರಿಸ್ಥಿತಿ ಅನುಭವಿಸುತ್ತಿದ್ದೇನೆ.


ನೀನು ಒಳ್ಳೆಯವನೋ ಕೆಟ್ಟವನೋ ಎಂದು ಗೊತ್ತಾಗುವ ಮುನ್ನವೇ ನೀ ನನ್ನ ಹೃದಯದಲ್ಲಿ ಬಲಗಾಲಿಟ್ಟು ಪ್ರವೇಶ ಪಡೆದಾಗಿತ್ತು. ನಿನ್ನಲ್ಲಿ ನನಗಿರುವುದು ಅತಿಯಾದ ಸ್ನೇಹವೊ ಬೆಳೆದ ಸ್ನೇಹದ ಮುಂದುವರಿದ ಭಾಗವಾದ ಪ್ರೀತಿಯೋ? ಅತಿ ಎನಿಸುವಷ್ಟು ಆಕರ್ಷಣೆಯೋ ಯಾವುದು ಒಂದೂ ತಿಳಿಯುತ್ತಿಲ್ಲ. ಪೂರ್ತಿ ಗೊಂದಲದ ಮಡುವಿನಲ್ಲಿ ಬಿದ್ದಿದ್ದೇನೆ. ನಮ್ಮಿಬ್ಬರ ಸಂಬಂಧಕೆ ಅದ್ಯಾವ ಹೆಸರಿಡಲಿ ತಿಳಿಯದಾಗಿದೆ.? ಹೆಸರಿಟ್ಟು ಸೀಮಿತಗೊಳಿಸುವುದು ಬೇಡವೆಂದು ಮನಸ್ಸು ಹೇಳುತ್ತಿದೆ. ಒಮ್ಮೊಮ್ಮೆ ಪ್ರೀತಿಯ ಹೆಸರಿಟ್ಟು ಬಲೆಗೆ ಸಿಕ್ಕ ಮೀನಿನಂತೆ ಒದ್ದಾಡುವ ಬದಲು ಸ್ನೇಹದ ಕಡಲಲ್ಲಿ ಇಬ್ಬರೂ ಒಂದೇ ದೋಣಿಯಲ್ಲಿ ಪಯಣಿಸುವುದೇ ಒಳ್ಳೆಯದೇನೋ ಅನಿಸುತ್ತಿದೆ.
ಬೆರಳುಗಳ ಸಂದಿಯಲ್ಲಿ ನಿನ್ನ ಬೆರಳುಗಳನ್ನು ಸಿಕ್ಕಿಸಿ ಭುಜಕ್ಕೊರಗಿದಾಗ ತಂಗಾಳಿಗೆ ಆಚೀಚೆ ನಲಿದಾಡುವ ಮುಂಗುರುಳುಗಳ ಮೋಡಿಗೆ ಸೋತು ನನ್ನನ್ನೇ ನೋಡುತ್ತಿರುವಾಗ ನಿನ್ನೊಂದಿಗೆ ಹಂಚಿಕೊಳ್ಳದ ವಿಷಯವೇ ಇಲ್ಲ. ಆದರೂ ಒಮ್ಮೆಯೂ ನಿನ್ನ ಮನದ ತರಂಗಗಳಲಿ ನನ್ನ ಪ್ರೀತಿಯೇ ತುಂಬಿಕೊಂಡಿದೆಯೇ? ಎಂದು ಕೇಳಲೇ ಇಲ್ಲ. ಕೇಳಬೇಕೆನಿಸಿದರೂ ನೀನು ತಪ್ಪಾಗಿ ತಿಳಿದು ನನ್ನಿಂದ ದೂರವಾಗಿ ಬಿಡುತ್ತಿಯೇನೋ ಎಂಬ ಭಯದಲ್ಲಿ ಬೇಕಂತಲೇ ಬಾಯಿಗೆ ಬೀಗ ಹಾಕಿದ್ದೆ.
ಗೆಳೆಯಾ ನಿಜ ಹೇಳು ನನ್ನೊಂದಿಗೆ ಕಳೆದ ಪ್ರತಿ ಕ್ಷಣವು ನೀನು ಸಂತಸದಿಂದಿರಲಿಲ್ಲವೇ? ಇಷ್ಟು ವರ್ಷ ಜೊತೆಗಿದ್ದರೂ ಜೊತೆಗಾತಿಯಾಗಿ ಬಾಳು ಹಂಚಿಕೊಳ್ಳಲು ಸಿದ್ದಳಿದ್ದಿಯಾ? ಎಂದು ಒಂದು ಸಾರಿ ಕೇಳಲಿಲ್ಲವೇಕೆ? ನನಗಿಂತಲೂ ಹೆಚ್ಚು ಹುಚ್ಚು ಹಿಡಿಸಿಕೊಂಡು ತುಸು ಹೆಚ್ಚೆನಿಸುವ ಹಾಗೆ ಒಳಗೊಳಗೆ ನನ್ನನ್ನು ಪ್ರೀತಿಸುತ್ತಿದ್ದರೂ ಹೇಳಿಕೊಳ್ಳಲಾಗದೇ ಮೌನಿಯಾದೆ.


ಅದೇನೆ ಇರಲಿ ನೀನು ಮಾತ್ರ ನನ್ನಿಂದ ದೂರವಾಗಬೇಡ. ಹುಣ್ಣಿಮೆ ರಾತ್ರಿ ಸಾಗರ ಚಂದಿರನ ಮುಟ್ಟಲು ಜಿಗಿಯುವಾಸೆ. ಮನಸ್ಸು ನೆಗೆಯುತ್ತಿದ್ದರೂ ಪ್ರೀತಿಯ ನಿವೇದನೆಯನ್ನು ನಿನ್ನ ಮುಂದಿಡದೇ ಮೌನದಲ್ಲೇ ಕಾಲ ಕಳೆಯುತ್ತಿದ್ದೇನೆ. ನವ ಬಾಳಿನ ಹೊಸ್ತಿಲು ದಾಟುವಾಗ ನನ್ನ ಹೆಜ್ಜೆಯ ಹಿಂದೆ ನಿನ್ನ ಹೆಜ್ಜೆ ಇರುತ್ತದೆಂದು ಸುಂದರ ಕನಸು ಕಂಡಿದ್ದೇನೆ. ಹಾಡು ಹಗಲೇ ಲೂಟಿ ಹೊಡೆಯುವ ನಿನ್ನ ನೆನಪುಗಳಲ್ಲೂ ಅದೇನೋ ಹಿತವೆನಿಸುವ ಭಾವ.
ನಿನ್ನ ತುಟಿಯಂಚಿನ ತುಂಟ ನಗು ಓರೆಗಣ್ಣಿನಿದ ಕದ್ದು ಕದ್ದು ನೋಡುತ್ತಿದ್ದ ನಿನ್ನ ನೋಟ ರಂಗಿನಾಟಕೆ ಹಾತೊರೆಯುತ್ತಿದ್ದ ನಿನ್ನ ಮನಸ್ಸು ಒಲವಿನ ಮಿಡಿತವನ್ನು ತುಂಬಿಕೊಂಡ ನಿನ್ನ ಹೃದಯವನ್ನು ನನ್ನಿಂದ ಎಂದೂ ಮರೆಯಲಾಗುವುದಿಲ್ಲ.
ಮೊನ್ನೆ ಊರ ದೇವಿಯ ಜಾತ್ರೆಯಲ್ಲಿ ನೀನು ನನ್ನನ್ನೇ ಕದ್ದು ಕದ್ದು ನೋಡಿದ್ದನ್ನು ಮನಸ್ಸು ಜಿಂಕೆಯಂತೆ ಜಿಗಿದಾಡಿತು.. ಜೀವನ ಪೂರ್ತಿ ನನ್ನ ಜೀವದ ಗೆಳೆಯ ನೀನೇ ಎಂದು ಮನೆಯಲ್ಲಿ ಹೇಳಿ ಒಪ್ಪಿಗೆ ಪಡೆದಾಗಿದೆ.ನನ್ನಪ್ಪ ನಿನ್ನಪ್ಪನೊಂದಿಗೆ ಮಾತಾಡಿಯೂ ಆಗಿದೆ ಇನ್ನೇಕೆ ಹಮ್ಮು ಬಿಮ್ಮು. ಬಂದು ಬಿಡು ನದಿಯ ದಂಡೆಗೆ ಜೀವನ ಪೂರ್ತಿ ಜೀವದ ಗೆಳತಿಯಾಗಿ ಇದ್ದು ಬಿಡುವೆ ನಿನ್ನ ತೋಳ ತೆಕ್ಕೆಯಲ್ಲಿ.

BIJAPUR NEWS bjp public public news Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಜೂನ್ 23, 2026

ಯೋಗಾಭ್ಯಾಸ ವ್ಯಕ್ತಿತ್ವ ವಿಕಾಸಕ್ಕೆ ಸಹಕಾರಿ :ರಾಮಕೃಷ್ಣ ಗುರೂಜಿ

ಸಾಮೂಹಿಕ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ತಳವಾರ ಬಂಧನ

ಯೋಗ ಪ್ರತಿದಿನ ಜೀವನದಲ್ಲಿ ಅಳವಡಿಸಿಕೊಳ್ಳಿ :ಶಾಸಕ ಸವದಿ

Add A Comment
Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Helldivers
  • Typora
  • Uncategorized
  • Wemod
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಜೂನ್ 23, 2026
    In ದಿನಪತ್ರಿಕೆ
  • ಯೋಗಾಭ್ಯಾಸ ವ್ಯಕ್ತಿತ್ವ ವಿಕಾಸಕ್ಕೆ ಸಹಕಾರಿ :ರಾಮಕೃಷ್ಣ ಗುರೂಜಿ
    In (ರಾಜ್ಯ ) ಜಿಲ್ಲೆ
  • ಸಾಮೂಹಿಕ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ತಳವಾರ ಬಂಧನ
    In (ರಾಜ್ಯ ) ಜಿಲ್ಲೆ
  • ಯೋಗ ಪ್ರತಿದಿನ ಜೀವನದಲ್ಲಿ ಅಳವಡಿಸಿಕೊಳ್ಳಿ :ಶಾಸಕ ಸವದಿ
    In (ರಾಜ್ಯ ) ಜಿಲ್ಲೆ
  • ಬೆಳಗಾವಿ ಪೀಠದಲ್ಲಿ ನಿತ್ಯ ೧೦೦ ಅರ್ಜಿ ವಿಚಾರಣೆ
    In (ರಾಜ್ಯ ) ಜಿಲ್ಲೆ
  • ಕೇಂದ್ರ ಕಾರಾಗೃಹದಲ್ಲಿ ವಿಶ್ವ ಯೋಗ ದಿನಾಚರಣೆ
    In (ರಾಜ್ಯ ) ಜಿಲ್ಲೆ
  • ಶುದ್ಧ ಕುಡಿವ ನೀರು ಪೂರೈಕೆಯಲ್ಲಿ ಯಾವುದೇ ಲೋಪವಾಗದಿರಲಿ
    In (ರಾಜ್ಯ ) ಜಿಲ್ಲೆ
  • ಕಬಿನಿ ಹಿನ್ನೀರಿಗೆ ತ್ಯಾಜ್ಯ ಸುರಿದರೆ ಕಾನೂನು ಕ್ರಮ
    In (ರಾಜ್ಯ ) ಜಿಲ್ಲೆ
  • ವಿಕಲಚೇತನರ ಕುಂದುಕೊರತೆ ಸಭೆ ಜೂ.೨೪ ಕ್ಕೆ ಮುಂದೂಡಿಕೆ
    In (ರಾಜ್ಯ ) ಜಿಲ್ಲೆ
  • ಮನುಷ್ಯನ ಒತ್ತಡದ ಬದುಕಿಗೆ ಯೋಗ ಅವಶ್ಯಕ :ಶೇಗುಣಸಿ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.