ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಗ್ರಾಮ ಪಂಚಾಯತಿ ಚುನಾಯಿತ ಸದಸ್ಯರುಗಳಿಗೆ ಉಪವೇಶನ ಶುಲ್ಕವನ್ನು ನೀಡುವಂತೆ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಗ್ರಾಮ ಪಂಚಾಯತಿ ಸದಸ್ಯರ ಮಹಾಒಕ್ಕೂಟದ ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರದೀಪ ಪಾಟೀಲ ಮನವಿ ಸಲ್ಲಿಸಿದರು.
ಸರಕಾರದ ಆದೇಶದ ಪ್ರಕಾರ ಗ್ರಾಮ ಪಂಚಾಯತಿ ಚುನಾಯಿತ ಪ್ರತಿನಿಧಿಗಳಿಗೆ ಸಭೆಯೊಂದಕ್ಕೆ ಎ,26 2011 ರಿಂದ ನ 23 2023 ರವರೆಗೆ ₹ 100, ಜ 23 2024 ರಿಂದ ನ 16 2025 ರವರೆಗೆ ₹ 300 ಹಾಗೂ ಜ 6 2025 ರಿಂದ ₹ 350 ಗಳನ್ನು ಕೊಡಲು ಆದೇಶವಿದ್ದರೂ ಕೂಡಾ ಇಲ್ಲಿಯವರೆಗೆ ಕೊಲ್ಹಾರ ತಾಲ್ಲೂಕಿನ ಪಿಡಿಓ ಅಧಿಕಾರಿಗಳು ಗ್ರಾಮ ಪಂಚಾಯತ್ ಸದಸ್ಯರುಗಳ ಸಭೆಗಳಿಗೆ ನೀಡಬೇಕಾಗಿದ್ದ ಉಪವೇಶನ ಶುಲ್ಕವನ್ನು ನೀಡಿರುವುದಿಲ್ಲ, ಕಾರಣ ತಕ್ಷಣ ನೀಡಲು ಕ್ರಮ ತೆಗೆದುಕೊಳ್ಳುವಂತೆ ಮನವಿ ಸಲ್ಲಿಸಿದರು.
ಕ್ರಮ ತೆಗೆದುಕೊಳ್ಳದೆ ಹೋದರೆ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವದು ಎಂದು ಮನವಿಯಲ್ಲಿ ತಿಳಿಸಿದ್ದಾರೆ,

