Close Menu
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ

Subscribe to Updates

Get the latest creative news from FooBar about art, design and business.

What's Hot

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 21, 2026

ವಿಶ್ವದ ಆಧ್ಯಾತ್ಮಿಕ ಸಂಸತ್ತಿನ ಶಿಲ್ಪಿ ಬಸವಣ್ಣ :ಎಸಿ ಚಿದಾನಂದ

ಬಸವಣ್ಣ ವಿಶ್ವ ಭ್ರಾತೃತ್ವ ಸಾರಿದ ಶರಣ :ಮೌಲಾಲಿ

Facebook X (Twitter) Instagram
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
Facebook X (Twitter) Instagram YouTube WhatsApp
udayarashminews.comudayarashminews.com
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
udayarashminews.comudayarashminews.com
Home»(ರಾಜ್ಯ ) ಜಿಲ್ಲೆ»ಸಾಮೂಹಿಕ ಮದುವೆಗಳಿಂದ ಅರ್ಥಿಕ ಹೊರೆ ಕಡಿಮೆ
(ರಾಜ್ಯ ) ಜಿಲ್ಲೆ

ಸಾಮೂಹಿಕ ಮದುವೆಗಳಿಂದ ಅರ್ಥಿಕ ಹೊರೆ ಕಡಿಮೆ

By Updated:No Comments2 Mins Read
Facebook Twitter Pinterest LinkedIn Telegram WhatsApp
Share
Facebook Twitter LinkedIn Email Telegram WhatsApp

ಶಿರಹಟ್ಟಿಯ ಫಕೀರೇಶ್ವರ ಸಂಸ್ಥಾನಮಠದ ದಿಂಗಾಲೇಶ್ವರ ಶ್ರೀ ಅಭಿಮತ

ಉದಯರಶ್ಮಿ ದಿನಪತ್ರಿಕೆ

ಇಂಡಿ: ಸರಳ ಸಾಮೂಹಿಕ ವಿವಾಹ ಭಾಗ್ಯವಂತರ ವಿವಾಹ. ಸಾಮೂಹಿಕ ವಿವಾಹ ಶ್ರೇಷ್ಠ ವಿವಾಹ. ಸಾಮೂಹಿಕ ಮದುವೆಗಳು ಅರ್ಥಿಕ ಹೊರೆಯನ್ನು ಕಡಿಮೆ ಮಾಡುವದರ ಜೊತೆಗೆ ಬಡ ಕುಟುಂಬಗಳನ್ನು ಸಂಕಷ್ಟದಿಂದ ಪಾರು ಮಾಡುತ್ತದೆ ಎಂದು ಶಿರಹಟ್ಟಿಯ ಫಕೀರೇಶ್ವರ ಸಂಸ್ಥಾನಮಠದ ಜಗದ್ಗುರು ದಿಂಗಾಲೇಶ್ವರ ಶ್ರೀಗಳು ಹೇಳಿದರು.
ಅವರು ಬುಧವಾರ ತಾಲೂಕಿನ ಗೋಳಸಾರ ಗ್ರಾಮದ ಸದ್ಗುರು ಚಿನ್ಮಯಮೂರ್ತಿ ತ್ರಿಮೂರ್ತಿ ಮಹಾಶಿವಯೋಗಿಗಳ ೩೨ ನೆಯ ಪುಣ್ಯ ಸ್ಮರಣೋತ್ಸವ, ಧರ್ಮಸಭೆ, ದೀಪೋತ್ಸವ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾಡಿನ ಸಂತ ಶರಣ ಸ್ವಾಮೀಜಿಗಳು ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟವರು ಪುಣ್ಯವಂತರು. ಈಗ ಮದುವೆಯಾದ ೨೮ ನವಜೋಡಿಗಳು ಪ್ರತಿಯೊಬ್ಬರೂ ಮೂರು ಮಕ್ಕಳಿಗೆ ಜನ್ಮ ನೀಡಬೇಕು. ಒಬ್ಬ ಮಗ ಅಥವಾ ಮಗಳು ಸಮಾಜಕ್ಕಾಗಿ, ಒಂದು ದೇಶಕ್ಕಾಗಿ, ಒಂದು ನಮಗಾಗಿ ಹೀಗೆ ೩ ಮಕ್ಕಳಿಗೆ ಜನ್ಮ ನೀಡಬೇಕೆಂದರು.
ಸಾಲ ಮಾಡಿ ಮದುವೆ ಮಾಡಿಕೊಂಡು ಸಾಲದ ಜೊತೆ ಮಲಗುವುದಕ್ಕಿಂತ, ಸಾಮೂಹಿಕ ಮದುವೆಗಳಲ್ಲಿ ಮದುವೆಯಾಗಿ ಹೆಂಡತಿಯ ಜೊತೆಗೆ ಸುಖ ಸಂಸಾರ ನಡೆಸಬೇಕು. ವರದಕ್ಷಿಣೆ ಪಡೆಯದೇ, ತಂದೆ ತಾಯಿಯ ಆಸ್ತಿಯಲ್ಲಿ ಪಾಲು ಕೇಳದೆ, ಸ್ವಂತ ದುಡಿದು ಎಲ್ಲರನ್ನೂ ಸಾಕುವ ಮಗನೇ ನಿಜವಾದ ಗಂಡಸು ಎಂದರು.
ಒಂದು ಯುವ ಜನಾಂಗ ದುಷ್ಚಟಕ್ಕೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ನಾವು ಆರೋಗ್ಯವಾಗಿದ್ದರೆ ಮಾತ್ರ ಎಲ್ಲ ಸುಖ ಅನುಭವಿಸಲು ಸಾಧ್ಯವಾಗುತ್ತದೆ. ದುಷ್ಚಟಗಳ ದಾಸರಾದರೆ ನಮ್ಮ ಆರೋಗ್ಯವೂ ಹದಗೆಡುತ್ತದೆ, ಆರ್ಥಿಕವಾಗಿಯೂ ನಾವು ಬಡವರಾಗುತ್ತೇವೆ ಆದ್ದರಿಂದ ಶರೀರ ಕಾಯ್ದುಕೊಳ್ಳಬೇಕೆಂದು ಕರೆ ನೀಡಿದರು.
ಸಾಲೋಟಗಿಯ ಸಿದ್ದೇಶ್ವರ ಆಶ್ರಮದ ಬಸವಲಿಂಗ ಶ್ರೀಗಳು ಮಾತನಾಡಿ ಶ್ರೀ ತ್ರಿಮೂರ್ತಿ ಶ್ರೀಗಳ ಮಹಿಮೆ ಬಹಳಷ್ಟಿದೆ. ನಂಬಿದ ಭಕ್ತರ ಬಾಳು ಬೆಳಗಿದ್ದ ಮಹಾಪವಾಡ ಪುರುಷರು ಶ್ರೀ ತ್ರೀಮೂರ್ತಿ ಮಹಾರಾಜರು ಎಂದರು.
ಯರನಾಳದ ಸಂಗನಬಸವ ಶ್ರೀಗಳು ಮಾತನಾಡಿ, ಗೋಳಸಾರ ಮಠ ಸದಾ ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ಕಾರ್ಯಗಳನ್ನು ಕೈಗೊಂಡು ಬಡವರಿಗೆ, ದುರ್ಬಲರಿಗೆ ಸದಾ ಆಸರೆಯಾಗಿ ನಿಂತಿದೆ. ನಿತ್ಯ ದಾಸೋಹ, ಭಕ್ತವರ್ಗಕ್ಕೆ ಪ್ರಸಾದದ ಮೂಲಕ ಶಾಂತಿ ಮಂತ್ರದ ಮೂಲಕ ಮೌನಕ್ರಾಂತಿ ಮಾಡುತ್ತಿರುವ ಅಭಿನವ ಪುಂಡಲಿAಗ ಮಹಾಶಿವಯೋಗಿಗಳು, ವಯಸ್ಸಿನಲ್ಲಿ ಚಿಕ್ಕವರಿದ್ದರೂ ಶರಣ ತತ್ವದಲ್ಲಿ ಮುಂದಿದ್ದಾರೆ. ದಾಸೋಹ ಪೀಠವನ್ನು ಸಮರ್ಥವಾಗಿ ಮುನ್ನಡೆಸಿಕೊಂಡು ಸರ್ವರ ಪ್ರೀತಿಗೆ ಪಾತ್ರರಾಗಿದ್ದಾರೆ ಎಂದರು.
ಎ.ಪಿ.ಕಾಗವಾಡಕರ, ರವಿ ಆಳೂರ, ಆದಪ್ಪ ಪಾಸೋಡಿ, ಮಾತನಾಡಿದರು.
ತ್ರಿಮೂರ್ತಿ ಕಾರುಣ್ಯ ಪ್ರಶಸ್ತಿಯನ್ನು ವೈದ್ಯಕೀಯ ವಿಭಾಗದ ಡಾ|| ನಚಿಕೇತ ದೇಸಾಯಿ, ಇತಿಹಾಸ ಸಂಶೋಧಕ ಎ.ಎಸ್.ಪಾಸೋಡಿ, ಸಾವಯುವ ಕೃಷಿಕ ಸುನೀಲ ನಾರಾಯಣಕರವರಿಗೆ ನೀಡಲಾಯಿತು.
ಶ್ರೀಮಠಕ್ಕೆ ೧ ಕೋಟಿ ೩೦ ಲಕ್ಷ ರೂಪಾಯಿ ದಾನಗೈದ ಬಾಬುಗೌಡ ಪಾಟೀಲ ರೋಡಗಿ ಅವರನ್ನು ಶ್ರೀಗಳು ಸತ್ಕರಿಸಿದರು.
ವೇದಿಕೆಯ ಮೇಲೆ ಬಂಥನಾಳದ ವೃಷಭಲಿಂಗ ಶ್ರೀಗಳು, ಪಾನ ಮಂಗಳೂರ ಶಿವಯೋಗಿ ಶಿವಾಚಾರ್ಯರು, ಹತ್ತಳ್ಳಿಯ ಗುರುಪಾದೇಶ್ವರ ಶಿವಾಚಾರ್ಯರು, ರೋಡಗಿಯ ಅಭಿನವ ಶಿವಲಿಂಗ ಶ್ರೀಗಳು, ಜೈನಾಪುರದ ರೇಣುಕ ಶಿವಾಚಾರ್ಯರು, ಶಿರವಾಳದ ಸೋಮಲಿಂಗ ಮಹಾರಾಜರು, ಅಗರಖೇಡದ ಅಭಿನವ ಪ್ರಭುಲಿಂಗ ಶ್ರೀಗಳು, ಹೊನವಾಡದ ಬಾಬುರಾವ ಮಹಾರಾಜರು, ಮಾಜಿ ಶಾಸಕ ರಮೇಶ ಭೂಸನೂರ, ಕಾಸುಗೌಡ ಬಿರಾದಾರ, ದಯಾಸಾಗರ ಪಾಟೀಲ, ವಿಠ್ಠಲಗೌಡ ಪಾಟೀಲ, ಮನೋಹರ ಮಂದೇವಾಲಿ, ಅಪರ ಆಯುಕ್ತರು ಪಂಚಾಯತ್ ರಾಜ್ ಇಲಾಜ್ಯ ಭೀಮಾಶಂಕರ ತೆಗ್ಗೆಳ್ಳಿ, ಭೀಮಣ್ಣ ಕವಲಗಿ, ಬಾಬು ಸಾವಕಾರ ಮೇತ್ರಿ, ಜಗದೀಶ ಕ್ಷತ್ರಿ, ಮಂಜುನಾಥ ವಂದಾಲ, ಅನಂತ ಜೈನ, ದೇವೆಂದ್ರ ಕುಂಬಾರ, ಮತ್ತಿತರಿದ್ದರು.
ಇದೇ ಸಂದರ್ಭದಲ್ಲಿ ೨೮ ನವಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

BIJAPUR NEWS bjp public public news udaya rashmi Udayarashmi today newspaper udayarashminews.com
Share. Facebook Twitter Pinterest Email Telegram WhatsApp
  • Website

Related Posts

ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 21, 2026

ವಿಶ್ವದ ಆಧ್ಯಾತ್ಮಿಕ ಸಂಸತ್ತಿನ ಶಿಲ್ಪಿ ಬಸವಣ್ಣ :ಎಸಿ ಚಿದಾನಂದ

ಬಸವಣ್ಣ ವಿಶ್ವ ಭ್ರಾತೃತ್ವ ಸಾರಿದ ಶರಣ :ಮೌಲಾಲಿ

ವಚನಗಳ ಮೂಲಕ ಸಮಾನತೆಯ ಸಂದೇಶ ಸಾರಿದ ಬಸವಣ್ಣ

Add A Comment

Leave A Reply Cancel Reply

Categories
  • (ರಾಜ್ಯ ) ಜಿಲ್ಲೆ
  • Uncategorized
  • ಆರೋಗ್ಯ
  • ಇತರೆ
  • ಕಾವ್ಯರಶ್ಮಿ
  • ಚಿಂತನ
  • ದಿನಪತ್ರಿಕೆ
  • ಪುಸ್ತಕ ಪರಿಚಯ
  • ಪ್ರೇಮಲೋಕ
  • ಭಾವರಶ್ಮಿ
  • ರಾಷ್ಚ್ರ
  • ವಿಜಯಪುರ
  • ವಿದ್ಯಾರ್ಥಿ ನಿಧಿ
  • ವಿಶೇಷ ಲೇಖನ
  • ಸಾಹಿತ್ಯ
  • ಸಿನಿಮಾ
  • ಹೊತ್ತಿಗೆ ಹೊರಣ
Recent Posts
  • ಉದಯರಶ್ಮಿ ಇಂದಿನ ದಿನಪತ್ರಿಕೆ ಏಪ್ರಿಲ್ 21, 2026
    In ದಿನಪತ್ರಿಕೆ
  • ವಿಶ್ವದ ಆಧ್ಯಾತ್ಮಿಕ ಸಂಸತ್ತಿನ ಶಿಲ್ಪಿ ಬಸವಣ್ಣ :ಎಸಿ ಚಿದಾನಂದ
    In (ರಾಜ್ಯ ) ಜಿಲ್ಲೆ
  • ಬಸವಣ್ಣ ವಿಶ್ವ ಭ್ರಾತೃತ್ವ ಸಾರಿದ ಶರಣ :ಮೌಲಾಲಿ
    In (ರಾಜ್ಯ ) ಜಿಲ್ಲೆ
  • ವಚನಗಳ ಮೂಲಕ ಸಮಾನತೆಯ ಸಂದೇಶ ಸಾರಿದ ಬಸವಣ್ಣ
    In (ರಾಜ್ಯ ) ಜಿಲ್ಲೆ
  • ಕೊಲ್ಹಾರದಲ್ಲಿ ವಿಜ್ರಂಬಣೆಯ ಬಸವೇಶ್ವರ ಜಾತ್ರಾ ಮಹೋತ್ಸವ
    In (ರಾಜ್ಯ ) ಜಿಲ್ಲೆ
  • ಬಸವಣ್ಣನವರ ಚಿಂತನೆಗಳು ಎಂದೆಂದಿಗೂ ಪ್ರಸ್ತುತ
    In (ರಾಜ್ಯ ) ಜಿಲ್ಲೆ
  • ಬಸವ ತತ್ವ ಸಕಲ ಶರಣರ ವಚನಗಳ ಸಾರ :ಕುಲಕರ್ಣಿ
    In (ರಾಜ್ಯ ) ಜಿಲ್ಲೆ
  • ಅಧಿಕಾರ ಯಾವಾಗಲೂ ಜನಪರವಾಗಿರಬೇಕು :ಶಾಸಕಮನಗೂಳಿ
    In (ರಾಜ್ಯ ) ಜಿಲ್ಲೆ
  • ಬಸವಣ್ಣರ ಅನುಭವ ಮಂಟಪ ಪರಿಕಲ್ಪನೆಗಳೇ ಸಂವಿಧಾನಕ್ಕೆ ತಳಹದಿ
    In (ರಾಜ್ಯ ) ಜಿಲ್ಲೆ
  • ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದ ಮಹಾನ್ ಚಿಂತಕ ಬಸವಣ್ಣ
    In (ರಾಜ್ಯ ) ಜಿಲ್ಲೆ
Editors Picks
Top Reviews
udayarashminews.com
Facebook X (Twitter) Instagram Pinterest Vimeo YouTube
  • ಮುಖಪುಟ
  • (ರಾಜ್ಯ ) ಜಿಲ್ಲೆ
  • ವಿಶೇಷ ಲೇಖನ
  • ಸಾಹಿತ್ಯ
  • ಆರೋಗ್ಯ
  • ಚಿಂತನ
  • ಪ್ರೇಮಲೋಕ
  • ದಿನಪತ್ರಿಕೆ
  • ಸಂಪರ್ಕಿಸಿ
© 2026 udayarashminews.com. Designed by udayarashmi news .

Type above and press Enter to search. Press Esc to cancel.