ಉದಯರಶ್ಮಿ ದಿನಪತ್ರಿಕೆ
ಆಲಮೇಲ: ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಜನರ ಸಾಮಾಜಿಕ ಮತ್ತು ಶೈಕ್ಷಣಿಕ ಹಿನ್ನೆಲೆಗಳ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸುವ ಗುರಿಯನ್ನು ಹೊಂದಲಾಗಿದೆ ಎಲ್ಲರೂ ಸೇರಿ ಸಮೀಕ್ಷೆ ಪೂರ್ಣಗೊಳಿಸಲು ಶ್ರಮಿಸಬೇಕು ಎಂದು ಸಿಂದಗಿ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಮುಜಿ ಅಗ್ನಿ ಸೂಚಿಸಿದರು.
ತಾಲೂಕಿನ ದೇವಣಗಾಂವ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೇವಣಗಾಂವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮಗಳ ಗಣತಿದಾರ ಶಿಕ್ಷಕರ ಪ್ರಗತಿ ಪರಿಶೀಲನೆ ಮಾಡಿ ಮಾತನಾಡಿದರು.
ಇನ್ನು ಮೂರು ದಿನಗಳಲ್ಲಿ ಗಣತಿಯನ್ನು ಪೂರ್ಣಗೊಳಿಸಬೇಕಿದೆ, ಸಮೀಕ್ಷೆ ಪೂರ್ಣಗೊಳಿಸಲು ಆಗುತ್ತಿರುವ ಅಡೆತಡೆಗಳು ಯಾವುವು ಅವುಗಳನ್ನು ಯಾವ ರೀತಿಯಲ್ಲಿ ಬಗೆಹರಿಸಿಕೊಳ್ಳಬೇಕೆಬುದನ್ನು ಇದೇ ಸಂದರ್ಭದಲ್ಲಿ ವಿವರಿಸಿದರು.
ತಾಂತ್ರಿಕ ಅಡೆತಡೆಗಳಿರುವ ಸಮೀಕ್ಷೆಯನ್ನು ಪಂಚನಾಮಿ ಮಾಡುವ ಮೂಲಕ ಇತ್ಯರ್ಥ ಪಡಿಸಿಕೊಳ್ಳಬೇಕೆಂದು ಸೂಚಿಸಿದರು.
ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರನ್ನು ಸಮೀಕ್ಷೆ ಪೂರ್ಣಗೊಳಿಸುವ ಉದ್ದೇಶದಿಂದ ಅವರನ್ನು ಬಳಸಿಕೊಂಡು ಶೇ.100 ಗುರಿಯನ್ನು ಸಾಧಿಸಿ ಎಂದು ಹೇಳಿದರು.
ದೇವಣಗಾಂವ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಂಜೀವಕುಮಾರ ದೊಡಮನಿ ಮಾತನಾಡಿ ಸಮೀಕ್ಷೆದಾರರಿಗೆ ಎಲ್ಲ ರೀತಿಯ ಸಹಾಯ ಸೌಕರ್ಯಗಳನ್ನು ಗ್ರಾಮ ಪಂಚಾಯಿತಿಯಿಂದ ಮಾಡಿಕೊಡಲಾಗಿದೆ ಹಾಗೂ ಡಂಗುರ ಸಾರುವ ಮೂಲಕ ಮತ್ತಷ್ಟು ಜನರಿಗೆ ಸಮೀಕ್ಷೆಯ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ವಿವರಿಸಿದರು
ಸಿ ಆರ್ ಪಿ ಎಸ್. ಆರ್. ಮುಲ್ಲಾ ಮಾತನಾಡಿ ಸಮೀಕ್ಷೆದಾರರಿಗೆ ಆಗುತ್ತಿರುವ ತಾಂತ್ರಿಕ ಅಡೆತಡೆಗಳನ್ನು, ತೊಂದರೆಗಳನ್ನು ಸಭೆಯಲ್ಲಿ ವಿವರಿಸಿದರು.
ಆಲಮೇಲ ತಾಲೂಕು ಪಂಚಾಯತ್ ಎಡಿ ಸಿದ್ದು ಅಂಕಲಗಿ, ಶಿಕ್ಷಕರಾದ ಗುರುಲಿಂಗಪ್ಪ ಸಿಂಪಿ, ಎಸ್ ಎಸ್ ಕರ್ನಾಳ, ಎಸ್. ವಿ. ಪಾಟೀಲ, ಲಕ್ಷ್ಮಿಪುತ್ರ ಹಾಳಕಿ, ಜಿ. ಆರ್. ಹಿರೇಮಠ ,ಚಂದು ಪೂಜಾರಿ, ಎಸ್. ಎ.ಹರವಾಳ, ಎಂ.ಎಂ. ಕಲಶೆಟ್ಟಿ, ಎ.ಎ.ಸಿಂದಗಿಕರ, ಚಾಂದಸಾಬ ಅಡಾಡಿ, ಭಗವಂತ ಅತಾಪಿ ಖಾಜೆಸಾಬ ಚೌದರಿ, ಎಂ.ಎ. ಜೋಶಿ, ಎಸ್.ಎಸ್. ಸಾಲೋಟಗಿ, ಎಂ ಎಸ್ ಜೋಗುರ, ಆಯ್.ಕೆ. ಪತ್ತಾರ, ಎಂ ಆರ್ ನಾಗಾವಿ, ಶಾಂತಾಬಾಯಿ ಹಿಂಚಿಗೇರಿ, ಗಂಗಾಬಾಯಿ ಬಾನಾಳ, ಕವಿತಾ ಬೋಗಾರ, ಸಂಗೀತ ರಜಪೂತ ಇತರರು ಇದ್ದರು.