ಉದಯರಶ್ಮಿ ದಿನಪತ್ರಿಕೆ
ಕೆಂಭಾವಿ: ವಿದ್ಯಾರ್ಥಿಗಳು ಪದವಿ ಅಧ್ಯಯನದ ಜೊತೆಗೆ ಉತ್ತಮ ಆಲೋಚನೆಗಳು, ಭಾವನೆಗಳು, ನಡವಳಿಕೆಗಳು, ಮೈಗೂಡಿಸಿಕೊಂಡಾಗ ಮಾದರಿ ವ್ಯಕ್ತಿಯಾಗಲು ಸಾಧ್ಯ ಎಂದು ಯುವ ಮುಖಂಡ ಆದಿತ್ಯ ಗೌಡ ಪೊಲೀಸ್ ಪಾಟೀಲ್ ಹೇಳಿದರು.
ಪಟ್ಟಣದ ಶ್ರೀಮತಿ ಗಂಗಾಬಾಯಿ ಶಾಂತಗೌಡ ಪೋಲಿಸ್ ಪಾಟೀಲ ಮೆಮೋರಿಯಲ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ, ಐ.ಕ್ಯೂ.ಎ.ಸಿ. ಮತ್ತು ಸಾಂಸ್ಕೃತಿಕ ಘಟಕದ ಸಹಯೋಗದಲ್ಲಿ 2025-26ನೇ ಸಾಲಿನ ವಿವಿಧ ಸಮಿತಿಗಳ ಉದ್ಘಾಟನೆ ಹಾಗೂ ಬಿಎ ಬಿಕಾಂ ಮತ್ತು ಬಿಎಸ್ಸಿ ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಲಿಕೆಯ ಜೊತೆ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ತುಂಬುವ ಕೆಲಸ ಮಾಡುವ ಕಾಲೇಜಿನ ಪ್ರಾಂಶುಪಾಲ ಮತ್ತು ಸಿಬ್ಬಂದಿ ವರ್ಗದವರ ಕಾರ್ಯ ಶ್ಲಾಘನೀಯ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಡಾ.ಸಿದ್ಧಲಿಂಗ ರಾಥೋಡ್ ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಕಾಲೇಜಿನ ವಿವಿಧ ಸಮಿತಿಗಳು ಆದ್ಯತೆ ನೀಡುತ್ತಿದ್ದು, ಐ ಕ್ಯೂ ಎ ಎಸ್ ನಲ್ಲಿ ಸುಲಭವಾದ ಮಾಹಿತಿ ಸಿಗಲಿದೆ ದೈಹಿಕವಾಗಿ ಭೌತಿಕವಾಗಿ ಇವುಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಪ್ರಾಂಶುಪಾಲರಾದ ಡಾ ನಾಗಪ್ಪ ಚಾವಲ್ಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಸ್ರೀನ್ ತಾಜ್, ಡಾ ಪೂಜಾ ಹೊನ್ನುಟಗಿ, ಶಶಿಕುಮಾರ ಎತ್ತಿನಮನಿ, ಬೋಧಕೇತರ ಸಿಬ್ಬಂದಿ ಸಂಗಮೇಶ ಪಟ್ಟಣಕರ್, ಸೇರಿದಂತೆ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಇದೇ ವೇಳೆ ರಾಯಚೂರು ವಿಶ್ವವಿದ್ಯಾಲಯದ ಯೋಗ ಮತ್ತು ಕ್ರಿಕೆಟ್ ಕ್ರೀಡೆಯಲ್ಲಿ ಯುನಿವರ್ಸಿಟಿ ಬ್ಲೂ ಆದಂತ ಬಸವರಾಜ ಹಾಗು ವೆಂಕಟೇಶ್ ಅವರಿಗೆ ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಪುಷ್ಪ ಹಾಗು ಪೆನ್ನುಗಳನ್ನು ನೀಡುವ ಮೂಲಕ ಸ್ವಾಗತಿಸಲಾಯಿತು. ಕುಮಾರಿ ಶಾಂಭವಿ ಪ್ರಾರ್ಥಿಸಿದರು. ಕುಮಾರಸ್ವಾಮಿ ಸುಷ್ಮಾ ಭರತನಾಟ್ಯ ಮಾಡಿ ರಂಜಿಸಿದರು. ಡಾ.ಯಂಕನಗೌಡ ಪೊಲೀಸ್ ಪಾಟೀಲ ಸ್ವಾಗತಿಸಿದರು, ಮಲ್ಲಿಕಾರ್ಜುನ್ ಮರಡ್ಡಿ ನಿರೂಪಿಸಿದರು. ಮಲ್ಲಣ್ಣ ಬೀಳೆಬಾವಿ ವಂದಿಸಿದರು.