ಬ್ಕಹ್ಮದೇವನಮಡು: ವಿಜಯಪುರ ಜಿಲ್ಲೆಗೆ ಅಂಟಿದ್ದ ಬರದ ನಾಡು ಹಣೆಪಟ್ಟಿಯನ್ನು ಅಳಿಸಿ ಹಾಕಿದ ಕೀತಿ೯ ಸಚಿವ ಡಾ.ಎಂ.ಬಿ.ಪಾಟೀಲರಿಗೆ ಸಲ್ಲುತ್ತದೆ ಎಂದು ಕಾಂಗ್ರೆಸ್ ಯುವ ಮುಖಂಡ ಚಂದ್ರಶೇಖರ ಕೆಂಭಾವಿ ಹೇಳಿದರು. ಆಧುನಿಕ ಭಗೀರಥ ಬೃಹತ್ ಮತ್ತು ಮಧ್ಶಮ ಕೈಗಾರಿಕೆ ಹಾಗೂ ಮೂಲಭೂತ ಸೌಕಯ೯ ಅಭಿವೃದ್ದಿ ಇಲಾಖೆ ಸಚಿವ ಡಾ.ಎಂ.ಬಿ.ಪಾಟೀಲರ ೫೯ನೇ ಜನ್ಮದಿನದ ಅಂಗವಾಗಿ ಸಿಂದಗಿ ತಾಲೂಕು ಬ್ರಹ್ಮದೇವನಮಡು ಗ್ರಾಮದ ಸಕಾ೯ರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳಿಗೆ ಉಚಿತ ನೋಟ್ ಬುಕ್ ವಿತರಿಸಿ ಮಾತನಾಡಿದರು.
ರಾಜ್ಶದ ಅಭಿವೃದ್ದಿಗೆ ಅಪಾರ ಕೊಡುಗೆ ನೀಡಿದ್ದಾರೆ.ನೀರಾವರಿ ಕ್ಷೇತ್ರದಲ್ಲಿನ ಅವರ ಸೇವೆ ಶಾಶ್ವತವಾಗಿ ಉಳಿಯುವಂತಾಗಿದೆ ಎಂದರು.
ಯುವ ಮುಖಂಡ ಮಲ್ಲಿಕಾಜು೯ನ ಕೆಂಭಾವಿ ಮಾತನಾಡಿ, ಈ ಶತಮಾನದ ಸಂತ, ಜ್ಞಾನಯೋಗಿ ಸಿದ್ದೇಶ್ವರ ಮಹಾಸ್ವಾಮಿಗಳು ಎಂ.ಬಿ.ಪಾಟೀಲ ಎಂದರೆ ನೀರು,ನೀರು ಎಂದರೆ ಎಂ.ಬಿ.ಪಾಟೀಲ.ಎಲ್ಲಿಯವರೆಗೆ ನೀರು ಇರುತ್ತದೆಯೋ ಅಲ್ಲಿಯವರೆಗೆ ಎಂ.ಬಿ.ಪಾಟೀಲರ ಹೆಸರು ಶಾಶ್ವತವಾಗಿರುತ್ತದೆ ಎಂದು ಶ್ರೀಗಳು ಪಾಟೀಲರನ್ನು ಹೊಗಳಿರುವುದು ಅವರಿಗೆ ನೊಬಲ್ ಬಹುಮಾನಕ್ಕಿಂತ ದೊಡ್ಡದಾಗಿದೆ ಎಂದರು.
ಈ ಸಂದಭ೯ದಲ್ಲಿ ಸದು ಶ್ರೀಗಿರಿ, ಮಸ್ತಾಫ್ ಸೀತನೂರ ಸೇರಿದಂತೆ ಶಿಕ್ಷಕರು, ಶಾಲೆ ಮಕ್ಕಳು ಇದ್ದರು.
Related Posts
Add A Comment