ವಿಜಯಪುರ: ಭಾರತ ದೇಶ ಕಂಡ ಶ್ರೇಷ್ಠ ಸಂತರು, ನಡೆದಾಡುವ ದೇವರಾಗಿದ್ದ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಆತ್ಯಾತ್ಮೀಕ ಸಾಹಿತ್ಯ ಇಡೀ ದೇಶಕ್ಕೆ ಪರಿಚಯಿಸಲು, ಶ್ರೀಗಳು ರಚಿಸಿದ ಗ್ರಂಥಗಳನ್ನು ಹಿಂದಿ ಸೇರಿದಂತೆ ಇತರೆ ಭಾಷೆಗೆ ಭಾಷಾಂತರಿಸಿ, ಮುದ್ರಣ ಮಾಡಲು ಸಿದ್ದಸಿರಿ ಸೌಹಾರ್ದ ಸಹಕಾರಿ ಸಂಘದಿಂದ ರೂ.10 ಲಕ್ಷ ನೀಡುವುದಾಗಿ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು ಘೋಷಿಸಿದರು.
ವಿಜಯಪುರ ಜ್ಞಾನ ಯೋಗಾಶ್ರಮದಲ್ಲಿ ಶುಕ್ರವಾರ ನಡೆದ ಜ್ಞಾನ ಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳವರ ಗುರು ನಮನ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ತಿಳಿಸಿದರು.
ಅಲ್ಲದೆ, ಶ್ರೀ ಸಿದ್ದೇಶ್ವರ ಲೋಕ ಕಲ್ಯಾಣ ಚಾರಿಟೇಬಲ್ ಟ್ರಸ್ಟ್ ಅಡಿ ಶ್ರೀ ಸಿದ್ದೇಶ್ವರ ಶ್ರೀಗಳ ಹೆಸರಿನಲ್ಲಿ ಜನ್ಮ ತಾಳಿರುವ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಜ್ಞಾನ ಯೋಗಾಶ್ರಮದ ಸ್ವಾಮೀಜಿಗಳಿಗೆ ಹಾಗೂ ಸಾಧಕರ ಆರೋಗ್ಯದಲ್ಲಿ ವ್ಯತ್ಯಾಸವಾದರೆ ಉಚಿತವಾಗಿ ಚಿಕಿತ್ಸೆ ನೀಡಲಾಗುವುದು. ಅದಕ್ಕಾಗಿ ಆರೋಗ್ಯ ಕಾರ್ಡ್ ಕೊಡಲಾಗುವುದು ಎಂದು ಹೇಳಿದರು.
ಸಿದ್ದೇಶ್ವರ ಶ್ರೀ ಗ್ರಂಥಗಳ ಭಾಷಾಂತರಕ್ಕೆ ಶಾಸಕ ಯತ್ನಾಳರಿಂದ ರೂ.10ಲಕ್ಷ ಘೋಷಣೆ
Related Posts
Add A Comment