ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ರಾವುತರಾಯ ಮಲ್ಲಯ್ಯ ಜಾತ್ರಾ ಮಹೋತ್ಸವಕ್ಕೆ ತುಂಬು ಸಹಕಾರ ನೀಡಿ ಯಶಸ್ವಿಗೊಳಿಸಿದ ಕಮಿಟಿ ಸದಸ್ಯರು ಹಾಗೂ ಪೊಲೀಸ್ ಸಿಬ್ಬಂದಿಯ ಕಾರ್ಯ ಶ್ಲಾಘನೀಯ ಎಂದು ವಿಜಯಪುರ ಅನುಗ್ರಹ ಆಸ್ಪತ್ರೆಯ ಖ್ಯಾತ ನೇತ್ರತಜ್ಞ ಪ್ರಭುಗೌಡ ಲಿಂಗದಳ್ಳಿ(ಚಬನೂರ) ಹೇಳಿದರು.
ಪಟ್ಟಣದ ಮಲ್ಲಯ್ಯ ದೇವಸ್ಥಾನದ ಆವರಣದಲ್ಲಿ ಉದ್ದಿಮೆದಾರರಾದ ಕಾಶೀನಾಥ ಸಾಲಕ್ಕಿ ಹಾಗೂ ಕೆ.ಎಸ್.ಕೋರಿ ಹಮ್ಮಿಕೊಂಡ ಜಾತ್ರಾ ಕಮಿಟಿ ಸದಸ್ಯರ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ದೇವಸ್ಥಾನದ ಅಭಿವೃದ್ಧಿ ಸಹಿತ ಜಾತ್ರೆಯ ಅಂಗವಾಗಿ ಯೋಜನೆ ರೂಪಿಸಿ ಯಾವುದೇ ಅವಘಡಗಳಿಗೆ ಅವಕಾಶ ನೀಡದೇ ಯಶಸ್ವಿಗೊಳಿಸಿದ ಸಮಿತಿಯ ಕಾರ್ಯವನ್ನು ಗುರುತಿಸಿ ಅಭಿನಂದಿಸುತ್ತಿರುವುದು ಉತ್ತಮ ಕಾರ್ಯ ಎಂದರು.
ನಿವೃತ್ತ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಕೆ.ಕುದರಿ, ಚೈತನ್ಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಗುರುರಾಜ ಕುಲಕರ್ಣಿ ಹಾಗೂ ಸನ್ಮಾನಿತರಾದ ಕಮಿಟಿಯ ಖಜಾಂಚಿ ಕಾಶೀನಾಥ ತಳಕೇರಿ, ಸದಸ್ಯ ಪ್ರಕಾಶ ಮಲ್ಲಾರಿ,ಉಪಾಧ್ಯಕ್ಷ ಶ್ರೀಧರ ನಾಡಗೌಡ ಅಧ್ಯಕ್ಷ ವಿನೋದಗೌಡ ಪಾಟೀಲ ಮಾತನಾಡಿದರು. ಇದೇ ಸಂದರ್ಭದಲ್ಲಿ ಕಮಿಟಿಯ ೨೮ ಜನ ಸದಸ್ಯರನ್ನು ಸನ್ಮಾನಿಸಲಾಯಿತು.
ಪಿಎಸ್‌ಐ ಸಚೀನ ಆಲಮೇಲಕರ, ಕಾಸುಗೌಡ ಬಿರಾದಾರ(ಜಲಕತ್ತಿ), ಪಿ.ಎಸ್.ಮಿಂಚನಾಳ, ಬಾಬುಗೌಡ ಪಾಟೀಲ, ಯಲಗೂರೇಶ ದೇವೂರ, ಗುಂಡು ಕೋರಿ, ಸಂಗಪ್ಪಣ್ಣ ತಡವಲ್, ಮಲ್ಲು ಕೋರಿ, ಶಿವನಗೌಡ ಪಾಟೀಲ, ಸಿದ್ಧನಗೌಡ ಪಾಟೀಲ, ವ್ಹಿ.ಜಿ.ಕೋರಿ, ಶಶಿಧರ ತಾಳಿಕೋಟಿ, ಶರಣಗೌಡ ಅಂಗಡಿ, ಎಸ್.ಎಮ್.ಬೆನಕನಹಳ್ಳಿ, ಶಾಂತಪ್ಪ ಪಡನೂರ ಎಸ್.ಕೆ.ಸುರುಪೂರ ವಿನೋದ ನಾಡಗೌಡ, ಈರಣ್ಣ ವಸ್ತçದ, ಶಂಕರ ಜಮಾದಾರ, ರವಿ ವಡ್ಡೋಡಗಿ, ಸಂತೋಷ ಸಾಲಕ್ಕಿ, ಕಾಸು ಮೇಲಿನಮನಿ, ಅನೀಲ ಪಾಟೀಲ, ರಾಜು ಮೆಟಗಾರ, ಶ್ರೀನಿವಾಸ ಕುಲಕರ್ಣಿ, ಬಾಬುಗೌಡ ಏಳಕೋಟಿ ಸಹಿತ ಕಮಿಟಿಯ ಸದಸ್ಯರು ಇದ್ದರು.