ವಿಜಯಪುರದಲ್ಲಿ ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ಆಗ್ರಹ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕಬ್ಬು ಬೆಳೆಗಾರರ ತಾಳ್ಮೆಯನ್ನು ಪರೀಕ್ಷಿಸಬೇಡಿ, ರೈತರ ತಾಳ್ಮೆ ಕಟ್ಟೆ ಒಡೆದರೆ ಮುಂದೆ ಆಗುವ ಬಹುದೊಡ್ಡ ಅನಾಹುತಗಳಿಗೆ ಸಕ್ಕರೆ ಕಾರ್ಖಾನೆಗಳು ಹೆಸರು ಹೆಳದೆ ತುಕ್ಕು ಹಿಡಿದು ಮೂಲೆಗುಂಪಾಗುತ್ತವೆ, ಕೂಡಲೇ ಸರ್ಕಾರ ಮಧ್ಯಸ್ಥಿಕೆ ವಹಿಸಿ ಕಬ್ಬಿಗೆ ೩೫೦೦ ಹಣವನ್ನು ಕೊಡಿಸಬೇಕು ಹಾಗೂ ಸರ್ಕಾರಕ್ಕೆ ಬರುವ ತೆರಿಗೆಯಲ್ಲಿ ೧೦೦೦ ಹಣ ಹಾಕಿ ಕೊಡಬೇಕು ಎಂದು ಮಾಜಿ ಸಚಿವರಾದ ಎಸ್.ಕೆ ಬೆಳ್ಳುಬ್ಬಿ ಮಾತನಾಡಿ ಆಗ್ರಹಿಸಿದರು.
ಕಳೆದ ೩ ದಿನಗಳಿಂದ ನಗರದ ಗಗನ ಮಹಲ್ ಹತ್ತಿರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕಬ್ಬು ಬೆಳೆಗಾರರು ಹಾಗೂ ಸಮಸ್ತ ರೈತ, ಪ್ರಗತಿಪರ ಸಂಘಟನೆಗಳ ಒಕ್ಕೂಟದಲ್ಲಿ ಹಮ್ಮಿಕೊಂಡಿರುವ ಕಬ್ಬು ಬೆಳೆಗಾರರ ಹೋರಾಟದಲ್ಲಿ ಭಾಗವಹಿಸಿ ವಿವಿಧ ರೈತ ಗೀತೆ, ಹಂತಿ ಪದವನ್ನು ಸಂಘಡಿಗರೊಂದಿಗೆ ಹಾಡಿ ನಾವೂ ಕೂಡಾ ರೈತರು ಕಬ್ಬು ಬೆಳೆಗಾರರಿಗೆ ನ್ಯಾಯ ಸಿಗುವವರೆಗೂ ನಿಮ್ಮಜೊತೆ ಇರುತ್ತೆವೆ ಎಂದರು
ಈ ವೇಳೆ ಹುಲಿಜಂತಿ ಮಾಳಿಂಗರಾಯ ಮಹಾರಾಜರು ಹೋರಾಟವನ್ನು ಉದ್ದೇಶಿಸಿ ಮಾತನಾಡುತ್ತಾ ಈ ನಾಡಿನ ಸಮಸ್ತ ಜನತೆಗೆ ಯಾವುದೇ ಫಲಾಪೆಕ್ಷೆ ಇಲ್ಲದೇ ಹಗಲು ರಾತ್ರಿ ಕಷ್ಟಪಟ್ಟು ಬೆಳೆದಿರುವ ಬೆಳೆಗಳಿಗೆ ಸರಿಯಾದ ಬೆಲೆ ಸಿಗದೇ ಹೋದಲ್ಲಿ ರೈತ ಕುಟುಂಬಗಳು ಬೀದಿಗೆ ಬೀಳುತ್ತವೆ, ಮಠಾಧೀಶರು ಹಾಗೂ ರೈತರ ಸಂಬಂಧ ಬಹಳ ಅವಿನಾಭಾವವಾದದ್ದು ರೈತರ ಈ ಹೋರಾಟಕ್ಕೆ ಈ ನಾಡಿನ ಸಮಸ್ತ ಮಠಾಧಿಶರು ನಿಮ್ಮ ಜೊತೆ ನಾವಿರುತ್ತೆವೆ ಎಂದರು.
ಈ ವೇಳೆ ನಾಗಠಾಣ ಮತಕ್ಷೇತ್ರದ ಮಾಜಿ ಶಾಸಕರಾದ ದೇವಾನಂದ ಚವ್ಹಾಣ ಮಾತನಾಡುತ್ತಾ ಕಬ್ಬು ಬೆಳೆಗಾರರ ಈ ಹೋರಾಟ ನ್ಯಾಯಯೂತವಾದ್ದದು, ಕೂಡಲೇ ರೈತರಿಗೆ ನ್ಯಾಯ ಸಿಗಬೇಕು , ರಾಜ್ಯ ಸರ್ಕಾರ ಕೂಡಲೇ ಚರ್ಚೆ ಮಾಡಿ ಪ್ರಾಮಾಣೀಕ ಪ್ರಯತ್ನ ಮಾಡಿ ಪ್ರತಿಟನ್ ಕಬ್ಬಿಗೆ ೩೫೦೦ ಕೊಡಬೇಕು ಎಂದರು. ಎಲ್ಲಾ ಕಬ್ಬು ಬೆಳೆಗಾರರು ಮಾತನಾಡಿಕೊಂಡು ಕಬ್ಬು ಬೆಳೆಯುವುದನ್ನು ಅರ್ಧದಷ್ಟು ಕಡಿಮೆ ಮಾಡಿದರೆ ಕಾರ್ಖಾನೆ ಮಾಲಿಕರು ನಮ್ಮನ್ನ ಹುಡಿಕಿಕೊಂಡು ನಾವೂ ಹೇಳಿದ ಬೆಲೆ ಕೊಟ್ಟು ಖರಿಧಿಸುವವರು,
ಈ ವೇಳೆ ಬಂಥನಾಳದ ಸಿದ್ದಲಿಂಗ ಮಹಾಸ್ವಾಮಿಗಳು, ಕೋಲಾರದ ಕೈಲಾಸನಾಥ ಮಹಾಸ್ವಾಮಿಜಿ, ವಕೀಲರ ಸಂಘದ ಜಿಲ್ಲಾಧ್ಯಕ್ಷರು ಸೇರಿದಂತೆ ಪದಾಧಿಕಾರಿಗಳು, ಡಿ,ಎಸ್.ಎಸ್ ಮುಖಂಡರಾದ ರಮೇಶ ಆಸಂಗಿ, ಅಶೋಕ ಚಲವಾದಿ, ಪರಸು ದಿಂಡವಾರ, ರೈತ ಮುಖಂಡರಾದ ಅಶೋಕ ಅಲ್ಲಾಪುರ, ಅಣ್ಣಾರಾಯ ಈಳಗೇರ, ಶ್ರೀನಾಥ ಪೂಜಾರಿ, ಡಾ. ಭಗವಾನರೆಡ್ಡಿ, ಜಗದೇವ ಸೂರ್ಯವಂಶಿ, ಈರಪ್ಪ ಕುಳೆಕುಮಟಗಿ ಸೇರಿದಂತೆ ಅನೇಕರು ಮಾತನಾಡಿದರು .
ಇದೇ ವೇಳೆ ಕೋಲಾರದ ರೈತ ಮುಖಂಡರಾದ ಜಗದೀಶ ಸುನಗದ ಗೆಳೆಯರ ಬಳಗದಿಂದ ೨೦೦೦ ರೊಟ್ಟಿ ಹಾಗೂ ೫೦ ಕೆ.ಜೆ ಅಕ್ಕಿಯನ್ನು ರೈತ ಹೋರಾಟದ ದಾಸೋಹಕ್ಕೆ ನೀಡಿ ಯಾವಾಗಲೂ ರೈತರಿಗೆ ಯಾವುದೇ ಕಷ್ಟ ಸಮಸ್ಯೆ ಬಂದಾಗ ಸದಾ ನಾವಿರುತ್ತೆವೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ರಾಹುಲ್ ಕುಬಕಡ್ಡಿ, ರಾಜ್ಯ ಉಪಾಧ್ಯಕ್ಷರಾದ ಕಲ್ಲು ಸೊನ್ನದ, ಜಿಲ್ಲಾಧ್ಯಕ್ಷರಾದ ಸಂಗಮೆಶ ಸಗರ, ಶಿವಾನಂದಯ್ಯ ಹಿರೇಮಠ, ವೀರಣ್ಣ ಸಜ್ಜನ, ರಾಮನಗೌಡ ಪಾಟೀಲ, ಸಂಗಪ್ಪ ಟಕ್ಕೆ, ಲಿಂಗರಾಜ ಮೇಟಿ, ಅಭಿಷೇಕ ಹೂಗಾರ, ಕ.ರ.ವೇ ಮುಖಂಡರಾದ ಬಸವರಾಜ ತಾಳಿಕೋಟಿ, ಶ್ರೀಶೈಲ ಮುಳಜಿ, ಭೀಮಸೇನ ಕೊಕರೆ, ಗುರುನಾಥ ಬಗಲಿ, ಮಲ್ಲನಗೌಡ ಬಿರಾದಾರ, ಸೇರಿದಂತೆ ವಿವಿಧ ರೈತಪರ ಹೋರಾಟಗಾರರು ಭಾಗವಹಿಸಿದರು.

