ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ಸಕಲ ಜೀವಿಗಳಲ್ಲೂ ಅಹಿಂಸೆಯಿಂದ ಜೀವಿಸುವ ಸಕಲ ಜೀವರಾಶಿಯಲ್ಲೂ ಪ್ರೇಮಭಾವ ಹೊಂದುವ ಗುಣವೇ ನೈಜ ಧರ್ಮವಾಗಿದೆ ಎಂದು ಹಳಿಂಗಳಿ ಭದ್ರಗಿರಿಯ ಆಚಾರ್ಯ 108 ಮುನಿ ಕುಲರತ್ನಭೂ ಷಣ ಮಹಾರಾಜರು ಆಶೀರ್ವಚನ ನೀಡಿದರು.
ಸಮೀಪದ ರಬಕವಿ-ಬನಹಟ್ಟಿ ತಾಲೂಕಿನ ಬಂಡಿಗಣಿಯ ಶ್ರೀ ಬಸವಗೋಪಾಲ ನೀಲಮಾಣಿಕ ಮಠದಲ್ಲಿ ನಡೆದ ವಿಶ್ವಶಾಂತಿಗಾಗಿ ಸರ್ವಧರ್ಮ ಮಹಾಸಂಗಮ-2025 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನುಷ್ಯ ಸೇರಿದಂತೆ ಎಲ್ಲ ಸ್ತರದ ಜೀವಿಗಳಿಗೂ ಭೂಮಿಯಲ್ಲಿ ಬದುಕಲು ಸಮಾನ ಹಕ್ಕಿದೆ. ನಾವು ನೈಜ ಬದುಕುವ ಕಲೆ ಅಳವಡಿಸಿಕೊಂಡು ಯಾರಲ್ಲಿಯೂ ದೋಷ ಕಾಣದೇ ಪ್ರೀತಿಸುವ ಗುಣ ಬೆಳೆಸಿಕೊಳ್ಳಬೇಕು. ನಾವು ಧರ್ಮವನ್ನು ರಕ್ಷಿಸಿದರೆ ಖಂಡಿತ ನಮ್ಮನ್ನು ಧರ್ಮ ರಕ್ಷಿಸುತ್ತದೆ. ನಮ್ಮ ಸಂಸ್ಕೃತಿಯ ಶ್ರೀಮಂತ ಮೌಲ್ಯಗಳನ್ನು ಮುಂದಿನ ತಲೆಮಾರಿಗೂ ಕಲಿಸಿ ನಿಸರ್ಗದ ಜೊತೆಗೆ ಮಿತ್ಪತ್ವದಿಂದ ಬದುಕುವ ಮತ್ತು ದ್ವೇಷಯುತ ವಿಚಾರಗಳನ್ನುತ್ಯಜಿಸಲು ಏಕಾಗ್ರತೆಯ ಮನಸ್ಸಿಗೆ ಧ್ಯಾನ, ಪೂಜೆ ಮೊದಲಾದ ಉಪಕ್ರಮಗಳನ್ನು ಚಾಚು ತಪ್ಪದೇ ರೂಢಿಸಿಕೊಳ್ಳಬೇಕೆಂದರು.
ಬೆಂಗಳೂರಿನ ಹಜರತ್ ಮಹಮ್ಮದ ತನ್ನೀರ್ ಹತ್ತಿ ಮಾತನಾಡಿ, ಸರ್ವರೂ ಒಂದು ಎಂಬ ಭಾವ ಬೆಳೆಸುವ ಮೂಲಕ ಪರಸ್ಪರ ಸಹೋದರತ್ವದ ಜೀವನ ನಡೆಸಿದಾಗ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದರು.
ಏರೇ ಹೊಸಹಳ್ಳಿಯ ಯೋಗಿ ವೇಮನ ಗುರುಪೀಠದ ಜಗದ್ಗುರು ವೇಮನಾನಂದ ಮಹಾಸ್ವಾಮಿಗಳು ಸಮಾನತೆ ಮತ್ತು ಸಹಿಷ್ಣುತೆ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದರು.
ಹಾಸ್ಯನಟ, ಸಂಗೀತ ನಿರ್ದೇಶಕ ಸಾಧು ಕೋಕಿಲಾ ಶ್ರೀಮಠದಲ್ಲಿ ಲಕ್ಷಾಂತರ ಭಕ್ತರು ಸೇರಿರುವುದು ಶ್ರೀದಾನೇಶ್ವರ ಸ್ವಾಮೀಜಿಮೇಲಿನ ಅಚಲನಿಷ್ಠೆಯ ಪ್ರತೀಕವಾಗಿದ್ದು, ಜಾತಿಯ ಸೋಂಕಿಲ್ಲದೇ ಸರ್ವರೂ ಒಂದೇ ಎಂಬ ಬದುಕುವ ಪರಿ ಭಾವದಲ್ಲಿ ಅನುಕರಣೀಯವೆಂದರು.
ಬಾಗಲಕೋಟೆ ಜಿಲ್ಲಾಧಿಕಾರಿ ಎಂ.ಸಂಗಪ್ಪ, ಎಸ್ಪಿ ಸಿದ್ದಾರ್ಥ ಗೋಯಲ್, ಜಿಪಂ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ, ಎಸಿ ಶ್ವೇತಾ ಬೀಡಿಕರ, ಸಿಪಿಐ ಎಚ್.ರ್ಆ. ಪಾಟೀಲ ಸಿಬ್ಬಂದಿ ಸೂಕ್ತ ಬಂದೋಬಸ್ತ ನೀಡಿದ್ದರು. ಬಾಲಗಾಯಕಿ ದಿಯಾ ಹೆಗಡೆ, ಪ್ರವೀಣ ಗಸ್ತಿ ತಂಡ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ವೇದಿಕೆಯಲ್ಲಿ ದಾಸೋಹರತ್ನ ಚಕ್ರವರ್ತಿ ದಾನೇಶ್ವರರು ಅಧ್ಯಕ್ಷತೆ ವಹಿಸಿದ್ದರು. ಬಬಲಾದಿ ಸಿದ್ದರಾಮೇಶ್ವರ ಶ್ರೀ, ಡಾ.ಡೆಂಕ್ ಫನಾಂಡಿಸ್, ಯೋಗಿ ವೇಮನಪೀಠದ ವೇಮನಾನಂದ, ಹಳೆಹುಬ್ಬಳ್ಳವೀರಭಿಕ್ಷಾವರ್ತಿಮಠದಶಿವಶಂಕರಶ್ರೀ, ಬೆಂಗಳೂರಿನ ಹಜರತ್ ಮಹಮ್ಮದ ತನ್ನೀರ್ ಹಾ . ಹೈದರಾಬಾದ್‌ನ ಸೂಫಿ ಸಂತ ಸೈಯದ್ ಬಾಷಾ ಸಾಹೇಬ, ತಂಗಡಗಿಯ ಹಡಪದ ಅಪ್ಪಣ್ಣ ಶ್ರೀ. ಚಿತ್ರದುರ್ಗದ ಸರ್ದಾ ಸೇವಾಲಾಲ ಶ್ರೀ, ಕೋಡಹಳ್ಳಿಯ ಷಡಕ್ಷರಮುನಿ ಶ್ರೀ, ಬೆಳಗಾವಿ ಬ್ರಹ್ಮಕುಮಾರಿಯ ರಾಜಯೋಗಿನಿ ಬಿ.ಕೆ. ಅಂಬಿಕಾಜಿ, ಬೌದ್ಧ ಗುರು ಮುಂಡಗೋಡದ ಗೆಲೆ ಜಂಪಾ ಲೋಬಾಂಗ್ಸ್, ಶಾಸಕ ವಿಜಯಾನಂದ ಕಾಶಪ್ಪನವರ, ಭೀಮಸೇನ ಚಿಮ್ಮನಕಟ್ಟಿ, ಡಾ. ಉಮಾಶ್ರೀ, ಎಸ್.ಜಿ. ನಂಜಯ್ಯನಮಠ, ಆನಂದ ನ್ಯಾಮಗೌಡ, ಸಿದ್ದು ಕೊಣ್ಣೂರ, ಕೆಪಿಸಿಸಿ ಸದಸ್ಯ ಬಸವರಾಜ ಕೊಕಟನೂರ ಇತರರಿದ್ದರು.