ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ರಾಜ್ಯದ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸಲಾಗುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಕಾರ್ಯವನ್ನು ಪಟ್ಟಣದ ಪಲ್ಲ್ಯೆಕಟ್ಟೆ, ಇಕ್ಬಾಲ ನಗರ, ಬಸವ ನಗರ, ಯಾತ್ರಿ ನಿವಾಸದ ಹತ್ತಿರ ಸೇರಿದಂತೆ ವಿವಿಧೆಡೆ ಸೋಮವಾರ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಅವರು ಭೇಟಿ ಪರಿಶೀಲನೆ ಮಾಡಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ ವೈ.ಎಸ್.ಸೋಮನಕಟ್ಟಿ ಅವರು ಸಮೀಕ್ಷದಾರರ ಭೇಟಿ ಮಾಡಿ ಯಾವುದೇ ಕುಟುಂಬ, ವ್ಯಕ್ತಿ ಉಳಿಯದಂತೆ ಸಮೀಕ್ಷೆದಾರರು ಸಮೀಕ್ಷೆ ಮಾಡಬೇಕು. ಪುರಸಭೆ ವ್ಯಾಪ್ತಿಯಲ್ಲಿ ಬರುವ ಯಾವುದೇ ಕುಟುಂಬ, ವ್ಯಕ್ತಿಯ ಸಮೀಕ್ಷೆ ಆಗದೇ ಹೋಗಿದ್ದರೆ ಅಂತಹವರು ಪುರಸಭೆಯ ಕಾರ್ಯಾಲಯದಲ್ಲಿರುವ ಸಹಾಯವಾಣಿ ಕೇಂದ್ರಕ್ಕೆ ಭೇಟಿ ನೀಡಿ ತಮ್ಮ ಮಾಹಿತಿಯನ್ನು ನೀಡಿದರೆ ಅಂತಹ ಮನೆಗೆ ತೆರಳಿ ಸಮೀಕ್ಷಾದಾರರು ತೆರಳಿ ಸಮೀಕ್ಷೆ ಮಾಡುತ್ತಾರೆ. ಈ ಕುರಿತು ಹೆಚ್ಚಿನ ಮಾಹಿತಿಗೆ ಮೊ-9620121146 ಕರೆ ಜನರು ಕರೆ ಮಾಡಿ ಸದುಪಯೋಗ ಪಡೆದುಕೊಳ್ಳಬಹುದು. ಜನರು ತಮ್ಮ ಮಾಹಿತಿಯನ್ನು ಸ್ವಯಂ ಘೋಷಣೆ ಮಾಡಿಕೊಳ್ಳಲು ಸಹ ಅವಕಾಶವಿದೆ ಎಂದರು.
ಈ ಸಂದರ್ಭದಲ್ಲಿ ಕ್ಷೇತ್ರ ಸಮನ್ವಾಧಿಕಾರಿ ಸುನೀಲ ರಾಠೋಡ, ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿ ಶಾಂತಾಬಾಯಿ ನಿಂಬಾಳ, ಹಿಂದುಳಿದ ವರ್ಗಗಳ ಇಲಾಖೆಯ ಸಿದ್ರಾಮ ಕುರುಬರ, ಸಂಪನ್ಮೂಲ ವ್ಯಕ್ತಿ ಎಂ.ವ್ಹಿ.ಗಬ್ಬೂರ, ಸಿಆರ್ಸಿ ಬಿ.ಎಸ್.ಚನ್ನಗೊಂಡ, ಪುರಸಭೆ ಮುಖ್ಯಾಧಿಕಾರಿ ವಿದ್ಯಾಧರ ಕಲಾದಗಿ, ಪುರಸಭೆ ಅಧ್ಯಕ್ಷೆ ಜಗದೇವಿ ಗುಂಡಳ್ಳಿ, ಪುರಸಭೆ ವ್ಯವಸ್ಥಾಪಕ ಸುರೇಶ ಬಾಗೇವಾಡಿ, ಆರೋಗ್ಯ ನಿರೀಕ್ಷಕ ಮಹೇಶ ಹಿರೇಮಠ ಇತರರು ಇದ್ದರು.