ಬಸವನಬಾಗೇವಾಡಿ: ಪಟ್ಟಣದ ಹೆಸ್ಕಾಂ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಿಗೆ ಅಖಂಡ ಕರ್ನಾಟಕ ರೈತ ಸಂಘಟನೆಯು ಗುರುವಾರ ರೈತರ ಬಾಂಧವರ ಕೃಷಿ ಪಂಪ್‌ಸೆಟ್‌ಗಳಿಗೆ ಪ್ರತಿನಿತ್ಯ ಕನಿಷ್ಠ ಎಂಟು ಗಂಟೆ ಕಾಲ ಪೂರ್ಣ ಪ್ರಮಾಣದ ವಿದ್ಯುತ್ ಪೂರೈಸುವಂತೆ ಆಗ್ರಸಿಹಿಸಿ ಮನವಿ ಸಲ್ಲಿಸಿತು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಈ ವರ್ಷ ಮುಂಗಾರು ಹಂಗಾಮಿನಲ್ಲಿ ಆಗಬೇಕಾಗಿದ್ದ ಮಳೆ ಕೈಕೊಟ್ಟಿದೆ.ಇದೀಗ ಭೀಕರ ಬರಗಾಲ ಆವರಿಸಿದೆ. ರೈತರು ಇದರಿಂದಾಗಿ ಅಘಾತಕ್ಕೆ ಒಳಗಾಗಿದ್ದಾರೆ. ಬಿತ್ತನೆ ಮಾಡಿದ ಮುಂಗಾರು ಬೆಳೆ ನೀರಿಲ್ಲದೇ ನೆಲ ಕಚ್ಚಿವೆ. ಕೆಲವು ರೈತರ ಬಾಂಧವರ ಜಮೀನುಗಳಲ್ಲಿರುವ ಕೊಳವೆ ಬಾವಿ, ತೆರೆದ ಬಾವಿಯಿಂದಾಗಲಿ ಬೆಳೆಗಳಿಗೆ ನೀರು ಉಣಿಸಬೇಕಾದರೆ ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಇದರಿಂದಾಗಿ ಬೆಳೆಗೆ ನೀರುಣಿಸಲು ಸಾಧ್ಯವಾಗುತ್ತಿಲ್ಲ. ಕೃಷಿ ಪಂಪ್‌ಸೆಟ್‌ಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಮಾಡುವ ಅಗತ್ಯವಿzದೆ. ಹಗಲು ಹೊತ್ತಿನಲ್ಲಿ ನಾಲ್ಕು ಗಂಟೆ. ರಾತ್ರಿ ಹೊತ್ತಿನಲ್ಲಿ ನಾಲ್ಕು ಗಂಟೆ ವಿದ್ಯುತ್ ಪೂರೈಕೆ ಮಾಡಿದರೆ ಬೆಳೆಗಳಿಗೆ ನೀರುಣಿಸಲು ಅನುಕೂಲವಾಗುತ್ತದೆ. ಹೆಸ್ಕಾಂ ಅಽಕಾರಿಗಳು ಎಂಟು ಗಂಟೆ ಕಾಲ ಪೂರ್ಣ ಪ್ರಮಾಣದ ವಿದ್ಯುತ್ ಪೂರೈಕೆ ಮಾಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ರವಿ ಲಮಾಣಿ, ಶಂಕರ ಲಮಾಣಿ, ಶೇಠೆಪ್ಪ ಲಮಾಣಿ, ಮೋತಿಲಾಲ ಲಮಾಣಿ, ಮಹಾಂತೇಶ ಲಮಾಣಿ, ಸುಭಾಸಗೌಡ ಪಾಟೀಲ, ರಮೇಶ ಲಮಾಣಿ, ಸುರೇಶ ಪಾಟೀಲ, ಬಸನಗೌಡ ಪಾಟೀಲ ಇತರರು ಇದ್ದರು.
Related Posts
Add A Comment