ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಇಂಡಿ ತಾಲೂಕಿನ ವಿವಿಧ ೨೪ ಸಹಕಾರಿ ಸಂಘಗಳು ನಿಯಮಾನುಸಾರ ಕಾರ್ಯನಿರ್ವಹಿಸದೇ ಸ್ಥಗಿತಗೊಂಡಿರುವ ಸೌಹಾರ್ದ ಸಹಕಾರಿ ಸಂಘಗಳನ್ನು ಸಮಾಪನೆ ಮಾಡಲು ಕ್ರಮ ವಹಿಸಲಾಗುತ್ತಿದ್ದು, ಈ ಕುರಿತು ಇಂಡಿ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಆಕ್ಷೇಪಣೆಗಳನ್ನು ಆಹ್ವಾನಿಸಿದ್ದಾರೆ.
ಇಂಡಿ ಉಪ ವಿಭಾಗದಲ್ಲಿ ನಿಯಮಾನುಸಾರ ಕಾರ್ಯನಿರ್ವಹಿಸದೇ ಇರುವ ಶ್ರೀ ಬಸವೇಶ್ವರ ಸೌಹಾರ್ದ ಪತ್ತಿನ ಸಹಕಾರಿ ನಿ., ಇಂಡಿ, ಸಿಂದಗಿ ತಾಲೂಕಿನ ಶ್ರೀ ಬಿಸಿಲು ಸಿದ್ದೇಶ್ವರ ಸೌಹಾರ್ದ ಪತ್ತಿನ ಸಹಕಾರಿ ನಿ., ಗೋಡಿಹಾಳ, ಕೌಶಲ್ಯ ಸೌಹಾರ್ದ ಪತ್ತಿನ ಸಹಕಾರಿ., ಸಿಂದಗಿ, ಶ್ರೀ ಸಿದ್ಧರಾಮೇಶ್ವರ ಸೌಹಾರ್ದ ಪತ್ತಿನ ಸಹಕಾರಿ ನಿ.,ಇಂಡಿ, ಶ್ರೀ ದುರ್ಗಾದೇವಿ ಪ.ಜಾ.ಮತ್ತು ಪ.ಪಂ. ಸೌಹಾರ್ದ ಪತ್ತಿನ ಸಹಕಾರಿ ನಿ., ಹೊರ್ತಿ, ಶ್ರೀ ಮುಕ್ತಾದೇವಿ ಪ.ಜಾ. ಮತ್ತು ಪ.ಪಂ. ವಿವಿದೋದ್ದೇಶಗಳ ಸೌಹಾರ್ದ ಪತ್ತಿನ ಸಹಕಾರಿ ನಿ., ಹಡಲಸಂಗ, ಸಮೃದ್ದಿ ಪತ್ತಿನ ಸೌಹಾರ್ದ ಪತ್ತಿನ ಸಹಕಾರಿ ನಿ., ದೇವರಹಿಪ್ಪರಗಿ, ಸಿಂದಗಿ ಶ್ರೀ ಓಂ ಸಾಯಿ ಸೌಹಾರ್ದ ಪತ್ತಿನ ಸಹಕಾರಿ ನಿ., ಸಿಂದಗಿ, ಕಾರ್ಮಿಕ ಕಲ್ಯಾಣ ಸೌಹಾರ್ದ ಪತ್ತಿನ ಸಹಕಾರಿ ನಿ., ಗುಬ್ಬೇವಾಡ, ಶ್ರೀ ಬೀರಲಿಂಗೇಶ್ವರ ಸೌಹಾರ್ದ ಪತ್ತಿನ ಸಹಕಾರಿ ನಿ.,ಸಿಂದಗಿ, ಶ್ರೀ ಬಸವಸಿರಿ ಸೌಹಾರ್ದ ಪತ್ತಿನ ಸಹಕಾರಿ ನಿ., ಸಿಂದಗಿ, ಶ್ರೀ ಯಶಸ್ವಿನಿ ಮಹಿಳಾ ಸೌಹಾರ್ದ ಪತ್ತಿನ ಸಹಕಾರಿ ನಿ.,ಸಿಂದಗಿ, ತೇಜಸ್ವಿನಿ ಮಹಿಳಾ ವಿಕಾಸ ಸೌಹಾರ್ದ ಪತ್ತಿನ ಸಹಕಾರಿ ನಿ., ಸಿಂದಗಿ, ಇಂಡಿ ಸಾಯಿಸಮೃದ್ದಿ ವಿವಿದೋದ್ದೇಶಗಳ ಸೌಹಾರ್ದ ಸಹಕಾರಿ ನಿ.,ಇಂಡಿ, ಶ್ರೀ ದವಳಮಲಿಕ ಸೌಹಾರ್ದ ಪತ್ತಿನ ಸಹಕಾರಿ ನಿ., ಯಂಕಂಚಿ, ಶ್ರೀ ರಾಣಿ ಚನ್ಮಮ್ಮ ಸೌಹಾರ್ದ ಪತ್ತಿನ ಸಹಕಾರಿ ನಿ., ಸಿಂದಗಿ, ಶ್ರೀ ಸೂಗೂರೇಶ್ವರ ಸೌಹಾರ್ದ ಪತ್ತಿನ ಸಹಕಾರಿ ನಿ., ಕೊಕಟನೂರ, ಶ್ರೀ ಗುರು ಬಸವ ವಿವಿದೋದ್ದೇಶಗಳ ಸೌಹಾರ್ದ ಸಹಕಾರಿ ನಿ., ಇಂಡಿ, ಆಲಮೇಲ ಪತ್ತಿನ ಸೌಹಾರ್ದ ಸಹಕಾರಿ ನಿ., ಆಲಮೇಲ, ಶ್ರೀ ಸೇವಾಲಾಲ ಬಂಜಾ ಪಜಾ/ಪಪಂ ಸೌಹಾರ್ದ ಸಹಕಾರಿ ನಿ., ಹಡಲಸಂಗ, ಶ್ರೀ ಶಾಂತವೀರ ಸೌಹಾರ್ದ ಪತ್ತಿನ ಸಹಕಾರಿ ನಿ., ಸಿಂದಗಿ, ಸಿಂದಗಿ ಶ್ರೀ ಪರಮಾನಂದ ಸೌಹಾರ್ದ ಪತ್ತಿನ ಸಹಕಾರಿ ನಿ., ಸಿಂದಗಿ, ಕವಾಡ ಆದರ್ಶ ವಿವಿದೋದ್ದೇಶ ಸೌಹಾರ್ದ ಸಹಕಾರಿ ನಿ., ಜಿಗಜೀವಣಗಿ ಹಾಗೂ ಶ್ರೀ ನವಚೈತನ್ಯ ಸೌಹಾರ್ದ ಪತ್ತಿನ ಸಹಕಾರಿ ನಿ., ಝಳಕಿ ಸಂಘಗಳಿಗೆ ಈಗಾಗಲೇ ಕರ್ನಾಟಕ ಸೌಹಾರ್ದ ಸಹಕಾರಿಗಳ ಕಾಯ್ದೆ ೧೯೯೭ ಕಲಂ-೪೮(೨)(ಸಿ) ರಡಿ ಏಕೆ ದಂಡು ಸುತ್ತುಬಾರದೆಂದು ೩೦ ದಿನಗಳ ಕಾಲಾವಕಾಶ ನೀಡಿ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿದೆ.
ಅಂತಿವಾಗಿ ಈ ಪ್ರಕಟಣೆಯ ಮೂಲಕ ಆಕ್ಷೇಪಣೆಗಳು, ಹೇಳಿಕೆಗಳನ್ನು ಆಹ್ವಾನಿಸಲಾಗಿದ್ದು, ಈ ಪ್ರಕಟಣೆಯ ೧೫ ದಿನಗಳೊಳಗಾಗಿ ಖುದ್ದಾಗಿ ಸೌಹಾರ್ದ ಸಹಕಾರಿಗಳ ಸಹಾಯಕ ನಿಬಂಧಕರ ಕಚೇರಿಗೆ ಹಾಜರಾಗಿ ತಮ್ಮ ಹೇಳಿಕೆ, ದಾಖಲೆಗಳನ್ನು ಸಲ್ಲಿಸುವಂತೆ ಇಂಡಿ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.