ವಿಜಯಪುರದ ಶ್ರೀ ಸಿದ್ದೇಶ್ವರ ಬ್ಯಾಂಕ್ ಚುನಾವಣೆ | ಹಳೆಯ ಪೆನಲ್‌ಗೆ ಸದಸ್ಯರ ಒಲವು | ಫಲ ಕೊಟ್ಟ ಸಚಿವ ಶಿವಾನಂದ ಪಾಟೀಲ & ಮಾಜಿ ಸಚಿವ ಪಟ್ಟಣಶೆಟ್ಟಿ ಜಂಟಿ ಕಾರ್ಯತಂತ್ರ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ವಚನ ಪಿತಾಮಹ ಡಾ.ಫ.ಗು. ಹಳಕಟ್ಟಿ ಅವರು ಸ್ಥಾಪಿಸಿದ ಪ್ರತಿಷ್ಠಿತ ಸಿದ್ದೇಶ್ವರ ಬ್ಯಾಂಕ್ ಚುನಾವಣೆಯಲ್ಲಿ ಸಹಕಾರ ಕ್ಷೇತ್ರದ ಚಾಣಾಕ್ಷ ಎಂದೇ ಖ್ಯಾತಿಯಾಗಿರುವ ಸಚಿವ ಶಿವಾನಂದ ಪಾಟೀಲ ಹಾಗೂ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರ ಜಂಟಿ ರಣತಂತ್ರ ಫಲ ಕೊಟ್ಟಿದ್ದು ಹಳೆಯ ಪೆನಲ್’ ಸದಸ್ಯರೇ ಪುನರಾಯ್ಕೆಯಾಗಿದ್ದಾರೆ.
ಅವಿರೋಧ ಆಯ್ಕೆ ನಡೆಯುವ ನಿಟ್ಟಿನಲ್ಲಿ ಸಚಿವ ಶಿವಾನಂದ ಪಾಟೀಲ ಪ್ರಯತ್ನಿಸಿದರಾದರೂ ಸಹ ಚುನಾವಣೆ ನಡೆಯಿತು. ಆದರೂ ಸಹ ಹಳೆಯ ಪೆನಲ್ ಪರ ಬ್ಯಾಂಟಿಂಗ್ ನಡೆಸಿದ್ದ ಸಚಿವ ಶಿವಾನಂದ ಪಾಟೀಲ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಜಂಟಿ ಕಾರ್ಯತಂತ್ರ ನಡೆಸಿ ತಮ್ಮ ಬೆಂಬಲಿತ ಎಲ್ಲ ಪೆನಲ್ ಸದಸ್ಯರನ್ನು ಆಯ್ಕೆಯಾಗಿಸುವ ನಿಟ್ಟಿನಲ್ಲಿ ಯಶಸ್ವಿಯಾಗಿದ್ದಾರೆ.
೧೯ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಹಳೆಯ ಪೆನಲ್ ಸದಸ್ಯರೇ ಆಯ್ಕೆಯಾಗಿದ್ದಾರೆ.
ಬ್ಯಾಂಕನ್ನು ಲಾಭಾಂಶದತ್ತ ಮುನ್ನಡೆಸಿದ್ದು, ಕೋವಿಡ್ ವೇಳೆಯೂ ಬ್ಯಾಂಕ್‌ನ ಸಮರ್ಥ ನಿರ್ವಹಣೆ, ಷೆಡ್ಯೂಲ್ಡ್ ಬ್ಯಾಂಕ್ ಆಗಿಸುವ ನಿಟ್ಟಿನಲ್ಲಿ ಭರವಸೆ ಈ ಎಲ್ಲ ಅಂಶಗಳು ಹಳೆಯ ಪೆನಲ್ ಸದಸ್ಯರ ಗೆಲುವಿಗೆ ಕಾರಣವಾಗಿವೆ. ಪೆನಲ್ ಸದಸ್ಯರು ಈ ಬಾರಿ ವೈಯುಕ್ತಿಕ ಪ್ರಚಾರಕ್ಕಿಂತ ಇಡೀ ಪೆನಲ್‌ಗೆ ಮತಚಲಾಯಿಸುವಂತೆ ಒಗ್ಗಟ್ಟಿನ ಮಂತ್ರ ಜಪಿಸಿದ್ದು ಸಹ ಪ್ಲಸ್ ಆಗಿದ್ದು, ಒಂದೇ ಒಂದು ಸ್ಥಾನ ಕೈ ತಪ್ಪಿ ಹೋಗದಂತಾಯಿತು.
ಮಧ್ಯರಾತ್ರಿ ವೇಳೆಗೆ ಫಲಿತಾಂಶ ಸ್ಪಷ್ಟವಾಗಿ ಪ್ರಕಟಗೊಳ್ಳುತ್ತಿದ್ದಂತೆ ವಿಜಯೋತ್ಸವ ರಂಗೇರಿತು. ಪಟಾಕಿಗಳ ಸದ್ದು ಕಿವಿಗಡಚಿಕ್ಕಿತು. ಗುಲಾಲುಗಳ ಎರಚಾಟ ನಡೆಯಿತು. ಅಭಿಮಾನಿಗಳು ಗೆಲುವು ಸಾಧಿಸಿದ ನಿರ್ದೇಶಕರನ್ನು ಹೆಗಲ ಮೇಲೆ ಹೊತ್ತು ಹೆಜ್ಜೆ ಹಾಕಿ ಸಂಭ್ರಮಿಸಿದ ದೃಶ್ಯ ಎಲ್ಲೆಡೆ ಕಂಡು ಬಂದಿತು. ನಂತರ ಆಯ್ಕೆಯಾದ ಎಲ್ಲ ನಿರ್ದೇಶಕರು ಶ್ರೀ ಸಿದ್ದೇಶ್ವರ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

“ಕೋವಿಡ್ ವೇಳೆಯಲ್ಲಿ ಅನೇಕ ಸವಾಲುಗಳು ಎದುರಿಸಿದರೂ ಸಹ ಬ್ಯಾಂಕ್ ಸಮರ್ಥವಾಗಿ ಮುನ್ನಡೆಸಲಾಗಿತ್ತು, ನಷ್ಟದಲ್ಲಿಯೇ ಇದ್ದ ಬ್ಯಾಂಕ್ ಎಲ್ಲರ ವಿಶ್ವಾಸ ಬಲದ ಮೂಲಕ ಲಾಭದತ್ತ ಮುನ್ನಡೆದಿದೆ, ನಮಗೆ ಸದಸ್ಯರು ವಿಶ್ವಾಸವಿರಿಸಿ ಇನ್ನೊಮ್ಮೆ ಆಯ್ಕೆ ಮಾಡಿದ್ದಾರೆ, ಅವರ ವಿಶ್ವಾಸವನ್ನು ಉಳಿಸಿಕೊಂಡು ಎಲ್ಲರು ಒಗ್ಗಟ್ಟಾಗಿ ಬ್ಯಾಂಕ್ ಪ್ರಗತಿಗೆ ಶ್ರಮಿಸುತ್ತೇವೆ.”
– ಶ್ರೀಹರ್ಷಗೌಡ ಪಾಟೀಲ
ನಿರ್ದೇಶಕರು

ಗೆಲುವು ಸಾದಿಸಿದ ನಿರ್ದೇಶಕರು ಹಾಗೂ ಪಡೆದ ಮತ
ಸಾಮಾನ್ಯ ಕ್ಷೇತ್ರ
೧) ಗುರು ಗಚ್ಚಿನಮಠ (೪೭೯೧)
೨) ಶ್ರೀಹರ್ಷಗೌಡ ಪಾಟೀಲ (೪೩೯೬)
೩) ಈರಣ್ಣ ಪಟ್ಟಣಶೆಟ್ಟಿ (೪೦೭೨)
೪) ಕರುಣಾ ಔರಂಗಾಬಾದ (೪೦೫೪)
೫) ಸುರೇಶ ಗಚ್ಚಿನಕಟ್ಟಿ (೪೦೫೩)
೬) ವಿಜಯಕುಮಾರ ಇಜೇರಿ (೩೭೩೯)
೭) ಡಾ.ಸಂಜೀವ ಪಾಟೀಲ ಮುಳವಾಡ (೩೬೬೫)
೮) ವೈಜನಾಥ ಕರ್ಪೂರಮಠ (೩೬೩೨)
೯) ಪಾಟೀಲ ವಿಶ್ವನಾಥ ಶಿವನಗೌಡ (೩೬೨೭)
೧೦) ಪಾಟೀಲ ರಾಜೇಂದ್ರ ಮಲಕನಗೌಡ (೩೬೨೪)
೧೧) ರಮೇಶ ಬಿದನೂರ (೩೬೧೫)
೧೨) ರವೀಂದ್ರ ಬಿಜ್ಜರಗಿ (೩೫೧೧)
೧೩) ಪ್ರಕಾಶ ಬಗಲಿ (೩೪೧೭)
ಮಹಿಳಾ ಕ್ಷೇತ್ರ
೧೪) ಭೌರಮ್ಮ ಗೊಬ್ಬೂರ (೩೧೨೨)
೧೫) ಸೌಭಾಗ್ಯ ಭೋಗಶೆಟ್ಟಿ (೩೯೭೫)
ಹಿಂದುಳಿದ ಪ್ರವರ್ಗ : ೧
೧೬) ಗಂಗನಳ್ಳಿ ಗುರುರಾಜ ಸಿದ್ದಪ್ಪ(೩೯೯೦)
೧೭) ಕತ್ತಿ ರಾಜಶೇಖರ ಸಾತಪ್ಪಾ(೨೩೮೩)
ಪರಿಶಿಷ್ಟ ಜಾತಿ ಕ್ಷೇತ್ರ
೧೮) ಸಾಯಬಣ್ಣ ಭೋವಿ (೨೮೬೫)
ಪರಿಶಿಷ್ಟ ಪಂಗಡ ಕ್ಷೇತ್ರ
೧೯) ನಾಯ್ಕೋಡಿ ಅಮೋಘಸಿದ್ದ ಮಳಸಿದ್ದ(೩೮೦೬)