ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರದಲ್ಲಿ ೨೦೨೫-೨೬ನೇ ಸಾಲಿನ ಪದವಿ ಹಾಗೂ ಸ್ನಾತಕೋತ್ತರ ಪದವಿಗಳ ಜುಲೈ ಆವೃತ್ತಿಯ ಪ್ರವೇಶಾತಿ ಆರಂಭಗೊಂಡಿದ್ದು, ಆಸಕ್ತರು ಅಕ್ಟೋಬರ್ ೧೫ರೊಳಗಾಗಿ www.ksoumysuru.ac.inವೆಬ್‌ಸೈಟ್ ಅಥವಾ ಪ್ರಾದೇಶಿಕ ಕಚೇರಿಗೆ ನೇರವಾಗಿ ಭೇಟಿ ನೀಡಿ ಪ್ರವೇಶಾತಿ ಪಡೆಯಬಹುದಾಗಿದೆ.
ಬಿ.ಎ, ಬಿ.ಕಾಂ, ಬಿ.ಬಿ.ಎ, ಬಿ.ಸಿ.ಎ, ಬಿಎಸ್ಸಿ(ಐ.ಟಿ), ಬಿ.ಎಸ್ಸಿ (೧೪ ಕಾಂಬಿನೇಷನ್ಸ್), ಬಿಎಸ್‌ಡಬ್ಲೂö್ಯ, ಬಿ.ಎಲ್.ಐ.ಎಸ್ಸಿ, ಎಂ.ಎ (೧೪ ವಿಷಯಗಳಲ್ಲಿ), ಎಂ.ಕಾA, ಎಂ.ಬಿ.ಎ (೮ ಕಾಂಬಿನೇಷನ್ಸ್), ಎಂ.ಎಲ್.ಐ.ಎಸ್ಸಿ, ಎಂ.ಎಸ್ಸಿ (೧೭ ವಿಷಯಗಳಲ್ಲಿ), ಎಂ.ಸಿ.ಎ, ಎಂ.ಎಸ್.ಡಬ್ಲೂö್ಯ, ಪಿ.ಜಿ ಸರ್ಟಿಫಿಕೇಟ್ ಪ್ರೋಗ್ರಾಮ್ಸ್, ಡಿಪ್ಲೊಮಾ ಪ್ರೋಗ್ರಾಮ್ಸ್ ಹಾಗೂ ಸರ್ಟಿಫಿಕೇಟ್ ಪ್ರೋಗ್ರಾಮ್ಸ್ಗಳಿಗೆ ಪ್ರವೇಶಾತಿ ಪಡೆಯಬಹುದಾಗಿದೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ವಿಜಯಪುರ ನಗರದ ನ್ಯಾಟಲೈಟ್ ಬಸ್ ನಿಲ್ದಾಣದ ಹತ್ತಿರ ಅಂಬಾ ಭವಾನಿ ದೇವಸ್ಥಾನದ ಎದುರಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರ ಅಥವಾ ಮೊಬೈಲ್ ಸಂಖ್ಯೆ ೯೪೮೩೬೨೮೨೬೭, ೯೪೮೩೯೨೦೦೬೫, ೭೮೯೨೫೫೦೦೫೩ ಹಾಗೂ ೯೧೧೦೨೫೬೭೩೮ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.