ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಲ್ಲಿ ಬಾಕಿಯಿರುವ ಎಲ್ಲ ಶಾಲಾ ಮಕ್ಕಳ ಆಧಾರ್ ಕಾರ್ಡ್ ನೋಂದಣಿಯನ್ನು ೩ ತಿಂಗಳೊಳಗಾಗಿ ಪೂರ್ಣಗೊಳಿಸುವಂತೆ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರು ಅವರು ಸೂಚಿದರು.
ಗುರುವಾರ ಜಿಲ್ಲಾಧಿಕಾರಿಗಳ ಕೆಸ್ವಾನ್ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಆಧಾರ ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ಈ ಸೂಚನೆ ನೀಡಿದ ಅವರು, ಆಧಾರ ಕಾರ್ಡ ಹೊಂದದೇ ಇರುವವರನ್ನು ಮಕ್ಕಳನ್ನು ಗುರುತಿಸಿ, ಶಾಲಾ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಕಾರದೊಂದಿಗೆ ಮೂರು ತಿಂಗಳೊಳಗಾಗಿ ಆಧಾರ ಕಾರ್ಡ್ ಒದಗಿಸಲು ಕ್ರಮವಹಿಸುವಂತ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶಾಲೆಯ ಮುಖ್ಯೋಪಾಧ್ಯಾಯರು ಯು ಐ ಡಿಎಐ ಮೂಲಕ ಬಾಕಿ ಉಳಿಸಿಕೊಳ್ಳದೇ ನಿಗದಿತ ಕಾಲಮಿತಿಯಲ್ಲು ಅಂತಹ ಮಕ್ಕಳನ್ನು ಗುರುತಿಸಿ ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸಿಕೊಂಡು ಆಧಾರ ಪ್ರಗತಿ ಸಾಧಿಸಿ ಪೂರ್ಣಗೊಳಿಸುವಂತೆ ಅವರು ಸೂಚಿಸಿದರು.
ಈ ಕುರಿತಾಗಿ ಜಿಂಗಲ್ಸ್, ಕಸ ವಿಲೇವಾರಿ ವಾಹನಗಳ ಮೂಲಕ ಹೆಚ್ಚಿನ ಪ್ರಚಾರ ಕೈಗೊಳ್ಳುವಂತೆ ಅವರು ತಿಳಿಸಿದರು.
ಎಲ್ಲ ಆಧಾರ ಕೇಂದ್ರಗಳಿಗೆ ಅಧಿಕಾರಿಗಳು ಪ್ರತಿ ತಿಂಗಳು ಭೇಟಿ ನೀಡಿ, ಪರಿಶೀಲನೆ ನಡೆಸಿ, ಸಮಗ್ರ ಮಾಹಿತಿ ಪಡೆದುಕೊಂಡು ಬಾಕಿ ಅರ್ಜಿಗಳನ್ನು ಆದಷ್ಟು ಶೀಘ್ರ ವಿಲೇವಾರಿ ಮಾಡುವಂತೆ ಸೂಚಿಸಿದರು.
ಜಿಲ್ಲೆಯಲ್ಲಿರುವ ಆಧಾರ ಕೇಂದ್ರಗಳಲ್ಲಿ ಯಾವುದೇ ಲೋಪ ಕಂಡುಬAದಲ್ಲಿ ಅಂತಹವರ ವಿರುದ್ಧ ಪ್ರಕರಣ ದಾಖಲಾಗಿಸುವುದೂ ಸೇರಿದಂತೆ ಇಂತಹ ವಿಷಯಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಅಧಿಕಾರಿಗಳಿಗೆ ಅವರು ಸೂಚಿಸಿದರು.
ಆಧಾರ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳು ಕಡ್ಡಾಯವಾಗಿ ಗುರುತಿನ ಚೀಟಿ ಧರಿಸಿರಬೇಕು. ಆಧಾರ ಕಾರ್ಡ್ ತಿದ್ದುಪಡಿಗಳ ಅನುಗುಣವಾಗಿ ದರ ಪ್ರದರ್ಶನ ಫಲಕದಲ್ಲಿ ಅಳವಡಿಸಬೇಕು. ದಾಖಲೆ ಅಪೂರ್ಣವಿರುವ ೧೦ ವರ್ಷಗಳ ಮೆಲ್ಪಟ್ಟ ಆಧಾರ ಕಾರ್ಡ್ ಗಳನ್ನು ನವೀಕರಿಸಿಕೊಳ್ಳಬೇಕು.ಆಧಾರ ಕಾರ್ಡ್ ತಿದ್ದುಪಡಿ ಇತ್ಯಾದಿ ಸರಿಪಡಿಸಲು ಜನರು ಬೇರೆಡೆ ಅಲೆದಾಡುವುದನ್ಬು ತಪ್ಪಿಸಿ ಶಿಬಿರ ಆಯೋಜಿಸಲಾಗುವುದು ಸಾರ್ವಜನಿಕರು ಈ ಸದುಪಯೋಗ ಪಡೆಸಿಕೊಳ್ಳುವತ್ತ ಸೂಕ್ತ ಜಾಗೃತಿ ಒದಗಿಸುವಂತೆ ಅವರು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿಯ ಯೋಜನಾ ಅಂದಾಜು ಮತ್ತು ಮೌಲ್ಯ ಮಾಪನಅಧಿಕಾರಿಗಳಾದ ನಾಗಭೂಷಣ ಎಸ್ ಮಾಡಗಿ, ಜಿಲ್ಲಾ ಸಂಖ್ಯಾ ಸಂಗ್ರಹಣ ಇಲಾಖೆಯ ಸಹಾಯಕ ನಿರ್ದೇಶಕರಾದ ಎ.ಬಿ. ಮಣಿಯಾರ, ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಬಿ.ಸಿದ್ದಯ್ಯ, ಜಿಲ್ಲಾಧಿಕಾರಿ ಕಚೇರಿಯ ಶಿರಸ್ತೇದಾರರಾದ ಪುಷ್ಪಾ ಮ್ಯಾಗಿನಕೇರಿ, ಎ.ಜಿ.ಎಸ್.ಕೆ ಸಲಹೆಗಾರರಾದ ಶಾರದಾ ಎ.ಎಚ್, ಸೌಮ್ಯಾ ಶಕೀ, ಜಿಲ್ಲಾ ಆಧಾರ ಸಮಾಲೋಚಕರಾದ ಪ್ರಭು ಉಪಸ್ಥಿತರಿದ್ದರು.