ಉದಯರಶ್ಮಿ ದಿನಪತ್ರಿಕೆ
ಗದಗ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕದಂಬ ಸೈನ್ಯ ರಾಜ್ಯ ಅಧ್ಯಕ್ಷ ಬೇಕ್ರಿ ರಮೇಶ್ ಮತ್ತು ಕನಾ೯ಟಕ ರಾಜ್ಯ ಶ್ರೀ ಪಂ ಪುಟ್ಟರಾಜ ಗವಾಯಿ ರೈತ ಸಂಘ ರಾಜ್ಯ ಅಧ್ಯಕ್ಷ ಎಂ ಪಿ ಮುಳಗುಂದ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಕಾಯಾ೯ಲಯಕೆ ತೆರಳಿ ಮನವಿ ಸಲ್ಲಿಸಲಾಯಿತು.
ಈ ವೇಲೆ ಮಾತನಾಡಿದ ಉಭಯ ಮುಖಂಡರು, ದ್ವಿಭಾಷಾ ನೀತಿ ಜಾರಿಗೆ ತಂದಿರುವಂತೆ ಮತ್ತು ಕನ್ನಡ ಕನ್ನಡಿಗರ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊಗಳನ್ನು ಬಿತ್ತರಿಸಿ ಕನ್ನಡಿಗರು ಪರಭಾಷಿಕರ ಮೇಲೆ ಪುಂಡಾಟಿಕೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಸುಳ್ಳು ಆರೋಪ ಮಾಡಿ ಬಿತ್ತರಿಸುತಿದ್ದಾರೆ. ಕನ್ನಡಿಗರ ಮೇಲೆ ದೌರ್ಜನ್ಯ ಪುಂಡಾಟಿಕೆ ನಡೆಸುತ್ತಿದ್ದಾರೆ. ಇಂತಹವರ ವಿರುದ್ಧ ನಾಡ ದ್ರೋಹ
ಕಾನೂನು ಜಾರಿಗೆ ತರಲೇಬೇಕು, ಹೊರ ರಾಜ್ಯ , ಬಾಂಗ್ಲಾ ದೇಶದ ಆಕ್ರಮ ವಲಸಿಗರಿಗೆ ಸುಮಾರು ೭೦ ಸಾವಿರ ಹೆಚ್ಚಿನ ಪಡಿತರ ಚೀಟಿ ರದ್ದು ಮಾಡಬೇಕು. ವಿಧಾನ ಸೌಧ ಮುಂದೆ ಕದಂಬ ಮಯೂರ ವರ್ಮ, ಚಾಲುಕ್ಯ ಪರಮೇಶ್ವರ ಇಮ್ಮಡಿ ಪುಲಿಕೇಶಿ ಪುತ್ಥಳಿ ಸ್ಥಾಪಿಸಬೇಕು, ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ, ಡಾ ಪಂಡಿತ ಪುಟ್ಟರಾಜ ಗವಾಯಿಗಳ ಹೆಸರನ್ನು ಗದುಗಿನ ರೈಲ್ವೆ ನಿಲ್ದಾಣಕ್ಕೆ ನಾಮಕರಣ ಮಾಡಬೇಕು. ಅಲ್ಲದೇ ಅವರಿಗೆ ಮರಣೋತ್ತರ ಭಾರತ ರತ್ನ ನೀಡಬೇಕು ಎಂದು ಆಗ್ರಹಿಸಿದರು.
ಈ ವೇಳೆ ಕದಂಬ ಸೈನ್ಯ ರಾಜ್ಯ ಕಾರ್ಯದರ್ಶಿ ವಿನಾಯಕ ಸೊಂಡೂರ, ಬಸವನಬಾಗೇವಾಡಿ ತಾಲೂಕ ಅಧ್ಯಕ್ಷ ರಾಜೇಸಾಬ ಪಿಂಜಾರ(ನದಾಫ್) ಹಾಗೂ ಕದಂಬ ಸೈನಿಕರು ಇದ್ದರು .