ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಪಟ್ಟಣದ ಇತಿಹಾಸ, ಸಂಸ್ಕೃತಿ, ಜನಶ್ರದ್ಧೆ ಹಾಗೂ ಸೇವಾಪರಂಪರೆಯ ಕುರಿತಾಗಿ ಬೆಳಕು ಚೆಲ್ಲುವ ಕೃತಿ ರಚಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಪ್ರಯತ್ನ ಅತ್ಯಂತ ಹೆಮ್ಮೆ ಹಾಗೂ ಸಮಯೋಚಿತವಾಗಿದೆ ಎಂದು ತಹಶೀಲ್ದಾರ ಪ್ರಕಾಶ ಸಿಂದಗಿ ಹೇಳಿದರು.
ಪಟ್ಟಣದ ಕಲ್ಮೇಶ್ವರ ದೇವಸ್ಥಾನದ ಸಭಾಭವನದಲ್ಲಿ ಭಾನುವಾರ ಸೈನಿಕ ನೆಲೆ ಪ್ರಕಾಶನ ಬೆಂಗಳೂರು ಮೂಲಕ ನಿವೃತ್ತಯೋಧ ರಾಜೇಂದ್ರ ನಾಡಗೌಡರ ಸಂಪಾದಕತ್ವದಲ್ಲಿ ರಚಿತಗೊಂಡ ‘ನಮ್ಮ ಊರು ನಮ್ಮ ಹೆಮ್ಮೆ ದೇವರಹಿಪ್ಪರಗಿ’ ಕೃತಿ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ನಮ್ಮ ಗ್ರಾಮ, ಪಟ್ಟಣದ ಪರಂಪರೆ ಅಧ್ಯಯನಕ್ಕೆ ಯುವಜನತೆಗೆ ಭವಿಷ್ಯದಲ್ಲಿ ಇಂತಹ ಕೃತಿಗಳು ಸಹಕಾರಿಯಾಗಬಲ್ಲವು ಎಂದರು.
ಸಿಂದಗಿ ಸದ್ಗುರು ಭೀಮಾಶಂಕರ ಸಂಸ್ಥಾನಮಠದ ದತ್ತಪ್ಪಯ್ಯ ಸ್ವಾಮೀಜಿ ಹಾಗೂ ಸ್ಥಳೀಯ ಗದ್ದುಗೆಮಠದ ಮಡಿವಾಳೇಶ್ವರ ಶ್ರೀಗಳು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ, ಕೃತಿ ರಚನೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಶ್ರಾಂತ ತಹಶೀಲ್ದಾರ್ ಆರ್.ಆರ್.ಮಣ್ಣೂರ ಕೃತಿ ಪರಿಚಯಸಿದರು. ವಿಶ್ರಾಂತ ಪ್ರಾಚಾರ್ಯ ಡಾ.ಮಹಾಂತೇಶ ಗುಬ್ಬೇವಾಡ ಗ್ರಂಥಾವಲೋಕನಗೊಳಿಸಿ ಮಾತನಾಡಿದರು.
ರಾಜೇಂದ್ರ ನಾಡಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.