ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ನಗರದ ಎ ಜಿ ದೇಸಾಯಿ ವೃತ್ತದಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ. ಆರ್. ಗವಾಯಿ ಅವರ ಮೇಲೆ ಶೂ ಎಸೆದಿರುವ ಕೃತ್ಯ ಖಂಡಿಸಿ ಜಮಖಂಡಿಯಲ್ಲಿ ಕಾನೂನು ವಿದ್ಯಾರ್ಥಿಗಳು ಖಂಡಿಸಿ ಪ್ರತಿಭಟನೆ ಮಾಡಿದರು.
ಪ್ರತಿಭಟನೆಯ ಉದ್ದೇಶಿಸಿ ಮಾತನಾಡಿದ ಕಾನೂನು ವಿದ್ಯಾರ್ಥಿಗಳ ಒಕ್ಕೂಟದ ಮುಖಂಡ ಹಣಮಂತ ಯಮಗಾರ, ಸಿಜೆಐ ಬಿ. ಆರ್. ಗವಾಯಿ ಅವರಿಗೆ ಮಾತ್ರ ಆದ ಅವಮಾನ ಅಲ್ಲ ಇದು ನಮ್ಮ ಭಾರತ ಮಾತೆಗೆ ಆದ ಅವಮಾನ ಈ ಕೃತ್ಯ ಎಸಗಿದ ಆರೋಪಿಯನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಾನೂನು ವಿದ್ಯಾರ್ಥಿನಿಯಾದ ವಚನಾ ಶೃಂಗೇರಿ ಮಾತನಾಡಿ, ಈ ನಮ್ಮ ದೇಶದಲ್ಲಿ ಸುಪ್ರೀಂ ಕೋರ್ಟ್ ಸಿಜೆಐ ಅವರಿಗೆ ರಕ್ಷಣೆ ಇಲ್ಲ,ಇನ್ನೂ ಸಾಮಾನ್ಯ ಜನರ ಜೀವನ ಅಧೋಗತಿಯಾಗಿದೆ ಮತ್ತು ಆರೋಪಿಯ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ಆತನನ್ನು ಗಡಿಪಾರು ಮಾಡಬೇಕು ಎಂದು ಒತ್ತಾಯ ಮಾಡಿದರು.
ಉದಯ ಒಡೆಯರ ಮಾತನಾಡಿ, ದೇಶದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಸರ್ಕಾರ ಕೂಡಲೇ ಇದನ್ನು ಸರಿ ಪಡಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಆನಂದ್ ರಾಥೋಡ, ಸದಾಶಿವ ಚಲವಾದಿ,ಸಂಗಮೇಶ್ ವಳಕರ, ಸಿದ್ದು ಮೇಟಗುಡ್ಡ್, ಪ್ರವೀಣ್ ಯಡಹಳ್ಳಿ, ಬಸವರಾಜ ಪಟ್ಟಣಶೆಟ್ಟಿ, ಪ್ರವೀಣ್ ಕಾಳೆ ಬಸವರಾಜ ಮದರಖಂಡಿ, ಸದಾಶಿವ ಕಾಂಬಳೆ, ಇಲಿಯಾಸ್ ನದಾಫ, ಮಲಕಾರಿ ಕಾಂಬಳೆ, ಸೌಮ್ಯ ಬಿರೋಜಿ, ರವೀನಾ ಮಡ್ಡಿ, ಬಂದೆ ನವಾಜ್ ಬಿಪಾರಿ ಇತರರು ಉಪಸ್ಥಿತರಿದ್ದರು.