ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ತಾಲೂಕಿನ ಓತಿಹಾಳ ಗ್ರಾಮಕ್ಕೆ ಸಂಬಂಧಿಸಿದ ಹಳ್ಳದ ನೀರು ಎಸ್‌ಸಿ/ಎಸ್‌ಟಿ ಕಾಲೋನಿಗೆ ನುಗ್ಗಿ ಅಲ್ಲಿ ವಾಸಿಸುವ ಜನರ ಜೀವನ ಅಸ್ತವ್ಯಸ್ಥಗೊಂಡಿದ್ದು, ಮಕ್ಕಳಿಗೆ, ವಯಸ್ಕರಿಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದ್ದು, ಈ ವಿಷಯವಾಗಿ ಸುಮಾರು ವರ್ಷಗಳಿಂದ ಗ್ರಾಮ ಪಂಚಾಯತ್ ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿರುವುದಿಲ್ಲ ಎಂದು ಗ್ರಾಮಸ್ಥರು ತಹಶೀಲ್ದಾರ್ ಕರೆಪ್ಪ ಬೆಳ್ಳಿ ಅವರಲ್ಲಿ ತಮ್ಮ ಅಳಲನ್ನು ತೊಡಿಕೊಂಡರು.
ಸಿಂದಗಿ ತಾಲೂಕಿನ ಓತಿಹಾಳ ಗ್ರಾಮದ ಹಳ್ಳಕ್ಕೆ ಸಮೀಪವಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಾಲೋನಿಗಳಿಗೆ ಅಕಾಲಿಕ ಮಳೆಯಿಂದ ಜಮೀನು ಮತ್ತು ಹಳ್ಳಕ್ಕೆ ಬಂದ ನೀರು ಇದ್ದಕ್ಕಿದ್ದಂತೆ ಅಲ್ಲಿನ ನಿವಾಸಿಗಳ ಮನೆಗಳಿಗೆ ನುಗ್ಗಿ ತಿರುಗಾಡಲು ಬಾರದೆ ಅಸ್ತವ್ಯಸ್ಥವಾಗಿರುವ ಕಾರಣ ಸಿಂದಗಿ ತಹಶೀಲ್ದಾರ್ ಕಚೇರಿಗೆ ಗ್ರಾಮಸ್ಥರು ಏಕಾಏಕಿ ಬಂದು ಪ್ರತಿಭಟಿಸಿದ ಘಟನೆ ನಡೆದಿದೆ.
ಗ್ರಾಮಕ್ಕೆ ಸಂಬಂಧಿಸಿದ ಹಳ್ಳದ ನೀರು ಎಸ್‌ಸಿ/ಎಸ್‌ಟಿ ಕಾಲೋನಿಗೆ ನುಗ್ಗಿ ಅಲ್ಲಿ ವಾಸಿಸುವ ಜನರ ಜೀವನ ಅಸ್ತವ್ಯಸ್ಥಗೊಂಡಿದ್ದು, ಮಕ್ಕಳಿಗೆ, ವಯಸ್ಕರಿಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದ್ದು, ಈ ವಿಷಯವಾಗಿ ಸುಮಾರು ವರ್ಷಗಳಿಂದ ಗ್ರಾಮ ಪಂಚಾಯತ್ ಹಲವಾರು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿರುವುದಿಲ್ಲ. ಓತಿಹಾಳ ಗ್ರಾಮಕ್ಕೆ ಸಮೀಪವಿರುವ ಹಳ್ಳದ ನೀರು ಹಾಗೂ ಜಮೀನುಗಳ ನೀರು ಸ್ವಲ್ಪ ಮಳೆಯಾದರೂ ಸಾಕು ಹಳ್ಳದ ಸಮೀಪ ಇರುವ ಮನೆಗಳಿಗೆ ಜಮೀನಿನ ನೀರು ಹಾಗೂ ಹಳ್ಳದ ನೀರು ಒತ್ತಡದಿಂದ ನೀರು ನುಗ್ಗಿ ಜನರ ಜೀವನ ಅಸ್ತವ್ಯಸ್ಥವಾಗುತ್ತಿದ್ದು, ಕೂಡಲೇ ತಾಲೂಕು ದಂಡಾಧಿಕಾರಿಗಳು ಈ ಸಮಸ್ಯೆಯ ಕುರಿತು ಎರಡು ದಿನಗಳ ಒಳಗಾಗಿ ನಮ್ಮ ಸಮಸ್ಯೆ ಪರಿಹರಿಸಿ ಕೊಡಬೇಕೆಂದು ಪ್ರತಿಭಟನಾಕಾರರು ತಹಶೀಲ್ದಾರರಿಗೆ ಮನವಿ ಮಾಡಿಕೊಂಡರು.
ಈ ವೇಳೆ ಗ್ರಾಮಸ್ಥರ ಮನವಿಯನ್ನು ಆಲಿಸಿದ ಬಳಿಕ ತಹಶೀಲ್ದಾರ್ ಕರೆಪ್ಪ ಬೆಳ್ಳಿ ದೂರವಾಣಿ ಮೂಲಕ ತಾಪಂ ಇಒ ಅವರಿಗೆ ಗ್ರಾಮದ ಸಮಸ್ಯೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ನಂತರ ಇನ್ನೆಡರು ದಿನಗಳೊಳಗಾಗಿ ಗ್ರಾಮಕ್ಕೆ ಭೇಟಿ ನೀಡಿ ಅದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.
ಈ ವೇಳೆ ರಾಜು ವಠಾರ, ಹವಣಪ್ಪ ನಾಟೀಕಾರ, ಏಕನಾಥ ದ್ವಾಶ್ಯಾಳ, ಸಿದ್ದು ವಠಾರ, ವಿಜಯ ಕಡಕೋಳ, ಪ್ರಶಾಂತ ವಠಾರ, ಮೌನೇಶ ಕತ್ನಳ್ಳಿ, ಸತ್ಯವ್ವ ಕತ್ನಳ್ಳಿ, ಪುತಳವ್ವ ವಠಾರ, ಯಲ್ಲಪ್ಪ ಮಾದರ, ಯಲ್ಲವ್ವ ವಠಾರ, ಮಲ್ಲಮ್ಮ ಬೂದಿಹಾಳ, ಸುಮಂಗಲಾ ಬೂದಿಹಾಳ ಸರಸ್ವತಿ ಕತ್ನಳ್ಳಿ ಸೇರದಂತೆ ಗ್ರಾಮಸ್ಥರು ಇದ್ದರು.