ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ರಾಜ್ಯದಲ್ಲಿ ಕುರುಬ ಸಮುದಾಯಕ್ಕೆ ಎಸ್.ಟಿ. ಮೀಸಲಾತಿ ನೀಡುವಂತೆ ಆಗ್ರಹಿಸಿ ಕುರುಬರ ಎಸ್‌ಟಿ ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಕುರುಬ ಸಮುದಾಯಕ್ಕೆ ಎಸ್.ಟಿ. ಮೀಸಲಾತಿ ನೀಡಬೇಕೆಂದು ಬ್ರಿಟಿಷ್ ಗೆಜೆಟ್ ನಿಂದ ಹಿಡಿದು ಹಲವಾರು ವರದಿಗಳಲ್ಲಿ ಸ್ಪಷ್ಟ ಉಲ್ಲೇಖಗಳು ಇವೆ. ಕುರುಬ ಸಮುದಾಯವೂ ಎಸ್. ಟಿ.ಗೆ ಬೇಕಿರುವ ಎಲ್ಲ ಗುಣಲಕ್ಷಣಗಳನ್ನು ಹೊಂದಿದೆ. ಅಂದಿನ ಆಳರಸರ ಕಾಲದಿಂದ ಇಂದಿನ ಪ್ರಜಾಪ್ರಭುತ್ವದವರೆಗೂ ನಮ್ಮ ಆಚಾರ ವಿಚಾರ ಆಹಾರ ಉಡುಗೆ ತೊಡುಗೆ ಉದ್ಯೋಗ ಆರೋಗ್ಯ ಮತ್ತು ಸಂಸ್ಕಾರ ಎಲ್ಲವುಗಳು ಪ್ರಕೃತಿ ಮಡಿಲಿನ ನೀತಿ ನಿಯಮಗಳಲ್ಲಿ ಬದುಕು ಕಂಡವರು ನಾವು. ಅಡವಿ ಅರಣ್ಯ ಕಾಡುಮೇಡು ಮಳೆಬಿಸಿಲು ಎನ್ನದೆ ಬದುಕಿದ ಜನತೆ ನಾವು.ನಮಗೆ ಪರಿಶಿಷ್ಟ ಪಂಗಡದ ಮೀಸಲಾತಿ ಕೊಡಲೇಬೇಕು.
ಇದು ಹಲವು ದಶಕಗಳ ಹೋರಾಟವು ಇಂದಿಗೂ ಮುಂದುವರೆದಿದೆ. ರಾಜ್ಯದ ಎಲ್ಲಾ ಕುರುಬ ಜನಾಂಗ ಒಳಗೊಂಡ ಕುಲಶಾಸ್ತ್ರ ಅಧ್ಯಯನದ ವರದಿಯನ್ನು ಶೀಘ್ರದಲ್ಲಿ ಕೇಂದ್ರಕ್ಕೆ ಕಳುಹಿಸಿ ಕೇಂದ್ರದ ಮೇಲೆ ಒತ್ತಡ ಹಾಕಿ ರಾಜ್ಯದ ಎಲ್ಲ ಕುರುಬ ಸಮುದಾಯಕ್ಕೂ ಎಸ್ಟಿ ಮೀಸಲಾತಿ ಕೊಡಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುವಂತೆ ಮನವಿ ಪತ್ರ ನೀಡಿದರು. ಇದು ಆಗದೆ ಸಂದರ್ಭದಲ್ಲಿ ರಾಜ್ಯದ ತುಂಬಾ ಬೀದಿಗೆಳಿದು ಹೋರಾಟ ಮಾಡುವ ಅನಿವಾರ್ಯತೆ ನಮಗಿದೆ ಎಂದು ಮುಖಂಡರಾದ ಸೋಮನಾಥ್ ಕಳ್ಳಿಮನಿ ತಿಳಿಸಿದರು.
ಈ ಸಂದರ್ಭದಲ್ಲಿ ಮಲ್ಲು ಬಿದರಿ, ಬೀರಪ್ಪ ಜಮ್ಮನಾಳ, ಸಿದ್ದು ಧನಗೊಂಡ, ಹರಿಬಾ ಪಾವಣೆ, ಮಾದೇವ ಪಾವಣೆ, ಸುಖದೇವ್ ಪಾವಣೆ, ಅರ್ಜುನ್ ಪಾವಣಿ, ಬಾಳು ಸುಳ್ಳ, ಜಗು ಸುಳ್ಳ, ಸೋಫಾನ್ ಖರಾತ್, ಮಾಳು ಗುಗದಡ್ಡಿ ಮತ್ತಿತರು ಉಪಸ್ಥಿತರಿದ್ದರು.