ಉದಯರಶ್ಮಿ ದಿನಪತ್ರಿಕೆ
ಇಂಡಿ: ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಶಿಕ್ಷಣವನ್ನು ಉಪನಿರ್ದೇಶಕರ ಕಚೇರಿಗಳ ಮೇಲಿನ ಆಡಳಿತಾತ್ಮಕ ನಿಯಂತ್ರಣವನ್ನು ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ವರ್ಗಾಯಿಸುವದು ಬೇಡ ಎಂದು ಆಗ್ರಹಿಸಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರರು ಮತ್ತು ಉಪನ್ಯಾಸಕರು ಆಡಳಿತಸೌಧ ಎದುರು ಪ್ರತಿಭಟನೆ ನಡೆಸಿದರು.
ಕಿರಣ ನಡಕಟ್ಟಿಯವರು ಮಾತನಾಡಿ ಪದವಿಪೂರ್ವ ಶಿಕ್ಷಣಕ್ಕೆ ಹೈಸ್ಕೂಲ ಶಿಕ್ಷಣ ಸೇರ್ಪಡೆ ಬೇಡ, ಜಿ.ಪಂ ಗೆ ನಿಯಂತ್ರಣ ಬೇಡ, ಹಿಂದಿನಂತೆ ಪದವಿ ಪೂರ್ವ ಇಲಾಖೆ ಇರಬೇಕು ಎಂಬ ಹಲವಾರು ಬೇಡಿಕೆಗಳನ್ನು ಆಗ್ರಹಿಸಿದರು.
ಪದವಿಪೂರ್ವ ಇಲಾಖೆ ಇದ್ದಾಗ ದೇಶದಲ್ಲಿಯೇ ಮಾದರಿ ಸಿ ಇ ಟಿ ಮಾಡಿದ ಶ್ರೇಯಸ್ಸು ಪದವಿಪೂರ್ವ ಇಲಾಖೆಗೆ ಇದೆ. ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿದ್ದ ಪರೀಕ್ಷಾ ವಿಭಾಗವನ್ನು ಹಿಂದಿನಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ನಿರ್ದೇಶನಾಲಯಕ್ಕೆ ಮರಳಿ ವರ್ಗಾಯಿಸಬೇಕು ಇಲ್ಲದಿದ್ದರೆ ದ್ವೀತಿಯ ಪಿಯು ಪರೀಕ್ಷೆ ಉತ್ತರ ಪತ್ರಿಕೆ ಮೌಲ್ಯಮಾಪನ ಬಹಿಷ್ಕರಿಸಿ ಬೆಂಗಳೂರಿನ ಸ್ವತಂತ್ರ ಉದ್ಯಾನವನದಲ್ಲಿ ಅನಿರ್ದೀಷ್ಠಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುವದು ಎಂದರು.
ಪ್ರತಿಭಟನೆಯಲ್ಲಿ ಪ್ರಾಚಾರ್ಯರಾದ ಶಿವಾನಂದ ಕಾಮಗೊಂಡ, ಚಂದ್ರಶೇಖರ ಯಳಸಂಗಿ, ಎಸ್.ಎಸ್.ತೆಗ್ಗೆಳ್ಳಿ, ಸದಾನಂದ ಈರನಕೇರಿ, ಕಿರಣ ನಡಕಟ್ಟಿ ಶಕೀನಾ ಪಾಟೀಲ, ದ್ರಾಕ್ಷಾಯಣಮ್ಮ, ಮಹಾವೀರ ಹೊಸಮನಿ, ಎಸ್.ಬಿ.ಪಾಟೀಲ, ಎಸ್.ಬಿ.ಕಾಳೆ , ಎಸ್.ಆರ್.ಹಿರೇಮಠ, ಎಂ.ಎಂ.ಪೊದ್ದಾರ, ಎಸ್.ಎಂ.ಕೊಡಹೊನ್ನ, ಆರ್.ವಿ.ಅಂಗಡಿ, ವಿ.ಸಿ.ಪವಾರ, ಆರ್.ಎಸ್. ಬಿರಾದಾರ, ಪಿ.ವಿ.ಸಣ್ಣಮನಿ, ಆರ್.ಜಿ.ಪೂಜಾರಿ ಮತ್ತಿತರಿದ್ದರು.
ಕಂದಾಯ ಉಪವಿಭಾಗಾಧಿಕಾರಿ ಚಿದಾನಂದ ಗುರುಸ್ವಾಮಿ ಇವರಿಗೆ ಮನವಿ ಸಲ್ಲಿಸಿದರು.

