ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ತಾಲ್ಲೂಕಿನ ವಿವಿಧ ರೈತಪರ ಸಂಘಟನೆಗಳಿಂದ ಪ್ರತಿ ಟನ್ ಕಬ್ಬಿಗೆ ಬೆಂಬಲ ಬೆಲೆ ೩೫೦೦ ರೂ.ಗಳನ್ನು ನೀಡಲು ಹಾಗೂ ಕೆಲವು ಕಾನೂನು ತೋಡಕುಗಳ ಕುರಿತು ಹಕ್ಕೋತ್ತಾಯ ಮಂಡನೆಗಾಗಿ ಆಗ್ರಹಿಸಿ, ಜೊತೆಗೆ ಬೆಳಗಾವಿ, ಬಾಗಲಕೋಟ ರೈತರಿಗೆ ಬೆಂಬಲ ವ್ಯಕ್ತಪಡಿಸಿ ಬೃಹತ್ ಪ್ರತಿಭಟನಾ ಮೆರವಣಿಗೆ ಕೈಗೊಂಡು, ರಾಷ್ಟ್ರೀಯ ಹೆದ್ದಾರಿ-೫೦ರಲ್ಲಿ ಧರಣಿ ಕುಳಿತು ಸರ್ಕಾರದ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಮೊಹರೆ ಹಣಮಂತ್ರಾಯ ವೃತ್ತದಲ್ಲಿ ಶುಕ್ರವಾರ ಸೇರಿದ ರೈತರು ಹಾಗೂ ವಿವಿಧ ರೈತಪರ ಸಂಘಟನೆಗಳ ಪದಾಧಿಕಾರಿಗಳು ಪ್ರತಿ ಟನ್ ಕಬ್ಬಿಗೆ ಬೆಂಬಲ ಬೆಲೆ ನೀಡದ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಮೆರವಣಿಗೆ ಹೊರಟು, ಬಸ್‌ನಿಲ್ದಾಣ ಮಾರ್ಗದ ಮೂಲಕ ಡಾ.ಅಂಬೇಡಕರ್ ವೃತ್ತದಲ್ಲಿ ಹೆದ್ದಾರಿ ಬಂದ್ ಮಾಡಿ ಧರಣಿ ಕುಳಿತರು.
ಈ ಸಂದರ್ಭದಲ್ಲಿ ಅಜೀಜ್ ಯಲಗಾರ, ಸೋಮಶೇಖರ ಹಿರೇಮಠ, ಕಾಶೀಪತಿ ಕುದರಿ, ಮುನೀರ್ ಅಹ್ಮದ್ ಮಳಖೇಡ, ರಾಜಕುಮಾರ ಸಿಂದಗೇರಿ, ಶಿವಾನಂದ ಯಡಹಳ್ಳಿ, ಶಂಕರಗೌಡ ಹಿರೇಗೌಡರ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಡಲೇ ರೈತ ಸಮುದಾಯದ ಬೆಂಬಲಕ್ಕೆ ನಿಂತು ಪ್ರತಿ ಟನ್ ಕಬ್ಬಿಗೆ ಬೆಂಬಲ ಬೆಲೆ ನೀಡಲು ಆಗ್ರಹಿಸಿದರು. ನಂತರ ತಹಶೀಲ್ದಾರ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿದರು.
ಶಾಂತಪ್ಪ ದೇವೂರ, ಕಾಶೀನಾಥ ಕೋರಿ, ರಾಮು ದೇಸಾಯಿ, ವಿನೋದಗೌಡ ಪಾಟೀಲ, ಸುನಂದಾ ಸೊನ್ನಳ್ಳಿ, ರೇಣುಕಾ ಪಾಟೀಲ, ಶಂಕರ ಜಮಾದಾರ, ಸಂಪತ್ ಜಮಾದಾರ, ನಾಗಪ್ಪ ಹಡಗಲಿ, ಭೀಮಣ್ಣ ಹಿಕ್ಕಣಗುತ್ತಿ, ಗುರುರಾಜ ಆಕಳವಾಡಿ(ಪಡಗಾನೂರ), ಅಮೀನಸಾ ಕಲಾಲ್, ಈರಣ್ಣ ವಸ್ತçದ, ಅಯ್ಯನಗೌಡ ಬಿರಾದಾರ, ವಿಠ್ಠಲ ಯಾದಗಿರಿ (ಹರನಾಳ), ಸಂಗಮೇಶ ಹುಣಸಗಿ, ರಹಿಮಾನ ಕಣಕಾಲ, ರಮೇಶ ಮಶಾನವರ, ಪ್ರಕಾಶ ಡೋಣೂರಮಠ, ಆಕಾಶ ಕಬ್ಬಿನ, ರಮೇಶ ದಳವಾಯಿ, ಬಸವರಾಜ ಕೋಳಕೂರ ಸೇರಿದಂತೆ ರೈತರು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಇದ್ದರು.

