ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಮೇಲೆ ಷೂ ದಾಳಿ ಖಂಡನಾರ್ಹ, ಆದರೆ ಇದು ಮುಗಿದು ಹೋದ ಅಧ್ಯಾಯ, ಈ ವಿಷಯವಾಗಿ ಬಂದ್ ಕರೆ ನೀಡಿ ಜನಸಾಮಾನ್ಯರಿಗೆ ತೊಂದರೆ ನೀಡುವ ಅಗತ್ಯತೆ ಇರಲಿಲ್ಲ ಎಂದು ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಮೇಲೆ ಷೂ ಎಸೆದ ಪ್ರಕರಣ ಮುಗಿದು ಹೋದ ಅಧ್ಯಾಯ, ಆದರೆ ಈ ವಿಷಯ ಮುಂದಿಟ್ಟುಕೊಂಡು ಬಂದ್ ಕರೆ ನೀಡಿ ಬಡವರನ್ನು ತೊಂದರೆ ನೀಡಿದ್ದು ಯಾವ ಪುರುಷಾರ್ಥಕ್ಕೆ ಎಂದು ಪ್ರಶ್ನಿಸಿದರು.
ಒತ್ತಾಯಪೂರ್ವಕವಾಗಿ ಎಪಿಎಂಸಿಯಲ್ಲಿ ಅಂಗಡಿ ಬಂದ್ ಮಾಡಿ ಜನಸಾಮಾನ್ಯರನ್ನು ತೊಂದರೆಗೆ ದೂಕಿದ್ದು ಯಾಕೆ? ಎಂದು ಪ್ರಶ್ನಿಸಿದರು.
ಲಿಂಬೆ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಚಂದ್ರಶೇಖರ ಕವಟಗಿ ಮಾತನಾಡಿ, ಸಂಘ ಪರಿವಾರ ಒಂದೇ ಒಂದು ದೇಶ ವಿರೋಧಿ ಕಾರ್ಯದಲ್ಲಿ ಭಾಗಿಯಾಗಿದ್ದು ತೋರಿಸಲಿ ಎಂದು ಬಿಜೆಪಿ ಮುಖಂಡ ಚಂದ್ರಶೇಖರ ಕವಟಗಿ ಸವಾಲು ಹಾಕಿದರು.
ಸಂಘ ಪರಿವಾರವನ್ನು ನಿಷೇಧ ಮಾಡಿದ ನೆಹರೂ ಅವರೇ ಮುಂದೆ ಸಂಘ ಪರಿವಾರ ಕಾರ್ಯಚಟುವಟಿಕೆಗಳನ್ನು ಹೊಗಳಿದ್ದರು, ಹಾಲಿ ಸಚಿವ ದಿನೇಶ ಗುಂಡೂರಾವ್ ಅವರ ತಂದೆಯೇ ಸಂಘ ಪರಿವಾರದವರಾಗಿದ್ದರು ಎಂದರು.
ಸಂಘ ಪರಿವಾರ ಸಾಂಸ್ಕೃತಿಕ ಸಂಘಟನೆ ಹೊರತು ರಾಜಕೀಯ ಸಂಘಟನೆಯಲ್ಲ, ಈ ಬಗ್ಗೆ ಸುಪ್ರೀಂಕೋರ್ಟ್ ಸಹ ತೀರ್ಪು ಪ್ರಕಟಿಸಿದೆ ಎಂದರು.