ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ನಿಡಗುಂದಿ ತಾಲೂಕಿನ ಹಿರಿಯ ರೈತ ಧುರೀಣ ಬಸವರಾಜ ಶಿವಪ್ಪ ಕುಂಬಾರ ಅವರು ಕನಾ೯ಟಕ ರಾಜ್ಯ ರೈತ ಸಂಘದ ಕಾರ್ಯಕಾರಿ ಸಮಿತಿಯ ನೂತನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.
ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಬಸವರಾಜ ಕುಂಬಾರ ಅವರನ್ನು ರೈತ ಸಂಘದ ಕಾರ್ಯಕಾರಿ ಸಮಿತಿಗೆ ನೂತನ ಕಾರ್ಯದರ್ಶಿಯನ್ನಾಗಿ ನೇಮಕಗೊಳಿಸಿ ಆದೇಶ ಹೊರಡಿಸಿದ್ದು, ಸಂಘದ ನೀತಿ ಸಿದ್ದಾಂತಗಳಿಗೆ ಬಗ್ದರಾಗಿ ಕಾಯಕ ಗೈಯಲು ಸೂಚಿಸಿದ್ದಾರೆ.
ಪ್ರತಿ ಜಿಲ್ಲಾ ಸಮಿತಿ, ತಾಲೂಕು ಸಮಿತಿ ಸೇರಿದಂತೆ ಗ್ರಾಮ ಪಂಚಾಯತಿ ಮಟ್ಟದಲ್ಲಿ ರೈತ ಸಂಘ,ಹಸಿರು ಸೇನೆ ಸಂಘಟನೆಯನ್ನು ಇನ್ನಷ್ಟು ಬಲವಾಗಿ ಸಂಘಟಿಸುವ ಹೊಣೆಗಾರಿಕೆ ಬಸವರಾಜ ಕುಂಬಾರ ಅವರಿಗೆ ನೀಡಿದ್ದಾರೆ. ಆ ನಿಟ್ಟಿನಲ್ಲಿ ರೈತಪರ ಹಿತಕಾಪಾಡುವ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸಿಕೊಂಡು ಬರಬೇಕೆಂದು ಆಶಿಸಿದ್ದಾರೆ. ಈ ನೇಮಕಾತಿ ಆದೇಶಕ್ಕೆ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಹಾಗೂ ಪ್ರಧಾನ ಕಾರ್ಯದರ್ಶಿ ವೀರಭದ್ರಸ್ವಾಮಿ ಜಂಟಿಯಾಗಿ ಅಂಕಿತ ಹಾಕಿ ಆದೇಶಿಸಿದ್ದಾರೆ.