ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದ ಶಾಸಕರಾದ ಬಸನಗೌಡ ಆರ್ ಪಾಟೀಲ ಯತ್ನಾಳ ಅವರಿಗೆ ಕರ್ನಾಟಕ ಬೆಳೆ ಸಮೀಕ್ಷೆದಾರರ ಸಂಘ ವಿಜಯಪೂರ ಜಿಲ್ಲಾ ಘಟಕದಿಂದ ಭೇಟಿ ನೀಡಿ, ಜಿಲ್ಲಾ ಅಧ್ಯಕ್ಷರು ನರಸಪ್ಪ ನಾವಿ ಅವರ ನೇತೃತ್ವದಲ್ಲಿ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ದೇವ ರಹಿಪ್ಪರಗಿ ತಾಲೂಕಾ ಉಸ್ತುವಾರಿ ಸದಸ್ಯ ಸೋಮಶೇಖರ ನಾಯಕೋಡಿ ಮಾತನಾಡಿ, ಬೆಳೆ ಸಮೀಕ್ಷೆ ದಾರರ ಪರವಾಗಿ ಇದೇ ಡಿಸೆಂಬರ್ 8 -19 ರ ವರೆಗೆ ನಡೆಯುವ ಚಳಿಗಾಲ ಅಧಿವೇಶನದಲ್ಲಿ ಧ್ವನಿ ಎತ್ತ ಬೇಕು ಸಾಹೇಬ್ರೆ ಎಂದು ಮನವಿ ಮಾಡಿಕೊಂಡರು.
ಮನವಿ ಸ್ವೀಕರಿಸಿದ ಶಾಸಕರು ನೀವು ಎಷ್ಟು ಜನ ಈ ಕೆಲಸದಲ್ಲಿ ಇರುವಿರಿ ಎಂದು ಪ್ರಶ್ನಿಸಿದರು.
ಶಾಸಕರ ಪ್ರಶ್ನೆಗೆ ಜಿಲ್ಲಾ ಪ್ರಧಾನಕಾರ್ಯದರ್ಶಿ ಭೀಮಪ್ಪ ಲಕ್ಷ್ಮಣ ತಳವಾರ ಮಾತನಾಡಿ, ಕರ್ನಾಟಕದ ತುಂಬಾ ನಾವುಗಳು ಸರಿಸುಮಾರು 25,000ಸಾವಿರ ಜನಗಳು ಕಾರ್ಯನಿರ್ವಹಿಸುತ್ತಿದ್ದೇವೆ, ನಮಗೆ ಕನಿಷ್ಠ ವೇತನ ನೀತಿ ಅಡಿಯಲ್ಲಿ ನೇಮಕ ಮಾಡಿಕೊಂಡು ವರ್ಷವಿಡೀ ಕೆಲಸ ನೀಡ ಬೇಕೆಂದು ಉತ್ತರಿಸಿದರು.
ಆಗ ಶಾಸಕರು ಸಕಾರಾತ್ಮಕವಾಗಿ ಸ್ಪಂದಿಸಿ ಅಧಿವೇಶನದಲ್ಲಿ ಮಾತನಾಡುವುದಾಗಿ ಭರವಸೆ ನೀಡಿದರು.
ಈ ವೇಳೆ ಜಿಲ್ಲಾ ಉಪಾಧ್ಯಕ್ಷ ಸುರೇಶ ಹಜೇರಿ, ರಾಜ್ಯ ಘಟಕದ ಸಹಕಾರ್ಯದರ್ಶಿ ಪಿಂಟು ಚವ್ಹಾಣ, ಅರುಣಕುಮಾರ್ ತಳವಾರ, ಚಂದನ್ ಕೋಳಿ,ಮಲ್ಲಿಕಾರ್ಜುನ ಪೂಜೇರಿ, ಹಿರಿಯಣ್ಣ ಜಂಬಗಿ, ಸಾಗರ ಕಿರಣಗಿ, ಮಹೇಶ ರಾಠೋಡ, ಸಂತೋಷ ಜಾಧವ,ಬಸವನ ಬಾಗೇವಾಡಿ ತಾಲೂಕ ಪ್ರಧಾನಕಾರ್ಯದರ್ಶಿ ಶಿವುಕುಮಾರ ಪೂಜೇರಿ ಉಪಸ್ಥಿತರಿದ್ದರು.

