ಉದಯರಶ್ಮಿ ದಿನಪತ್ರಿಕೆ
ನಿಡಗುಂದಿ: ತಾಲೂಕಿನ ಆರೇಶಂಕರ ಗ್ರಾಮದಲ್ಲಿ ಇಂದು ನೂತನ ಮಾರುತೇಶ್ವರ ಮೂರ್ತಿಯನ್ನು ಸಕಲ ವಾದ್ಯ ವೈಭವಗಳಿಂದ ಅದ್ದೂರಿಯಲ್ಲಿ ಸ್ವಾಗತ ಮಾಡಲಾಯಿತು.
ಬಸವನ ಬಾಗೇವಾಡಿ ತಾಲ್ಲೂಕಿನ ಇವಣಗಿ ಗ್ರಾಮದಿಂದ ನೂತನ ಮಾರುತೇಶ್ವರ ಮೂರ್ತಿಯನ್ನು ಆರೇಶಂಕರ ಗ್ರಾಮಸ್ಥರು ಪುಜೆ ಪುನಸ್ಕಾರಗಳು ಸಲ್ಲಿಸಿ ಮಾರುತೇಶ್ವರ ಮೂರ್ತಿಯನ್ನು ಟ್ರ‍್ಯಾಕ್ಟರ್ ಮೂಲಕ ಮೂರ್ತಿಯನ್ನು ಆರೇಶಂಕರ ಗ್ರಾಮಕ್ಕೆ ತರಲಾಯಿತು..
ಆರೆಶಂಕರ ಹಳೆಯ ಗ್ರಾಮದಿಂದ ಡೊಳ್ಳು, ಕರಡಿ ಮಜಲು , ಕುಂಭ ಹೊತ್ತ ಮಹಿಳೆಯರು ಸಕಲ ವಾದ್ಯ ವೈಭವಗಳಿಂದ ಬರಮಾಡಿಕೊಂಡು ಬರುವುದು ಕಂಡುಬಂತು.
ಆರೇಶಂಕರ ನೂತನ ಮಾರುತೇಶ್ವರ ಮೂರ್ತಿ ಶಿಲ್ಪಿಗಳು ಬಸವನ ಬಾಗೇವಾಡಿ ತಾಲ್ಲೂಕಿನ ಇವಣಗಿ ಗ್ರಾಮದ ಸುಭಾಸ ಮಾ ಬಡಿಗೇರ, ಕಳಸಾ ತಯಾರಕರು, ಶಂಕ್ರಪ್ಪ ಬಡಿಗೇರ ಹಾವೇರಿ .
ರಾತ್ರಿ ೯ ಗಂಟೆಗೆ ನೂತನ ಮಾರುತೇಶ್ವರ ಮೂರ್ತಿಯನ್ನು ಆರೇಶಂಕರ ಬಡಾವಣೆಯ ಗ್ರಾಮಸ್ಥರು ಬರಮಾಡಿಕೊಂಡರು.
ಬೆಳಿಗ್ಗೆ ನೂತನ ಮಾರುತೇಶ್ವರ ಮೂರ್ತಿಗೆ ರುದ್ರಾಭಿಷೇಕ ಮೂಲಕ ಪ್ರತಿಷ್ಠಾನ ಮಾಡಲಾಗುವುದು.

