ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಹೂವಿನ ಹಿಪ್ಪರಗಿ ಗ್ರಾಮದ ರಾಜೇಸಾಬ್ ನದಾಫ್ (ಪಿಂಜಾರ್) ಇವರನ್ನು ಬಸವನ ಬಾಗೇವಾಡಿ ತಾಲೂಕಿನ ಕರ್ನಾಟಕ ಕನ್ನಡ ದೀಕ್ಷಾಬದ್ಧ ಸಂಘಟನೆಯಾದ ಕದಂಬ ಸೈನ್ಯ ಸಂಘಟನೆಯ ತಾಲೂಕು ಅಧ್ಯಕ್ಷರನ್ನಾಗಿ ರಾಜ್ಯ ಉಪಾಧ್ಯಕ್ಷ ನಿಂಬಣ್ಣ (ಸಾಗರ್ )ಕಾಂಬಳೆ ಹಾಗೂ ರಾಜ್ಯ ಕಾರ್ಯದರ್ಶಿ ಹಾಗೂ ಜಿಲ್ಲಾಧ್ಯಕ್ಷ ವಿನಾಯಕ್ ಸೊಂಡೂರ್ ಅವರ ವಿನಂತಿ ಮೇರಿಗೆ ರಾಜ್ಯಾಧ್ಯಕ್ಷ ಆಯುಷ್ಮಾನ್ ಬೇಕ್ರಿ ರಮೇಶ್ ಅವರು ಆಯ್ಕೆ ಮಾಡಿ ಆದೇಶಿಸಿದ್ದಾರೆ.
ಬಸವಣ್ಣನ ಜನ್ಮಭೂಮಿಯಲ್ಲಿ ಕನ್ನಡದ ನಾಡು ನುಡಿ ನೆಲಜಲದ ರಕ್ಷಣೆಗೆ ಪ್ರತಿಭದ್ಧರಾಗಿ ಕನ್ನಡತನವನ್ನು ಉಳಿಸಿಕೊಂಡು ಬೆಳೆಸಿಕೊಂಡು ಸಂಘಟನೆಯನ್ನು ಬಲಪಡಿಸಬೇಕೆಂದು ತಮ್ಮ ಆದೇಶದ ಮುಖಾಂತರ ಸೂಚಿಸಿದ್ದಾರೆ ಎಂದು ರಾಜ್ಯ ಕಾರ್ಯದರ್ಶಿ ವಿನಾಯಕ್ ಸೊಂಡುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.