ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ರೋಟರಿ ಸಂಸ್ಥೆಯ ಅಡಿಯಲ್ಲಿ ಬಾಗಲಕೋಟೆಯ ಡಾ.ಮಾಸೂರಕರ ಅವರ ಕಣ್ಣಿನ ಆಸ್ಪತ್ರೆಯ ಆಶ್ರಯದಲ್ಲಿ ಬಡವರಿಗೆ ಉಚಿತವಾಗಿ ಕಣ್ಣು ತಪಾಸಣೆ ಶಿಬಿರ ಆಯೋಜಿಸಲಾಗುವುದು. ಶೇ 50ರ ರಿಯಾಯಿತಿ ದರದಲ್ಲಿ ಕನ್ನಡಕ ವಿತರಿಸಲಾಗುವುದು. ರೋಟರಿ ಸಂಸ್ಥೆ ಸೂಚಿಸುವ ಕಡೆ ಶಿಬಿರವನ್ನು ಆಯೋಜಿಸಲಾಗುವುದು ಎಂದು ರೋಟರಿ ಜಿಲ್ಲೆ 3170ದ ಸಹಾಯಕ ಗವರ್ನರ ನಾರಾಯಣ ಹೆರಕಲ್ ಹೇಳಿದರು.
ಇಲ್ಲಿನ ವಿಜಯಪುರ ರಸ್ತೆಯ ಹೊರವಲಯದಲ್ಲಿರುವ ರೋಟರಿ ಭವನದಲ್ಲಿ ರೋಟರಿ ಸಂಸ್ಥೆಯ ಆಶ್ರಯದಲ್ಲಿ ನಡೆದ ವಾರದ ಸಭೆಯ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಪಲ್ಸ್ ಪೋಲಿಯೋ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು.
ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ವಿಶೇಷ ಉಪನ್ಯಾಸ ವ್ಯವಸ್ಥೆ ಮಾಡಬೇಕು. ಮಳೆ ನೀರು ಕೊಯ್ದು, ಚೆಕ್ ಡ್ಯಾಂ ನಿರ್ಮಾಣದ ಮಹತ್ವ ಕುರಿತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ, ಶಾಲಾ-ಕಾಲೇಜು ಮಕ್ಕಳಿಗೆ ಗಣಕಯಂತ್ರ ಮತ್ತು ಸೈಕಲ್ ವಿತರಿಸುವಂತ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲು 13 ಸಲಹೆ ನೀಡಿದರು.
ರೋಟರಿ ಜಿಲ್ಲೆ ಗವರ್ನರ ಆಗುವಂತ ಅರ್ಹತೆವುಳ್ಳ ವ್ಯಕ್ತಿಗಳನ್ನು ಗುರುತಿಸಿ ರೋಟರಿ ಸದಸ್ಯರನ್ನಾಗಿ ಮಾಡಿಕೊಳ್ಳಬೇಕು. ಮುಂಬರುವ ದಿನಗಳಲ್ಲಿ ಹೊಸ ಮತ್ತು ವಿನೂತನವಾದ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕು ಎಂದು ಸಲಹೆ ನೀಡಿದರು.
ಜಮಖಂಡಿ ರೋಟರಿ ಸಂಸ್ಥೆಯ ಅಧ್ಯಕ್ಷ ರಾಜಶೇಖರ ಕೋವಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿ, ರೋಟರಿ ಸಂಸ್ಥೆ ನಿರ್ಮಿಸುತ್ತಿರುವ ಅಡುಗೆ ಕೋಣೆಯ ಉದ್ಘಾಟನೆಗೆ ರೋಟರಿ ಗವರ್ನರ ಅವರನ್ನು ಆಹ್ವಾನಿಸಲು ಹಾಗೂ ರೋಟರಿ ಜಿಲ್ಲಾ ಮಟ್ಟದ ಕಾರ್ಯಕ್ರಮಗಳನ್ನು ಜಮಖಂಡಿಗೆ ವಹಿಸಿಕೊಡಲು ಸಹಾಯಕ ಗವರ್ನರ ಅವರಲ್ಲಿ ಮನವಿ ಮಾಡಿದರು.
ರೋಟರಿ ಸಂಸ್ಥೆಯ ಖಜಾಂಚಿ ಶಂಕರ ತೇಲಿ ರೋಟರಿ ಸಂಸ್ಥೆಯ ಫೋರ್ ವೇ ಟೆಸ್ಟ್ ಓದಿದರು. ಕಾರ್ಯದರ್ಶಿ ಎಂ.ಎಚ್. ಕಡ್ಲಿಮಟ್ಟಿ ವಂದಿಸಿದರು.