ಸ್ವಯಂಪ್ರೇರಿತರಾಗಿ ಅಂಗಡಿಗಳನ್ನು ಬಂದ್ ಮಾಡಿ ಬೆಂಬಲಿಸಿದ ವ್ಯಾಪಾರಸ್ಥರು
ಉದಯರಶ್ಮಿ ದಿನಪತ್ರಿಕೆ
ಇಂಡಿ: ಕಬ್ಬಿಗೆ ರೂ ೩೫೦೦ ಬೆಂಬಲ ಬೆಲೆ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದಿಂದ ಜಿಲ್ಲಾಧ್ಯಕ್ಷ ಎಸ್.ಬಿ.ಕಂಬೋಗಿ ಇವರ ನೇತೃತ್ವದಲ್ಲಿ ನಡೆದ ಅನಿರ್ದಿಷ್ಠ ಸತ್ಯಾಗ್ರಹ ಇಂದು ಇಂಡಿ ಬಂದ್ ಮಾಡುವ ಮೂಲಕ ಯಶಸ್ವಿಯಾಗಿದೆ.
ಕೃಷಿ ಮಾರುಕಟ್ಟೆ, ವರ್ತಕರ ಸಂಘ, ಪಟ್ಟಣದ ವಿವಿಧ ವ್ಯಾಪಾರಸ್ಥರು ಬಂದದಲ್ಲಿ ಸ್ವಯಂ ಪ್ರೇರಿತ ಅಂಗಡಿಗಳನ್ನು ಬಂದು ಮಾಡಿ ಭಾಗಿಯಾದುದಲ್ಲದೆ ರೈತರ ಹೋರಾಟದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಅವಶ್ಯಕ ಸೇವೆ ಹೊರತು ಪಡಿಸಿ ಪಟ್ಟಣದ ಎಲ್ಲ ಅಂಗಡಿ ಮುಗ್ಗಟ್ಟುಗಳು ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಕಾಯಿಪಲ್ಲೆ ಮಾರುವವರು, ಚಹಾ ಅಂಗಡಿಗಳು ಹೋಟೆಲಗಳು ಸೇರಿದಂತೆ ಎಲ್ಲ ಅಂಗಡಿ ಮುಗ್ಗಟ್ಟು ಬಂದದಲ್ಲಿ ಪಾಲ್ಗೊಂಡಿದ್ದವು.
ಅವಶ್ಯಕ ಸೇವೆಗಳಾದ ಬ್ಯಾಂಕು ವ್ಯವಹಾರ, ಆಸ್ಪತ್ರೆ ಮತ್ತು ಔಷದ ಅಂಗಡಿ ಮತ್ತು ಪೋಟ್ರೋಲ ಪಂಪ ಮಾತ್ರ ರಿಯಾಯತಿ ನೀಡಿ ರೈತರು ಯಾವದೇ ರೀತಿಯ ತೊಂದರೆ ಮಾಡಲಿಲ್ಲ.
ಬೇರೆ ಊರುಗಳಿಂದ ಬರುವ ಪ್ರಯಾಣಿಕರಿಗೆ ಅತೀವ ತೊಂದರೆಯಾಯಿತು. ಅದಲ್ಲದೆ ಬಂದ ನಿಮಿತ್ಯ ಪ್ರತಿಭಟನಾಕಾರರು ಬಿಟ್ಟರೆ ಪಟ್ಟಣ ಬಿಕೋ ಎನ್ನುತ್ತಿತ್ತು.
ಬಂದದಲ್ಲಿ ಕರ್ನಾಟಕ ರೈತ ಸಂಘ , ಎಬಿವಿಪಿ ಪರಿಷತ್ತು, ವಕೀಲರ ಸಂಘಟನೆ ,ಜೆಡಿ ಎಸ್ ಬಿಜೆಪಿ, ಕೆ ಆರ್ ಎಸ್ ಪಕ್ಷ ಕರವೇ ಬಸವದಳ, ಇಂಡಿ ತಾಲೂಕಾ ಖಾಸಗಿ ವೈದ್ಯರ ಸಂಘ , ನಿವೃತ್ತ ಸೈನಿಕರ ಸಂಘ ಸೇರಿದಂತೆ ಹಲವಾರು ಸಂಸ್ಥೆಗಳು ಮತ್ತು ವಿವಿಧ ಗ್ರಾಮಗಳಿಂದ ಆಗಮಿಸಿದ ರೈತರು ಪಾಲ್ಗೊಂಡಿದ್ದರು.
ಬಸವೇಶ್ವರ ವೃತ್ತದಲ್ಲಿ ನಡೆದ ಸಭೆಯಲ್ಲಿ ಮಾಜಿ ಶಾಸಕ ರವಿಕಾಂತ ಪಾಟೀಲ, ಬಿಜೆಪಿಯ ಕಾಸುಗೌಡ ಬಿರಾದಾರ, ಜೆಡಿ ಎಸ್ ಪಕ್ಷದ ಬಿ. ಡಿ .ಪಾಟೀಲ, ಡಾ|| ಅನೀಲ ವಾಲಿ, ಡಾ|| ಎಸ್.ಎಂ.ಕೋಳಿ ಬಿಜೆಪಿ ತಾಲೂಕಾ ಅಧ್ಯಕ್ಷ ಹಣಮಂತಗೌಡ ಪಾಟೀಲ, ದಯಾಸಾಗರ ಪಾಟೀಲ, ಗುಂದವಾನ ಪಟೇಲ , ಶೀಲವಂತ ಉಮರಾಣಿ, ಅನೀಲಗೌಡ ಜಮಾದಾರ ಮಾತನಾಡಿ ಕಬ್ಬಿಗೆ ಮತ್ತು ಕಬ್ಬು ಬೆಳೆಗಾರ ರೈತನಿಗೆ ಪ್ರತಿ ಟನ್ ಕಬ್ಬಿಗೆ ರೂ ೩೫೦೦ ರೂ ಬೆಂಬಲ ನೀಡಬೇಕು ಇಲ್ಲದಿದ್ದರೆ ಹೋರಾಟ ಇನ್ನಷ್ಟು ಉಗ್ರ ರೂಪ ತಾಳುತ್ತದೆ ಎಂದು ಎಚ್ಚರಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಎಸ್.ಬಿ.ಕೆಂಬೋಗಿ, ಬಾಳು ಮುಳಜಿ, ಮಲ್ಲು ಗುಡ್ಲ, ಮಲ್ಲಿಕಾರ್ಜುನ ಕಿವಡೆ, ದೇವೆಂದ್ರ ಕುಂಬಾರ, ಕೆಆರ್ ಎಸ್ ಪಕ್ಷದ ಅಶೋಕ ಜಾಧವ, ರೇವಣ್ಣ ಹತ್ತಳ್ಳಿ, ಅನೀಲಗೌಡ ಬಿರಾದಾರ,ಅದೃಷಪ್ಪ ವಾಲಿ, ಡಾ|| ಎಂ.ಎಚ್.ಅAಕಲಗಿ , ಡಾ|| ರಮೇಶ ಪೂಜಾರಿ, ಡಾ|| ಪರಮಾನಂದ ಬಿರಾದಾರ, ಡಾ|| ಶಿವರಾಜ ಕೊಪ್ಪ, ಡಾ|| ರಾಜು ತೋಳನೂರ ಡಾ|| ಕುಮಾರಗೌಡ ಪಾಟೀಲ, ಮತ್ತಿತರಿದ್ದರು.

ಬಾರಿಕೋಲಿನಿಂದ ಮೈ ತುಂಬ ಬಾರಿಸಿಕೊಂಡ ರೈತ
ರೈತ ಅದೃಷ್ಯಪ್ಪಾ ವಾಲಿಯವರು ಅರೆ ಬೆತ್ತಲೆಯಾಗಿ ಬಾರಿಕೋಲಿನಿಂದ ಮೈ ತುಂಬ ಬಾರಿಸಿಕೊಂಡು ಗಮನ ಸೆಳೆದರು.
ಇನ್ನೋರ್ವ ರೈತ ಮೈ ಮೇಲೆ ರೂ ೩೫೦೦ ಬರೆದುಕೊಂಡು ಪ್ರದರ್ಶನ ನೀಡಿರುವದು ಆಕರ್ಷಣೀಯವಾಗಿತ್ತು.

