ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಾಬ್ಧಿ ವರ್ಷದಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಭವ್ಯಪಥಸಂಚಲನ ಜನರ ಮನಸೂರೆಗೊಂಡಿತ್ತು.
ಅಪಾರ ಸಂಖ್ಯೆಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ಗಣವೇಷಧಾರಿಗಳು ಪಟ್ಟಣದ ಶ್ರೀಬಸವೇಶ್ವರ ಅಂತರಾಷ್ಟ್ರೀಯ ವಿದ್ಯಾಲಯದ ಆವರಣದಲ್ಲಿ ಜಮಾಯಿಸಿದ ನಂತರ ಪಥಸಂಚಲನ ಆರಂಭವಾಗಿ ಪ್ರಮುಖ ರಸ್ತೆಗಳ ಮಾರ್ಗವಾಗಿ
ಸಮಾರೋಪ ಸಮಾರಂಭ ನಡೆಯುವ ಬಸವೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ಆವರಣಕ್ಕೆ ಪಥ ಸಂಚಲನ ತಲುಪಿತು.
ಪಥಸಂಚಲನ ಮಾರ್ಗದುದ್ದಕ್ಕೂ ಸ್ವಯಂಸೇವಕರ ಮೇಲೆ ಜನರು ಪುಷ್ಪ ವೃಷ್ಟಿಗೈದರು. ಮಾರ್ಗದಲ್ಲಿ ಅಲ್ಲಿಲ್ಲಿ ಬಾಲಕರು ದೇಶಭಕ್ತರ ವೇಷಭೂಷಣದೊಂದಿಗೆ ಗಮನ ಸೆಳೆದರು.
ಶಿವಾಜಿ ವೃತ್ತದಲ್ಲಿ ಶಿವಾಜಿ ಪ್ರತಿಮೆ, ರಾಣಿ ಚನ್ನಮ್ಮ ವೃತ್ತದಲ್ಲಿ ರಾಣಿ ಚನ್ನಮ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ್ದು ಕಂಡುಬಂದಿತ್ತು. ಪಥಸಂಚಲನದ ಮಾರ್ಗದುದ್ದುಕ್ಕೂ ರಂಗೋಲಿ ಚಿತ್ತಾರ ಹಾಕಲಾಗಿತ್ತು. ಮಾರ್ಗದುದ್ದಕ್ಕೂ ಭಾರತ ಮಾತೆಗೆ ಜೈಕಾರ ಕೇಳಿಬಂದಿತ್ತು.
ಪಥಸಂಚಲನದಲ್ಲಿ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ, ರಾಜಶೇಖರ ಕಲ್ಲೂರ, ಸಂಗನಗೌಡ ಚಿಕ್ಕೊಂಡ, ಮುತ್ತು ಚಿಕ್ಕೊಂಡ, ಮಹಾದೇವ ಬಿರಾದಾರ, ಸಂತೋಷ ನಾಯಕ, ವಿನೂತ ಕಲ್ಲೂರ, ಪ್ರವೀಣ ಪವಾರ, ಮಣಿಕಂಠ ಕಲ್ಲೂರ, ಬಸವರಾಜ ಬಿಜಾಪುರ, ಕಲ್ಲು ಸೊನ್ನದ, ಶಂಕರಗೌಡ ಪಾಟೀಲ, ಸಿದ್ರಾಮ ಕಾಖಂಡಕಿ, ರಾಜು ಮುಳವಾಡ, ಸತೀಶ ಕ್ವಾಟಿ, ಮಲ್ಲಿಕಾರ್ಜುನ ಬೆಳ್ಳುಬ್ಬಿ, ಗೋಪಾಲ ಚಿಂಚೋಳಿ, ಡಾ.ಕರುಣಕರ ಚೌಧರಿ ಸೇರಿದಂತೆ ಇತರರು ಭಾಗವಹಿಸಿದ್ದರು.