ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಕಳೆದ ೪೫ ದಿನಗಳಿಂದ ಕೆಟ್ಟು ನಿಂತಲ್ಲೆ ನಿಂತಿರುವ ಅಂಬ್ಯುಲೇನ್ಸ ದುರಸ್ತಿಗೊಳಿಸಿ ರೋಗಿಗಳ ಹಾಗೂ ಅಪಘಾತ ಸೇವೆಗೆ ಲಭ್ಯವಾಗುವಂತೆ ನೋಡಿಕೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿ ಮನವಿ ಸಲ್ಲಿಸಿದ್ದಾರೆ.
ಈ ವೇಳೆ ಮಾತನಾಡಿದ ಮುಖಂಡರು, ಸರಕಾರದ ಕೆಲಸ ದೇವರ ಕೆಲಸ ಸೇವೆಗೆ ಅಂಬ್ಯುಲೆನ್ಸ ಇಲ್ಲದೆ ನಿತ್ಯ ರೋಗಿಗಳ ಪರದಾಟ ಮುಂದುವರೆದಿದೆ. ಇದನ್ನು ಸಾಕಷ್ಟು ಬಾರಿ ಮೇಲಾಧಿಕಾರಿಗಳ ಗಮನಕ್ಕೂ ತಂದರೂ ಪ್ರಯೋಜನ ಇಲ್ಲದಂತಾಗಿದೆ. ಆದರೆ ಅಧಿಕಾರಿಗಳು ಯಾವುದೆ ಸಂಬಂಧವಿಲ್ಲ ಎನ್ನುವಂತೆ ವರ್ತಿಸುತ್ತಿದ್ದಾರೆ. ಇನ್ನಾದರೂ ಆದಷ್ಟು ಬೇಗನೆ ಅಧಿಕಾರಿಗಳು ಅಂಬ್ಯೂಲೆನ್ಸ ಸೇವೆಗೆ ಅನುಕೂಲ ಮಾಡಿಕೊಡಬೇಕೆಂದು ಪ್ರಮುಖರಾದ ಶಿವಶಂಕರಯ್ಯಾ ಜಿ ಮಠ, ರೈತ ಸಂಘ ಹಾಗೂ ಹಸೀರು ಸೇನೆ ಜಿಲ್ಲಾ ಸಂಚಾಲಕ ನಜೀರ ನಂದರಗಿ, ಶಿವಪ್ಪ ಪಟ್ಟಣಶೆಟ್ಟಿ ಆಗ್ರಹಿಸಿದ್ದಾರೆ.
“ಈಗಾಗಲೆ ಡಿಎಚ್ಓ ಅವರ ಗಮನಕ್ಕೆ ಈ ವಿಷಯ ತರಲಾಗಿದೆ. ಅಂಬ್ಯುಲೆನ್ಸ ದುರಸ್ತಿ ಮಾಡಲಾಗುವದೆಂದು ಹೇಳಿದ್ದಾರೆ. ಯಾವಾಗ ಮಾಡಿಸ್ತಾರೋ ಗೊತ್ತಿಲ್ಲ.”
– ಡಾ ಅಕ್ಷಯಕುಮಾರ ವಾಗಮೋರೆ
ಪ್ರಾಥಮಿಕ ಆರೋಗ್ಯ ಕೇಂದ್ರ, ತಿಕೋಟಾ.