ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ೨೦೨೫-೨೬ನೇ ಸಾಲಿನಲ್ಲಿ ಡಿಸೆಂಬರ್ ೨೧ ರಿಂದ ೨೩ ರವರೆಗೆ ಮೌಲ್ಯವರ್ಧನೆ ಮತ್ತು ರಫ್ತು ಅವಕಾಶಗಳಿಗಾಗಿ ನಿಖರ ತೋಟಗಾರಿಕೆ ಎಂಬ ಧ್ಯೇಯದೊಂದಿಗೆ ತೋಟಗಾರಿಕೆ ಮೇಳವನ್ನು ಮುಖ್ಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ತೋಟಗಾರಿಕಾ ಮೇಳದಲ್ಲಿ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆ ವ್ಯಾಪ್ತಿಯಲ್ಲಿ ಬರುವ ೨೪ ಜಿಲ್ಲೆಗಳ ಪ್ರತಿ ಜಿಲ್ಲೆಗೆ ಒಬ್ಬರಂತೆ ಶ್ರೇಷ್ಠ ರೈತ, ರೈತ ಮಹಿಳೆ ಆಯ್ಕೆ ಮಾಡಿ ಸೂಕ್ತ ಬಹುಮಾನದೊಂದಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು.
ಜಿಲ್ಲೆಯ ರೈತ, ರೈತ ಮಹಿಳೆಯರು ಅರ್ಜಿ ನಮೂನೆಯನ್ನು ಮುಖ್ಯಸ್ಥರು, ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರ,ತಿಡಗುಂದಿ ಅಥವಾ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆ ಇವರಿಂದ ಪಡೆಯಬಹುದು ಅಥವಾ ವೆಬ್‌ಸೈಟ್ www.uhsbagalkot.karnataka.gov.inಮೂಲಕ ಪಡೆದು, ಭರ್ತಿ ಮಾಡಿ, ನವೆಂಬರ್ ೫, ೨೦೨೫ ರೊಳಗಾಗಿ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಮೊ: ೯೪೮೦೬೯೬೩೯೦ ಅಥವಾ ಶುಲ್ಕ ರಹಿತ ಉದ್ಯಾನ ಸಹಾಯವಾಣಿ ಸಂಖ್ಯೆ ೧೮೦೦ ೪೨೫ ೭೯೧೦ ಗೆ ಸಂಪರ್ಕಿಸಬಹುದು ಎಂದು ತಿಡಗುಂದಿ ತೋಟಗಾರಿಕೆ ಸಂಶೋಧನಾ ಮತ್ತು ವಿಸ್ತರಣಾ ಕೇಂದ್ರದ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.