ಬಸವನಬಾಗೇವಾಡಿ: ನಮ್ಮ ದೇಶದಲ್ಲಿ ಗತಕಾಲದಿಂದಲೂ ಅನೇಕ ಧರ್ಮ, ಜಾತಿ, ಬೇರೆ ಬೇರೆ ಸಂಸ್ಕಾರ, ಸಂಸ್ಕ್ರತಿಯನ್ನು ಇರುವದನ್ನು ಕಾಣುತ್ತೇವೆ. ದೇಶ ಮಾನವೀಯತೆಗೆ, ಧಾರ್ಮಿಕತೆಗೆ ಸ್ಥಾನ ನೀಡಿದೆ ಎಂದು ಸಕ್ಕರೆ, ಜವಳಿ ಮತ್ತು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ಪಟ್ಟಣದ ಯಾತ್ರಿ ನಿವಾಸದ ಮುಂಭಾಗ ಹಿಂದು ಮಹಾಗಣಪತಿ ಮಹಾಮಂಡಳವು ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಜನಜಾಗೃತಿ ಸಭೆ ಹಾಗೂ ಬಹಿರಂಗ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪೂರ್ವಕಾಲದಿಂದಲೂ ಭಾರತ ದೇಶವು ಅನೇಕ ಧರ್ಮ, ಜಾತಿಗಳನ್ನು ಒಳಗೊಂಡ ಏಕೈಕ ದೇಶ ನಮ್ಮದು. ವಿವಿಧೆತೆಯಲ್ಲಿ ಏಕತೆಯ ಸಂದೇಶವನ್ನು ಇಡೀ ಜಗತ್ತಿಗೆ ಸಾರಿದೆ ಎಂದರು.
ಸಂದಿಗ್ಧ ಪರಿಸ್ಥಿತಿಯಲ್ಲಿ ಸಾರ್ವಜನಿಕರನ್ನು ಒಂದುಗೂಡಿಸುವ ಉದ್ದೇಶದಿಂದ ಬಾಲಗಂಗಾಧರ ತಿಲಕರು ಗಣೇಶ ಉತ್ಸವವನ್ನು ಸಾರ್ವಜನಿಕ ಉತ್ಸವವನ್ನು ಜಾರಿಗೆ ತಂದರು. ಈ ಉತ್ಸವದ ಮೂಲಕ ಜನರನ್ನು ಒಗ್ಗೂಡಿಸಿ ಸ್ವಾತಂತ್ರ್ಯ ತಂದುಕೊಟ್ಟ ಶ್ರೇಯಸ್ಸು ಸಲ್ಲುತ್ತದೆ ಎಂದ ಅವರು, ಭಗವಂತನು ನಮಗೆ ನೀರು, ಗಾಳಿ, ಪ್ರಕೃತಿ ನೀಡಿದ್ದಾನೆ. ಇದನ್ನು ಎಲ್ಲರೂ ಸಾರ್ಥಕತೆಯಿಂದ ಸದುಪಯೋಗ ಪಡಿಸಿಕೊಂಡು ಉತ್ತಮ ಬದುಕು ಸಾಗಿಸಬೇಕೆಂದರು.
ಸಾನಿಧ್ಯ ವಹಿಸಿದ್ದ ಶಿವಪ್ರಕಾಶ ಶಿವಾಚಾರ್ಯರು ಮಾತನಾಡಿ, ಯರೋಪ ದೇಶದಲ್ಲಿ ಶೇ. ೨೮ ರಷ್ಟು ಜನರು ನಮ್ಮ ದೇಶದ ಸನಾತನ ಧರ್ಮವನ್ನು ಅಪ್ಪಿಕೊಂಡು ಜೀವನ ಮಾಡುತ್ತಿದ್ದಾರೆ. ಅಲ್ಲಿ ಚರ್ಚ್‌ಗಳು ದೇವಸ್ಥಾನಗಳಾಗಿ ಪರಿವರ್ತನೆಯಾಗುತ್ತಿವೆ. ಮುಂದಿನ ದಿನಗಳಲ್ಲಿ ಅಲ್ಲಿ ಹೆಚ್ಚು ನಮ್ಮ ಸನಾತನ ಧರ್ಮವನ್ನು ಕಾಣುವ ದಿನಗಳು ದೂರವಿಲ್ಲ. ಇಂತಹ ಸನಾತನ ಧರ್ಮದ ಬಗ್ಗೆ ಅಪಮಾನವಾಗುವ ರೀತಿಯಲ್ಲಿ ಮಾತನಾಡುವವರು ಈ ದೇಶದಲ್ಲಿ ಜೀವನ ಮಾಡಲು ಯೋಗ್ಯರಲ್ಲ. ನಮ್ಮ ಧರ್ಮದ ಬಗ್ಗೆ ವಿರುದ್ಧವಾಗಿ ಮಾತನಾಡುವವರಿಗೆ ಸೂಕ್ತ ಶಿಕ್ಷೆ ಕೊಡಬೇಕು.
ಸಾನಿಧ್ಯ ವಹಿಸಿದ್ದ ಕಲ್ಲಿನಾಥ ದೇವರು, ಅಧ್ಯಕ್ಷತೆ ವಹಿಸಿದ್ದ ಹಿಂದು ಮಹಾಗಣಪತಿ ಮಹಾಮಂಡಳ ಅಧ್ಯಕ್ಷ ಅಶೋಕ ಹಾರಿವಾಳ, ನೇತಾಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಾಜಶೇಖರ ಪಾಟೀಲ, ಕಲ್ಲು ಸೊನ್ನದ, ಆರ್.ಎಂ.ರೋಣದ ಮಾತನಾಡಿದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುರೇಶ ಹಾರಿವಾಳ, ಮುಖಂಡರಾದ ಬಸವರಾಜ ಗೊಳಸಂಗಿ, ಸಂಗಮೇಶ ಓಲೇಕಾರ, ಸಚೀನ ಬಾಗೇವಾಡಿ, ಪಿಂಟುಗೌಡ ಪಾಟೀಲ, ಮುದುಕು ಬಸರಕೋಡ, ಸಾವಿತ್ರಿ ಕಲ್ಯಾಣಶೆಟ್ಟಿ, ರೂಪಾ ಜಾಧವ, ವೀಣಾ ಗಾಯಕವಾಡ ಇತರರು ಇದ್ದರು.
ಕಾಶೀನಾಥ ಅವಟಿ ಸ್ವಾಗತಿಸಿದರು. ಚನ್ನಬಸು ಶಿವಗೊಂಡ ನಿರೂಪಿಸಿದರು.
ಇದೇ ಸಂದರ್ಭದಲ್ಲಿ ಹಿಂದು ಮಹಾಗಣಪತಿ ಮಹಾಮಂಡಳವು ಹಮ್ಮಿಕೊಂಡಿದ್ದ ವಿವಿಧ ಕ್ರೀಡೆ, ಸಾಂಸ್ಕ್ರತಿಕ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ, ಜನತೆಗೆ ಬಹುಮಾನ ವಿತರಿಸಲಾಯಿತು.
ವಿವಿಧೆತೆಯಲ್ಲಿ ಏಕತೆಯ ಸಂದೇಶ ಸಾರಿದ ದೇಶ ನಮ್ಮದು :ಸಚಿವ ಶಿವಾನಂದ ಪಾಟೀಲ
Related Posts
Add A Comment