*ಉದಯರಶ್ಮಿ ದಿನಪತ್ರಿಕೆ*
ತಿಕೋಟಾ: ಪಟ್ಟಣದ ಮಲ್ಲಿಕಾರ್ಜುನ ದೇವಸ್ತಾನದ ಹೊಸ ಕಟ್ಟಡ ನಿರ್ಮಿಸಲು ರಾಜು ಬನಪ್ಪ ಮೇತ್ರಿ ಅವರು ಕುಟುಂಬಸ್ತರು ಕುಡಿಕೊಂಡು ಒಂದು ಲಕ್ಷ ಒಂದು ರೂ ತಮ್ಮ ಮನೆಯಲ್ಲಿ ದೇವಸ್ತಾನದ ಕಾರ್ಯದರ್ಶಿ ಬಸವರಾಜ ಬಂಡಿ ಅವರಿಗೆ ನೀಡಿದರು.
ದೇವಸ್ತಾನ ಅಭಿವೃದ್ದಿ ಕುರಿತು ಮಾತನಾಡಿದ ತಿಕೋಟಾ ಹಿರೆಮಠದ ಶಿವಬಸವ ಶಿವಾಚಾರ್ಯರು ದೇವಸ್ತಾನ ಅಭಿವೃದ್ದಿ ಆಗಬೇಕಾದರೆ ಭಕ್ತರ ಕಾಣಿಕೆಯಿಂದ ಮಾತ್ರ ಸಾದ್ಯವಾಗುತ್ತದೆ. ಭಕ್ತರು ತಮ್ಮ ತಮ್ಮ ಶಕ್ತ್ಯಾನುಸಾರ ಕಾಣಿಕೆ ಸಲ್ಲಿಸಿದರೆ ದೇವಸ್ತಾನ ಸಂಪೂರ್ಣ ಅಭಿವೃದ್ದಿಯಾಗುತ್ತದೆ ಎಂದು ಹೇಳಿದರು.
ಇದೆ ಸಂದರ್ಭದಲ್ಲಿ ಎಸ ಎಸ ಸಾಲಿಮಠ, ಆರ ಬಿ ದೇಸಾಯಿ, ರಾವತ ಕಂಭಾರ, ರಾಜು ಕಡಿಬಾಗಿಲ, ಮುರಘೇಶ ಗಣಿ, ಅಪ್ಪು ತೇಲಿ, ಶನ್ಮುಖಯ್ಯಾ ಮಠಪತಿ ಚಿದಾನಂದ ಮಠಪತಿ, ಶಿವಾನಂದ ಚೌಧರಿ, ಬಾಬು ಪರೀಟ, ಸಂತೋಷ ಮಾಳಿ, ಸುನಿಲ ಪರಮಾಜ, ಮಲ್ಲು ಮೇತ್ರಿ, ಪ್ರಕಾಶ ಮೇತ್ರಿ, ಡಾ ಆನಂದ ರಾ ಮೇತ್ರಿ, ಶಿವಪ್ಪ ಕೋಳ್ಳಿ, ಕಲ್ಲಪ್ಪ ಕೋರಿ, ಮತ್ತು ಇತರರಿದ್ದರು.